ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1 ರನ್ನಿಂದ ಪುಣೆಯನ್ನು ಸೋಲಿಸಿದ ಮುಂಬೈ- ಐಪಿಎಲ್ 10 ಚಾಂಪಿಯನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 10ನೇ ಅಂತಿಮ ಹಣಾಹಣಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು 1 ರನ್ ನಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಕುಣಿದಾಡಿದೆ.

By Mahesh

ಹೈದರಾಬಾದ್, ಮೇ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 10ನೇ ಅಂತಿಮ ಹಣಾಹಣಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವನ್ನು 1 ರನ್ ನಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಕುಣಿದಾಡಿದೆ.

ಪುಣೆ ಚೇಸಿಂಗ್: ಮುಂಬೈ ನೀಡಿದ್ದ 130 ರನ್ ಗುರಿಯನ್ನು ಬೆನ್ನು ಹತ್ತಿದ ಪುಣೆ ಒಂದು ರನ್ನಿಂದ ಪಂದ್ಯವನ್ನು ಕಳೆದುಕೊಂಡಿದೆ.
* ಕೊನೆ ಓವರ್ ನಲ್ಲಿ 6 ಎಸೆತಗಳಲ್ಲಿ 11ರನ್ ಗಳಿಸಬೇಕಿದ್ದ ಪುಣೆ 10ರನ್ ಗಳಿಸಿ ಸೊಲೊಪ್ಪಿಕೊಂಡಿತು.
* ಪುಣೆ ನಾಯಕ 51 ರನ್ ಗಳಿಸಿ ಔಟಾದಾಗ 3 ಎಸೆತಗಳಲ್ಲಿ 7ರನ್ ಬೇಕಿತ್ತು. ಆದರೆ, ಮನೋಜ್ ತಿವಾರಿ ವಿಕೆಟ್ ಕೂಡಾ ಜಾನ್ಸನ್ ಗಳಿಸಿ ಆಘಾತ ನೀಡಿದರು.
* ಕೊನೆಗೆ ಪಂದ್ಯ ಟೈ ಆಗುವ ಲಕ್ಷಣಗಳು ಕಂಡು ಬಂದಿತ್ತು. ಆದರೆ, ಕೊನೆ ಎಸೆತದಲ್ಲಿ ಮೂರನೇ ರನ್ ಕದಿಯಲು ಯತ್ನಿಸಿದ ಡಾನ್ ಕ್ರಿಶ್ಚಿಯನ್ ಅವರು ಕೃನಾಲ್ ಎಸೆತ ಚೆಂಡಿಗೆ ರನೌಟ್ ಆದರು. ಪುಣೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 128ರನ್ ಮಾತ್ರ ಗಳಿಸಿತು.

* ಇದಕ್ಕೂ ಮುನ್ನ ಅಜಿಂಕ್ಯ ರಹಾನೆ 38 ಎಸೆತಗಳಲ್ಲಿ 44ರನ್ ಹಾಗೂ ಸ್ಮಿತ್ 50 ಎಸೆತಗಳಲ್ಲಿ 51ರನ್ ಗಳಿಸಿ ಹೋರಾಟ ತೋರಿದರು.
* ಎಂಎಸ್ ಧೋನಿ 10 ರನ್ ಮಾತ್ರ ಗಳಿಸಿ ನಿರಾಶೆ ಮೂಡಿಸಿದರು.



