ಕೆಕೆಆರ್ ವಿರುದ್ಧ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದ ಡೆಲ್ಲಿ
ನವದೆಹಲಿ, ಮೇ 01: ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆಲ್ ರೌಂಡ್ ಆಟದ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27ರನ್ ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಆರಂಭಿಕ ಹಿನ್ನಡೆ ನಂತರ ಡೆಲ್ಲಿ ತಂಡ ಕರುಣ್ ನಾಯರ್ 68 ರನ್( 50 ಎಸೆತ, 9X4, 1X6) ಬ್ಯಾಟಿಂಗ್ ಹಾಗೂ ವಿಶ್ವ ಟಿ20 ವಿಶ್ವಕಪ್ ಹೀರೋ ಕಾಲೋಸ್ ಬ್ರಾಥ್ವೇಟ್ 34 ರನ್(11 ಎಸೆತ, 3X4, 3X6) ಆಟದ ನೆರವಿನಿಂದ 186/8 ಸ್ಕೋರ್ ಮಾಡಿತು. []
ಕೆಕೆಆರ್ ತಂಡ 18.3 ಓವರ್ ಗಳಲ್ಲಿ 159 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ಬೌಲಿಂಗ್ ನಲ್ಲೂ ಮಿಂಚಿದ ಬ್ರಾಥ್ ವೇಟ್ 47ಕ್ಕೆ 3 ವಿಕೆಟ್ ಪಡೆದರು.

ಕೆಕೆಆರ್ ಪರ ಏಕಾಂಗಿ ಹೋರಾಟ ನಡೆಸಿದ ರಾಬಿನ್ ಉತ್ತಪ್ಪ 72 ರನ್( 52 ಎಸೆತ, 6 X4, 2X6) ಉತ್ತಮ ಪ್ರದರ್ಶನ ನೀಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಡೆಲ್ಲಿ ತಂಡ ಉತ್ತಮ ಗೆಲುವು ಸಾಧಿಸಿ ಗಮನ ಸೆಳೆಯಿತು. [ಗುಜರಾತಿಗೆ ಡೆವಿಲ್ ನಂತೆ ಕಾಡಿದ ಮೋರಿಸ್ ತಿಂದಿದ್ದೇನು?]
ಡೆಲ್ಲಿ ತಂಡ ಕ್ವಿಂಟಾನ್ ಡಿಕಾಕ್(1) ಹಾಗೂ ಶ್ರೇಯಸ್ ಅಯ್ಯರ್(0), ಸಂಜು ಸ್ಯಾಮ್ಸನ್(15) ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕರುಣ್ ನಾಯರ್ ಹಾಗೂ ಇಂಗ್ಲೆಂಡಿನ ಸ್ಯಾಮ್ ಬಿಲ್ಲಿಂಗ್ಸ್ 4ನೇ ವಿಕೆಟ್ ಗೆ 105 ರನ್ ಕಲೆ ಹಾಕಿ ಇನ್ನಿಂಗ್ಸ್ ಕಟ್ಟಿದರು.[ಐಪಿಎಲ್ 2016 : ಹೊರ ಹೋದ ಆಟಗಾರರ ಪಟ್ಟಿ]
ರನ್ ಚೇಸ್ ಗೆ ಇಳಿದ ಕೆಕೆಆರ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಗಂಭೀರ್ 6, ಪಿಶೂಷ್ ಚಾವ್ಲಾ 8, ಯೂಸುಫ್ ಪಠಾಣ್ 10, ಸೂರ್ಯ ಕುಮಾರ್ ಯಾದವ್ 21ರನ್ ಗಳಿಸಿ ಔಟಾದರು. 5 ವಿಕೆಟ್ ಕಳೆದುಕೊಂಡು 107ರನ್ ಗಳಿಸಿದ್ದ ಕೆಕೆಆರ್ ಕೊನೆಗೆ ಗೆಲುವಿನ ಗಡಿ ದಾಟಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications