
ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ 62 ರನ್‌ಗಳ ನೆರವಿನಿಂದಾಗಿ ಬೆಂಗಳೂರು ಸತತ ಮೂರು ಸೋಲುಗಳಿಂದ ಹೊರಬಂದಿದ್ದು ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ.

131 ರನ್ ಟಾರ್ಗೆಟ್ ಕೊಟ್ಟಿದ್ದ ರಾಜಸ್ಥಾನ
ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್‌ಗಳಿಸಿ 131 ರನ್‌ಗಳ ಗುರಿಯನ್ನು ನೀಡಿತು. 16.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡ ಬೆಂಗಳೂರು ಗೆಲುವು ದಾಖಲಿಸಿತು.

ರಾಜಸ್ಥಾನ ಕಟ್ಟಿ ಹಾಕಿದ ಮಿಚೆಲ್ ಸ್ಟಾರ್ಕ್
ಉತ್ತಮ ಬೌಲಿಂಗ್ ದಾಳಿ ನಡೆಸಿದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದು ರಾಜಸ್ಥಾನ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ನೆರವಾದರು. ಹರ್ಷಲ್ ಪಟೇಲ್ 23 ರನ್ ನೀಡಿ 2 ಹಾಗೂ ಯಜುವೇಂದ್ರ ಚಹಾಲ್ 25 ರನ್ ನೀಡಿ 2 ಎರಡು ವಿಕೆಟ್ ಪಡೆದರು.

ಉತ್ತಮ ಆರಂಭ ಪಡೆದ ರಾಜಸ್ಥಾನ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಶೇನ್ ವ್ಯಾಟ್ಸನ್ ಮತ್ತು ರೆಹಾನೆ 5 ಓವರ್‌ಗೆ 36 ರನ್ ಗಳಿಸಿದರು. ರೆಹಾನೆ 18 ರನ್ ಗಳಿಸಿದ ಔಟಾದರೆ, ವ್ಯಾಟ್ಸನ್ 26 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ ಮತ್ತು ಸ್ಟೀವನ್ ಸ್ಮಿತ್ 6ನೇ ವಿಕೆಟ್‌ಗೆ 30 ರನ್ ಸೇರಿಸಿ ತಂಡ 130 ರನ್ ಗಳಿಸಲು ನೆರವಾದರು.

ಕೊಹ್ಲಿ, ಡಿವಿಲಿಯರ್ಸ್ ಜೊತೆಯಾಟ
ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 36 ರನ್ ಗಳಿಸಿದರು. ಗೇಲ್ 20 ರನ್ ಗಳಿಸಿದ್ದಾಗ ವ್ಯಾಟ್ಸನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಒಂದಾದ ಡಿವಿಲಿಯರ್ಸ್ ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 98 ರನ್‌ಗಳಿಸಿ ತಂಡವನ್ನು ಗೆಲ್ಲಿಸಿದರು.

ಮುಂದಿನ ಪಂದ್ಯಗಳು
ಉಭಯ ತಂಡಗಳಿಗೆ ಮುಂದಿನ ಪಂದ್ಯ ಏ.26ರ ಭಾನುವಾರ
* ರಾಜಸ್ಥಾನ್ ರಾಯಲ್ಸ್ - ಕೋಲ್ಕತ್ತಾ
* ರಾಯಲ್ ಚಾಲೆಂಜರ್ಸ್ ಬೆಂಗಳೂರು - ಡೆಲ್ಲಿ ಡೇರ್ ಡೆವಿಲ್ಸ್


Click it and Unblock the Notifications