Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 10 ಫೈನಲ್ : ಮುಂಬೈ ವಿರುದ್ಧ ಪುಣೆ ಮೇಲುಗೈ ಸಾಧ್ಯತೆ!

ಹೈದರಾಬಾದ್, ಮೇ 21 : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಮೇ 21ರಂದು ರಾತ್ರಿ ನಡೆಯಲಿರುವ ಐಪಿಎಲ್ 10ರ ಫೈನಲ್ ನಲ್ಲಿ ಮುಂಬೈ ವಿರುದ್ಧ ಪುಣೆ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಮಹಾರಾಷ್ಟ್ರ ಡರ್ಬಿಯಲ್ಲಿ ಅಂಕಿ ಅಂಶಗಳ ಪ್ರಕಾರ ಪುಣೆ ದೈತ್ಯ ಪ್ರತಿಭೆ ತೋರುವ ಲಕ್ಷಣಗಳಿವೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 19) ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಸೆಣೆಸಲಿದೆ.[ಐಪಿಎಲ್ 10 ಫೈನಲ್ : ಪುಣೆ ವಿರುದ್ಧ ಮುಂಬೈಗೆ ಆರಂಭಿಕ ಆಘಾತ!]

ಕ್ವಾಲಿಫೈಯರ್ 1ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೇ ಜಯ ದಾಖಲಿಸಿದ್ದ ಪುಣೆ ತಂಡ ಫೈನಲ್ ತಲುಪಿತ್ತು. ಮೇ21ರ ಭಾನುವಾರದಂದು ಹೈದರಾಬಾರಿನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

ಮುಂಬೈನಲ್ಲಿ ಮೂರು ಪ್ರಮುಖ ಆಲ್ ರೌಂಡರ್ ಗಳಿದ್ದರೂ ಪುಣೆ ತಂಡಕ್ಕೆ ಭರ್ಜರಿ ಬ್ಯಾಟಿಂಗ್ ಬಲವಿದೆ. ಸ್ಟೀವ್ ಸ್ಮಿತ್ (421), ರಾಹುಲ್ ತ್ರಿಪಾಠಿ (388), ಅಜಿಂಕ್ಯ ರಹಾನೆ (338) ಉತ್ತಮ ಲಯದಲ್ಲಿದ್ದಾರೆ.

ಪುಣೆ ಮೇಲುಗೈ ಏಕೆ?:

ಪುಣೆ ಮೇಲುಗೈ ಏಕೆ?:

ಈಗಾಗಲೆ ಲೀಗ್ ಹಂತ ಹಾಗೂ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೇಲೆ ಜಯ ಗಳಿಸಿದ ಆತ್ಮವಿಶ್ವಾಸ ಹೊಂದಿರುವ ಪುಣೆ ತಂಡವು ಫೈನಲ್ ನಲ್ಲಿ ಕೂಡಾ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಆರಂಭಿಕ ಮೂವರು ಬ್ಯಾಟ್ಸ್ ಮನ್ ಅಲ್ಲದೆ ಧೋನಿ, ಮನೋಜ್ ತಿವಾರಿ ಕೂಡಾ ಲಯಕ್ಕೆ ಮರಳಿದ್ದಾರೆ. ಪೊಲ್ಲಾರ್ಡ್ , ಪಾರ್ಥೀವ್ ಮೆಲೆ ಹೆಚ್ಚಿನ ಅವಲಂಬಿತವಾಗಿರುವ ಮುಂಬೈಗೆ ಸರಿಯಾದ ಪ್ಲ್ಯಾನ್ ಇಲ್ಲ.

ಫೈನಲ್ ಪಂದ್ಯ ವೀಕ್ಷಣೆಗೆ ವಿವರ

ಫೈನಲ್ ಪಂದ್ಯ ವೀಕ್ಷಣೆಗೆ ವಿವರ

ಮೇ 21, ಫೈನಲ್ 8 PM IST - ಹೈದರಾಬಾದ್(ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ)
* ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಮುಂಬೈ ಇಂಡಿಯನ್ಸ್
* ಮೇ 22(ಸೋಮವಾರ) ರಿಸರ್ವ್ ದಿನ
* ವಾಹಿನಿಗಳು: ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿ, ಸೋನಿ ಮ್ಯಾಕ್ಸ್, ಸೋನಿ ಇಎಸ್ ಪಿಎನ್, ಸೋನಿ ಕಿಕ್ಸ್
* ಆನ್ ಲೈನ್ : ಹಾಟ್ ಸ್ಟಾರ್.ಕಾಂ(5 ನಿಮಿಷ ವಿಳಂಬ)

ಪುಣೆ ವಿರುದ್ಧ ಮುಂಬೈ ಬಲಾಬಲ

ಪುಣೆ ವಿರುದ್ಧ ಮುಂಬೈ ಬಲಾಬಲ

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ 2 ಬಾರಿ ಕಪ್ (2013, 2015) ಎತ್ತಿದೆ. ಡೆಕ್ಕನ್ ಚಾರ್ಜರ್ಸ್ ಪರ ಆಡಿ ಒಮ್ಮೆ ಕಪ್ ಎತ್ತಿದ್ದಾರೆ. ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಮುಂಬೈ ತಂಡ ನೂರಕ್ಕೆ ನೂರು ಫಲಿತಾಂಶ ದಾಖಲೆ ಹೊಂದಿದೆ. ಸ್ಮಿತ್ ಗೆ ಮೊದಲ ಫೈನಲ್ ಹಾಗೂ ಪುಣೆ ತಂಡ ಕೂಡಾ ಮೊದಲ ಬಾರಿಗೆ ಮುಂಬೈ ತಂಡವನ್ನು ಫೈನಲ್ ನಲ್ಲಿ ಎದುರಿಸುತ್ತಿದೆ.

ಸ್ಮಿತ್ ಅವರಿಗೆ ಧೋನಿ ಬಲ

ಸ್ಮಿತ್ ಅವರಿಗೆ ಧೋನಿ ಬಲ

7ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಬಾಕಿ ಉಳಿದ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಬಾರಿ ಮುಖಾಮುಖಿಯಾದ ಅನುಭವ ಧೋನಿಗಿದೆ. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಸ್ಟೀವ್ ಸ್ಮಿತ್ ಅವರಿಗೆ ಧೋನಿ ಬಲ ಸಿಗಲಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ XI

ಮುಂಬೈ ಇಂಡಿಯನ್ಸ್ ಸಂಭಾವ್ಯ XI

ಲೆಂಡ್ಲ್ ಸಿಮನ್ಸ್, ಪಾರ್ಥೀವ್ ಪಟೇಲ್, ರೋಹಿತ್ ಶರ್ಮ, ಅಂಬಟಿ ರಾಯುಡು, ಕಿರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕರಣ್ ಶರ್ಮ, ಲಸಿತ್ ಮಾಲಿಂಗ, ಜಸ್ ಪ್ರೀತ್ ಬೂಮ್ರಾ, ಮಿಚೆಲ್ ಜಾನ್ಸನ್

ರೈಸಿಂಗ್ ಪುಣೆ ಸೂಪರ್ ಜೈಂಟ್ ಸಂಭಾವ್ಯ XI

ರೈಸಿಂಗ್ ಪುಣೆ ಸೂಪರ್ ಜೈಂಟ್ ಸಂಭಾವ್ಯ XI

ರಾಹುಲ್ ತ್ರಿಪಾಠಿ, ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್, ಮನೋಜ್ ತಿವಾರಿ, ಎಂಎಸ್ ಧೋನಿ, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಆಡಂ ಝಂಪಾ, ಜಯದೇವ್ ಉನದ್ಕತ್, ಲಾಕಿ ಫರ್ಗುಸನ್

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+