ಐಪಿಎಲ್ 2015: ಪ್ಲೇ ಆಫ್ ಪಂದ್ಯಗಳಿಗೆ ಇಲ್ಲಿದೆ ಗೈಡ್
ಮುಂಬೈ, ಮೇ .18: ಇಂಡಿಯನ್ ಪ್ರಿಮಿಯರ್ ಲೀಗ್ 8 (ಐಪಿಎಲ್ 2015) ರ ಲೀಗ್ ಹಂತದ 56 ಪಂದ್ಯಗಳು ಭಾನುವಾರ ರಾತ್ರಿಗೆ ಮುಕ್ತಾಯಗೊಂಡಿವೆ. ನಾಲ್ಕು ತಂಡಗಳು ಟೂರ್ನಿಯಿಂದ ಹೊರ ಬಿದ್ದಿದ್ದರೆ, ನಾಲ್ಕು ತಂಡಗಳು ಮುಂದಿನ ಹಂತಕ್ಕೇರಿವೆ. ಪ್ಲೇ ಆಫ್ ಹಂತದ ಪಂದ್ಯಗಳು, ವೇಳಾಪಟ್ಟಿ, ಕ್ರೀಡಾಂಗಣ ಮಾಹಿತಿ ಮಾರ್ಗದರ್ಶಿ ಇಲ್ಲಿದೆ...
ಐಪಿಎಲ್ 2015 ಟೂರ್ನಿ ಅತ್ಯಂತ ರೋಚಕತೆಗೆ ಸಾಕ್ಷಿಯಾಯಿತು. ಚೆನ್ನೈ ತಂಡವನ್ನು ಬಿಟ್ಟರೆ ಕೊನೆ ಕ್ಷಣದ ತನಕ ಪ್ಲೇ ಆಫ್ ಸೇರುವ ಉಳಿದ ಮೂರು ತಂಡಗಳ ಬಗ್ಗೆ ಕುತೂಹಲ ಮುಂದುವರೆದಿತ್ತು. [ಪ್ಲೇ ಆಫ್ ಸೇರಲು ಜಟಾಪಟಿ ಹೇಗಿತ್ತು?]

ಭಾನುವಾರ ನಡೆದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿ ಆರ್ ಸಿಬಿ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಮುಂಬೈ ಇಂಡಿಯನ್ಸ್ ತಂಡ ಆಲ್ ರೌಂಡ್ ಆಟ ಪ್ರದರ್ಶಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮನೆಗೆ ಕಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಆರ್ ಸಿಬಿಯನ್ನು ಮೂರನೇ ಸ್ಥಾನಕ್ಕೆ ದೂಡಿತು.
ಐಪಿಎಲ್ ವಿಶೇಷ ಪುಟ | ಅಂಕ ಪಟ್ಟಿ
ಮೇ.18 ಸೋಮವಾರ ಐಪಿಎಲ್ ಆಟಗಾರರಿಗೆ ವಿಶ್ರಾಂತಿ ದಿನವಾಗಿದೆ. ಮೇ. 19ರಂದು ಕ್ವಾಲಿಫೈಯರ್ 1 ಪಂದ್ಯ ನಡೆಯಲಿದೆ. ನಾಲ್ಕು ಪಂದ್ಯಗಳು ಬಾಕಿ ಉಳಿದಿದ್ದು ಮೇ.24ರಂದು ಕೋಲ್ಕತ್ತಾದಲ್ಲಿ ಫೈನಲ್ ನಡೆಯಲಿದೆ.

ಪ್ಲೇ ಆಫ್ ವೇಳಾಪಟ್ಟಿ (ಭಾರತೀಯ ಕಾಲಮಾನ ಪ್ರಕಾರ)
* ಮೇ.19 (ಮಂಗಳವಾರ) 8PM- ಕ್ವಾಲಿಫೈಯರ್ 1
* ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್
* ವಾಂಖೆಡೆ ಸ್ಟೇಡಿಯಂ, ಮುಂಬೈ
* ರಿಸರ್ವ್ ಡೇ ಮೇ 20 (4 PM)
* ಮೇ.20 (ಬುಧವಾರ) 8PM- ಎಲಿಮಿನೇಟರ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
* ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ, ಗಹುಂಜೆ, ಪುಣೆ
* ಯಾವುದೇ ರಿಸರ್ವ್ ಡೇ ಇಲ್ಲ
* ಮೇ 22 ಶುಕ್ರವಾರ 8 PM ಕ್ವಾಲಿಫೈಯರ್ 2
* ಕ್ವಾಲಿಫೈಯರ್ 1 ಸೋತ ತಂಡ ಹಾಗೂ ಎಲಿಮಿನೇಟರ್ ಗೆದ್ದ ತಂಡ (ಜೆಎಸ್ ಸಿಎ ಸ್ಟೇಡಿಯಂ, ರಾಂಚಿ)
* ಯಾವುದೇ ರಿಸರ್ವ್ ಡೇ ಇಲ್ಲ
* ಮೇ 24 ಭಾನುವಾರ 8PM ಫೈನಲ್
* ಕ್ವಾಲಿಫೈಯರ್ 1 ಗೆದ್ದ ತಂಡ vs ಕ್ವಾಲಿಫೈಯರ್ 2 ಗೆದ್ದ ತಂಡ
* ಈಡೆನ್ ಗಾರ್ಡನ್, ಕೋಲ್ಕತ್ತಾ
* ರಿಸರ್ವ್ ಡೇ 25 ಮೇ 8 PM
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications