ಧೋನಿ ಪಡೆಗೆ ಮಣ್ಣು ಮುಕ್ಕಿಸಿದ ರೈನಾರ ಹುಡುಗರು
ಅಹಮದಾಬಾದ್, ಏಪ್ರಿಲ್ 15: ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಜೋಡಿ ಜೀವದಂತೆ ಇದ್ದ ಧೋನಿ ಹಾಗೂ ರೈನಾ ಅವರು ಪರಸ್ಪರ ಎದುರಾಗಿ ಕಾದಾಡುವಂಥ ಪರಿಸ್ಥಿತಿಯನ್ನು ಐಪಿಎಲ್ 9 ತಂದಿದೆ. ಎಂಎಸ್ ಧೋನಿ ಸಾರಥ್ಯದ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡವನ್ನು ರೈನಾ ಅವರ ಗುಜರಾತ್ ಲಯನ್ಸ್ ತಂಡ 7 ವಿಕೆಟ್ ಗಳಿಂದ ಸೋಲಿಸಿ ವಿಜಯದ ನಗೆ ಬೀರಿದೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಗುಜರಾತ್ ಪರ ಆರೋನ್ ಫಿಂಚ್50 ರನ್( 36 ಎಸೆತಗಳು, 7 X4, 2X6) ಮತ್ತು ಬ್ರೆಂಡನ್ ಮೆಕ್ಕಲಂ 49 ರನ್,(31 ಎಸೆತಗಳು, 3X4, 3X6) ಭರ್ಜರಿ ಆಟ ಪ್ರದರ್ಶಿಸಿ ತಂಡಕ್ಕೆ ಎರಡನೇ ಜಯ ತಂದುಕೊಟ್ಟರು. []

ಇದಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಧೋನಿ ಅವರ ಪುಣೆ ತಂಡ ಮೊದಲ 10 ಓವರ್ಗಳಲ್ಲಿಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. [ಅಂಕ ಪಟ್ಟಿ]
ಆದರೆ, ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ಗೆ 163 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗುರಿಯನ್ನು ಗುಜರಾತ್ ತಂಡ 18 ಓವರ್ಗಳಲ್ಲಿ 3 ವಿಕೆಟ್ ಕಳೆದು ಕೊಂಡು ಸಾಧಿಸಿತು.

ಫಿಂಚ್, ಮೆಕ್ಕಲಂ ಅಬ್ಬರದ ಬ್ಯಾಟಿಂಗಿಗೆ ನಾಯಕ ಸುರೇಶ್ ರೈನಾ (24), ಬ್ರಾವೊ ಅಜೇಯ 22 ಸಾಥ್ ನೀಡಿ ರನ್ ಚೇಸ್ ಸುಲಭ ಮಾಡಿದರು. ಧೋನಿ ಅವರ ಯಾವುದೇ ತಂತ್ರಗಾರಿಕೆ ಫಲ ನೀಡಲಿಲ್ಲ.
ಪುಣೆ ಪರ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ 69 ರನ್(43 ಎಸೆತಗಳು, 5X4, 4X6) ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಮನಸ್ಸು ಮಾಡಲಿಲ್ಲ. ಆರಂಭಿಕ ಆಟಗಾರ ಅಜಿಂಕ್ಯ ರಹಾನೆ 21 ರನ್ ಗಳಿಸಿದರು. ಮಿಕ್ಕಂತೆ ಕೆವಿನ್ ಪೀಟರ್ಸೆನ್(37), ನಾಯಕ ಧೋನಿ ಅಜೇಯ 22ರನ್, 10ಎಸೆತ, 2 x4, 1x6) ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications