ಚೆನ್ನೈ'ಕಿಂಗ್ಸ್' ವಿರುದ್ಧ ಕದನಕ್ಕೆ ಬೆಂಗಳೂರು 'ರಾಯಲ್ಸ್'ಸಜ್ಜು
ಪುಣೆ, ಮೇ.21: ಐಪಿಎಲ್ 2015ರ ಎಲಿಮಿನೇಟರ್ 'ರಾಯಲ್ಸ್ ಕದನ' ದಲ್ಲಿ ಸುಲಭವಾಗಿ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 71 ರನ್ಗಳ ಅಂತರದಿಂದ ಸೋಲಿಸಿ ಕ್ವಾಲಿಫೈಯರ್ 2 ಅಥವಾ ಉಪಾಂತ್ಯ ಪ್ರವೇಶಿಸಿದೆ.
ಐಪಿಎಲ್ ವಿಶೇಷ ಪುಟ | |
ಆರ್ಸಿಬಿ ನೀಡಿದ 181 ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 19 ಓವರ್ಗಳಲ್ಲಿ ಕೇವಲ 109 ರನ್ ಗಳಿಸಿ ಸರ್ವಪತನ ಕಂಡಿತು. ರಾಜಸ್ಥಾನ ಪರ ಅಜಿಂಕ್ಯ ರಹಾನೆ ಬಿಟ್ಟರೆ ಉಳಿದವರು ಕೊಂಚವೂ ಪ್ರತಿರೋಧ ಒಡ್ಡಲಿಲ್ಲ. ಆರ್ಸಿಬಿ ಪರ ಉತ್ತಮ ಬೌಲಿಂಗ್ ಮಾಡಿದ ಅರವಿಂದ್, ಹರ್ಷಲ್, ಚಾಹಲ್, ವೀಸೆ ತಲಾ 2 ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ (ಮೇ.22) ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೇ.22 ರಂದು ಎದುರಿಸಲಿದೆ. ರಾಂಚಿಯಲ್ಲಿ ನಡೆಯುವ ಈ ಪಂದ್ಯ ರೋಚಕವಾಗಿರುವ ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ಗೆದ್ದವರು ಮೇ.24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಅಂತಿಮ ಹಣಾಹಣಿಯಲ್ಲಿ ಮುಂಬೈ ತಂಡವನ್ನು ಎದುರಿಸಲಿದ್ದಾರೆ.

ಟುಸ್ ಆದ ಶತಕವೀರ ಶೇನ್ ವಾಟ್ಸನ್
ಲೀಗ್ ಕೊನೆಯಲ್ಲಿ ಶತಕ ಬಾರಿಸಿ ಉತ್ತಮ ಲಯದಲ್ಲಿದ್ದ ಶೇನ್ ವಾಟ್ಸನ್ ಅವರು 2 ಬೌಂಡರಿ ಇದ್ದ 10 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಇನ್ನೊಂದೆಡೆ ಅಜಿಂಕ್ಯ ರಹಾನೆ ನೆಲಕಚ್ಚಿ ನಿಂತು ಆಡಿದರು. ರಹಾನೆ 42 ರನ್ (39ಎ, 4x4)

ರಾಜಸ್ಥಾನಕ್ಕೆ ಜೊತೆಯಾಟದ ಕೊರತೆ
181 ರನ್ ಚೇಸ್ ನಲ್ಲಿ ರಾಜಸ್ಥಾನಕ್ಕೆ ಜೊತೆಯಾಟದ ಕೊರತೆ ಎದುರಾಯಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡು, ಎದುರಾಳಿ ಮುಂದೆ ಮಂಡಿಯೂರಿದರು.

ಆರ್ ಸಿಬಿ ಕರಾರುವಾಕ್ ಬೌಲಿಂಗ್
ಆರ್ ಸಿಬಿ ಪರ ಸ್ಟಾಕ್ 1 ವಿಕೆಟ್ ಪಡೆದರೆ, ಎಸ್ ಅರವಿಂದ್ 20 ಕ್ಕೆ 2, ಹರ್ಷಲ್ ಪಟೇಲ್ 15 ಕ್ಕೆ 2, ಚಾಹಲ್ 20 ಕ್ಕೆ 2, ಡೇವಿಡ್ ವೀಸೆ 32 ಕ್ಕೆ 2 ವಿಕೆಟ್ ಪಡೆದು ರಾಜಸ್ಥಾನದ ಬ್ಯಾಟಿಂಗ್ ಬೆನ್ನಲುಬು ಮುರಿದರು.

ಮೊದಲ ಬ್ಯಾಟಿಂಗ್ ಲಾಭ ಪಡೆದ ಆರ್ ಸಿಬಿ
ಮೊದಲ ಬ್ಯಾಟಿಂಗ್ ಲಾಭ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 180/4 ಸ್ಕೋರ್ ಮಾಡಿತು. ಕ್ರಿಸ್ ಗೇಲ್ ಬಿರುಸಿನ ಆರಂಭ ನೀಡಿದರು. ಧವಳ್ ಕುಲಕರ್ಣಿ ಬೌಲಿಂಗ್ ನಲ್ಲಿ ಭಾರಿ ಹೊಡೆತಕ್ಕೆ ಯತ್ನಿಸಿ ಬೋಲ್ಡ್ ಆದರು. 26 ಎಸೆತಗಳಲ್ಲಿ 27ರನ್ (4x4, 1x6)

ಗೇಲ್ ವಿಕೆಟ್ ಪಡೆದ ಕುಲಕರ್ಣಿ
ಕ್ರಿಸ್ ಗೇಲ್ ವಿಕೆಟ್ ಪಡೆದ ಕುಲಕರ್ಣಿ ಸಂಭ್ರಮಿಸಿದ್ದು ಹೀಗೆ.. 4 ಓವರ್ ಗಳಲ್ಲಿ 28ರನ್ನಿತ್ತು 2 ವಿಕೆಟ್ ಪಡೆದ ಕುಲಕರ್ಣಿ.

ವರವಾದ ಎಬಿಡಿ-ಮನ್ದೀಪ್ ಜೊತೆಯಾಟ
ಆರ್ ಸಿಬಿ ಪಾಲಿಗೆ ಎಬಿಡಿ-ಮನ್ದೀಪ್ ಜೊತೆಯಾಟ ವರವಾಯಿತು. ಇಬ್ಬರು ಹೊಡಿ ಬಡಿ ಆಟದ ಜೊತೆಗೆ ಜವಾಬ್ದಾರಿಯುತವಾಗಿ ಆಡಿ ವಿಕೆಟ್ ಉಳಿಸಿಕೊಂಡಿದ್ದರಿಂದ ತಂಡದ ಮೊತ್ತ ಹೆಚ್ಚಿದ್ದಲ್ಲದೆ, ಆರ್ ಆರ್ ಗೆ ನಡುಕ ಹುಟ್ಟಿತು.

ವಿರಾಟ್ ಕೊಹ್ಲಿ ಕಳಪೆ ಆಟ
ನಾಯಕ ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 12ರನ್ ಗಳಿಸಿ ಕುಲಕರ್ಣಿಗೆ ರಿಟರ್ನ್ ಕ್ಯಾಚಿತ್ತು ಔಟಾಗಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು.

ಮನದೀಪ್ ಸಿಂಗ್ ಮನಮೋಹಕ ಆಟ
34 ಎಸೆತಗಳಲ್ಲಿ 54 ರನ್ ಅಜೇಯ (7x4,2x6) ಗಳಿಸಿ ತಂಡಕ್ಕೆ ಆಸರೆಯಾದ ಮನದೀಪ್ ಆಟಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಎಬಿಡಿ ವಿಲೆಯರ್ಸ್ ಅದ್ಭುತ ಆಟ
38 ಎಸೆತಗಳಲ್ಲಿ 66 ರನ್ ಚೆಚ್ಚಿದ ಎಬಿ ಡಿ ವಿಲೆಯರ್ಸ್ (4x4,4x6) ಆಟ ಆರ್ ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು. ಎಬಿಡಿಯನ್ನು ಪಂದ್ಯಶ್ರೇಷ್ಠ ಎಂದು ಗೌರವಿಸಲಾಯಿತು.

ರಾಜಸ್ಥಾನ್ ರಾಯಲ್ಸ್ ಬೌಲಿಂಗ್
ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ನ ಶಕ್ತಿಯಾಗಿದ್ದ ಕ್ರಿಸ್ ಮೊರಿಸ್, ಫಾಲ್ಕ್ನರ್ ಕಳಪೆ ಬೌಲಿಂಗ್ ನಿಂದಾಗಿ ಆರ್ ಸಿಬಿ ಬೃಹತ್ ಮೊತ್ತ ಕಲೆ ಹಾಕಿತು. ಬಿನ್ನಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಏನು ಸಾಧಿಸಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications