ಬೆಂಗಳೂರು, ಮೇ.15: ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಗುರುವಾರ ರೋಚಕ ಜಯ ದಾಖಲಿಸುತ್ತಿದ್ದಂತೆ ಲೀಗ್ ಹಂತಕ್ಕೆ ಹೊಸ ತಿರುವು ಸಿಕ್ಕಿತು.
ಎರಡು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿದೆ. ಒಂದು ವೇಳೆ ಚೆನ್ನೈ ತಂಡ ಕೊನೆ ಪಂದ್ಯ ಸೋತು ಅಂಕಪಟ್ಟಿಯಲ್ಲಿ ವ್ಯತ್ಯಾಸವಾದರೂ ಚಿಂತೆ ಪಡಬೇಕಿಲ್ಲ. ಐಪಿಎಲ್ ಆಯೋಜಕರ ನಿಯಮವೇ ಹಾಗಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಇಲ್ಲಿ ತನಕ ಐಪಿಎಲ್ 8 ಲೀಗ್ ಹಂತದಲ್ಲಿ ಅತಿ ಹೆಚ್ಚು ಗೆಲುವು (8 ಪಂದ್ಯ) ಸಾಧಿಸಿರುವ ಧೋನಿ ಪಡೆಗೆ ಅಂಕಗಳ ಜೊತೆಗೆ ಉತ್ತಮ ರನ್ ಸರಾಸರಿಯೂ ಇದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ತಲುಪಿದರೆ ಇನ್ನೆರಡು ಪಂದ್ಯ ಗೆದ್ದರೆ ಸಾಕು ಕಪ್ ಎತ್ತಬಹುದು.
ಇನ್ನೊಂದೆಡೆ ಲೀಗ್ ಹಂತದಿಂದ ಪ್ಲೇ ಆಫ್ ಸೇರುವ ಉಳಿದ ಮೂರು ತಂಡಗಳು ಯಾವುದು ಎಂಬ ಕುತೂಹಲ ಮುಂದುವರೆದಿದೆ. 5 ತಂಡಗಳು ತೀವ್ರ ಸೆಣಸಾಟ ಮುಂದುವರೆಸಿವೆ.
ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಂದಿನ ಹಂತ ತಲುಪಲು ಕಾದಾಡುತ್ತಿವೆ.
ಐಪಿಎಲ್ ವಿಶೇಷ ಪುಟ | ಅಂಕಪಟ್ಟಿ
ಈ ಪೈಕಿ ಶುಕ್ರವಾರ ಸೆಣಸುತ್ತಿರುವ ಸನ್ ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಹೊರತು ಪಡಿಸಿದರೆ ಉಳಿದ ತಂಡಗಳಿಗೆ ತಲಾ ಒಂದು ಪಂದ್ಯಗಳು ಮಾತ್ರ ಉಳಿದಿವೆ.
ಅಂಕಪಟ್ಟಿಯಲ್ಲಿ ಸಮಾನ ಅಂಕಗಳು ಬಂದರೆ ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿರುತ್ತಾರೋ ಅವರು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತಾರೆ. ರನ್ ರೇಟ್ ಲೆಕ್ಕಾಚಾರ ಎನಿದ್ದರೂ ನಂತರದ ಮಾತು.
ಲೀಗ್ ಹಂತದ ಉಳಿದ ಪಂದ್ಯಗಳು
* ಪಂದ್ಯ 52: ಶುಕ್ರವಾರ (ಮೇ.15) : ಎಸ್ ಆರ್ ಎಚ್ vs ಆರ್ ಸಿಬಿ (ಹೈದರಾಬಾದ್) 8 PM [ಮ್ಯಾಚ್ ಗೈಡ್ ಓದಿ]
* ಪಂದ್ಯ 53: ಶನಿವಾರ (ಮೇ.16) : ಕಿಂಗ್ಸ್ XI ಪಂಜಾಬ್ vs ಸಿಎಸ್ ಕೆ (ಮೊಹಾಲಿ) 4 PM
* ಪಂದ್ಯ 54: ಶನಿವಾರ (ಮೇ.16) : ರಾಜಸ್ಥಾನ್ ರಾಯಲ್ಸ್ vs ಕೆಕೆಆರ್ (ಮುಂಬೈ) 8 PM
* ಪಂದ್ಯ 55: ಭಾನುವಾರ (ಮೇ.17) : ಡಿಡಿ vs ಆರ್ ಸಿಬಿ (ಹೈದರಾಬಾದ್) 4 PM
* ಪಂದ್ಯ 56: ಭಾನುವಾರ (ಮೇ.17) : ಎಸ್ ಆರ್ ಎಚ್ vs ಮುಂಬೈ (ಹೈದರಾಬಾದ್) 8 PM
* ಮೇ. 19ರಿಂದ ಪ್ಲೇ ಆಫ್ ಪಂದ್ಯಗಳು ಆರಂಭ. [ವೇಳಾಪಟ್ಟಿ ನೋಡಿ]
(ಒನ್ ಇಂಡಿಯಾ ಸುದ್ದಿ)