ಮುಂಬೈ ಇನ್ನಿಂಗ್ಸ್ : ಮುಂಬೈ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.
* ಲೆಂಡ್ಲ್ ಸಿಮನ್ಸ್ 3, ಪಾರ್ಥೀವ್ ಪಟೇಲ್ 4 ಗಳಿಸಿ ಔಟಾದರು.
* ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು 12, ರೋಹಿತ್ ಶರ್ಮ 24, ಕಿರಾನ್ ಪೊಲ್ಲಾರ್ಡ್ 7 ಹೆಚ್ಚಿನ ರನ್ ಗಳಿಸಿಲ್ಲ
* ಆಲ್ ರೌಂಡರ್ ಆಗಿ ಕೃನಾಲ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿ 37 ಎಸೆತಗಳಲ್ಲಿ 47 ರನ್ ಗಳಿಸಿದರು.
* ಹಾರ್ದಿಕ್ ಪಾಂಡ್ಯ 10, ಮಿಚೆಲ್ ಜಾನ್ಸನ್ ಅಜೇಯ 13 ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.
* ಪುಣೆ ಪರ ಜಯದೇವ್ 4-19-2, ಆಡಂ ಝಂಪಾ 32 ರನ್ನಿತ್ತು 2, ಡಾನ್ ಕ್ರಿಶ್ಚಿಯನ್ 34ಕ್ಕೆ2 ಗಳಿಸಿದರು.
* 20 ಓವರ್ ಗಳಲ್ಲಿ 129/8 ಸ್ಕೋರ್ ಮಾಡಿದೆ.
Krunal Pandya


ಕಳೆದ ಪಂದ್ಯಕ್ಕೆ ಹೋಲಿಸಿದರೆ ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮೊದಲ ಐದು ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು ಮುಂಬೈ ಸಂಕಷ್ಟದಲ್ಲಿದೆ. ಆರಂಭಿಕರಾದ ಪಾರ್ಥೀವ್ ಪಟೇಲ್ ಹಾಗೂ ಸಿಮನ್ಸ್ ಪೆವಿಲಿಯನ್ ಗೆ ಮರಳಿದ್ದಾರೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಮಹಾರಾಷ್ಟ್ರ ಡರ್ಬಿ ಆರಂಭವಾಗಿದೆ. ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿರುವ ಮುಂಬೈ ಎರಡು ಬಾರಿ ಕಪ್ ಎತ್ತಿತ್ತು. ಲೀಗ್ ಹಂತದಲ್ಲಿ ಮೂರು ಬಾರಿ ಮುಂಬೈ ಇಂಡಿಯನ್ಸ್ ಸೋಲಿಸಿರುವ ಆತ್ಮವಿಶ್ವಾಸದಲ್ಲಿ ಸ್ಮಿತ್ ಪಡೆ ಕಣಕ್ಕಿಳಿದಿದೆ. [ಐಪಿಎಲ್ 10 ಫೈನಲ್ : ಮುಂಬೈ ವಿರುದ್ಧ ಪುಣೆ ಮೇಲುಗೈ ಸಾಧ್ಯತೆ!]

ರೋಹಿತ್ ಶರ್ಮ ಅವರು ನಾಲ್ಕನೇ ಫೈನಲ್ ಆಡುತ್ತಿದ್ದರೆ, ಎಂಎಸ್ ಧೋನಿ ದಾಖಲೆಯ 7ನೇ ಫೈನಲ್ ಆಡುತ್ತಿದ್ದಾರೆ.

Mumbai Indians opt to bat against Rising Pune Supergiant


ಮುಂಬೈ: ಲೆಂಡ್ಲ್ ಸಿಮನ್ಸ್, ಪಾರ್ಥೀವ್ ಪಟೇಲ್, ರೋಹಿತ್ ಶರ್ಮ, ಅಂಬಟಿ ರಾಯುಡು, ಕಿರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕರಣ್ ಶರ್ಮ, ಲಸಿತ್ ಮಾಲಿಂಗ, ಜಸ್ ಪ್ರೀತ್ ಬೂಮ್ರಾ, ಮಿಚೆಲ್ ಜಾನ್ಸನ್

ಪುಣೆ: ರಾಹುಲ್ ತ್ರಿಪಾಠಿ, ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್, ಮನೋಜ್ ತಿವಾರಿ, ಎಂಎಸ್ ಧೋನಿ, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಆಡಂ ಝಂಪಾ, ಜಯದೇವ್ ಉನದ್ಕತ್, ಲಾಕಿ ಫರ್ಗುಸನ್. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X