ಐಪಿಎಲ್ : ಪುಣೆ ವಿರುದ್ಧ ಸುಲಭ ಜಯ ದಾಖಲಿಸಿದ ರೈನಾ ಪಡೆ
ರಾಜ್ ಕೋಟ್, ಏಪ್ರಿಲ್ 14: ವೇಗಿ ಆಂಡ್ರ್ಯೂ ಟೈ ಹ್ಯಾಟ್ರಿಕ್ ನೆರವಿನಿಂದ ಗುಜರಾತ್ ಲಯನ್ಸ್ ತಂಡವು ಪುಣೆ ತಂಡವನ್ನು 20 ಓವರ್ ಗಳಲ್ಲಿ 171/8ಸ್ಕೋರಿಗೆ ನಿಯಂತ್ರಿಸಿತು. ನಂತರ ಕೇವಲ ಮೂರು ವಿಕೆಟ್ ಕಳೆದು ಕೊಂಡು ಗೆಲುವಿನ ಗುರಿ ಮುಟ್ಟಿತು.
ಐಪಿಎಲ್ 2017: ಸಂಪೂರ್ಣ ವೇಳಾಪಟ್ಟಿ | ಗ್ಯಾಲರಿ
ಗುಜರಾತ್ ರನ್ ಚೇಸ್: ಡಾಯ್ನೆ ಸ್ಮಿತ್ ಹಾಗೂ ಬ್ರೆಂಡನ್ ಮೆಕಲಮ್ ಬಿರುಸಿನ ಆಟದ ಲಾಭದಿಂದ ಗುಜರಾತ್ ಉತ್ತಮ ಅಡಿಪಾಯ ಹಾಕಿದರು.[ಐಪಿಎಲ್ 2017: ಅಂಕಪಟ್ಟಿ]
ಡಾಯ್ನೆ ಸ್ಮಿತ್ 30 ಎಸೆತಗಳಲ್ಲಿ 47ರನ್ ಚೆಚ್ಚಿದರು. 8 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಮೆಕಲಮ್ 32 ಎಸೆತಗಳಲ್ಲಿ 49ರನ್ (5ಬೌಂಡರಿ, 3ಸಿಕ್ಸರ್) ಗಳಿಸಿದರು.
ನಂತರ ನಾಯಕ ಸುರೇಶ್ ರೈನಾ ಅಜೇಯ 35ರನ್ ಹಾಗೂ ಅರೋನ್ ಫಿಂಚ್ 33ರನ್(19 ಎಸೆತ) ಗಳಿಸಿ ತಂಡವನ್ನು ಗೆಲುವಿನ ಗುರಿ ದಾಟುವಂತೆ ಮಾಡಿದರು.
ಪುಣೆ ಇನ್ನಿಂಗ್ಸ್ : ಅಜಿಂಕ್ಯ ರಹಾನೆ ಶೂನ್ಯಕ್ಕೆ ಔಟಾದರು. ರಾಹುಲ್ ತ್ರಿಪಾಠಿ 17 ಎಸೆತಗಳಲ್ಲಿ 33ರನ್ ಹಾಗೂ ನಾಯಕ ಸ್ಟೀವ್ ಸ್ಮಿತ್ 28 ಎಸೆತಗಳಲ್ಲಿ43ರನ್ ಗಳಿಸಿ ಉತ್ತಮ ಜೊತೆಯಾಟ ಕಂಡರು.

ಬೆನ್ ಸ್ಟೋಕ್ಸ್ 25, ಮನೋಜ್ ತಿವಾರಿ 31, ಅಂಕಿತ್ ಶರ್ಮ 25 ತಮ್ಮ ಕೊಡುಗೆ ನೀಡಿದರು.
ಆಸ್ಟ್ರೇಲಿಯಾದ ವೇಗಿ ಆಂಡ್ರ್ಯೂ ಟೈ ಅವರು ಮೊದಲ ಐಪಿಎಲ್ ಪಂದ್ಯದಲ್ಲೇ ಹ್ಯಾಟ್ರಿಕ್ ಹಾಗೂ ಐದು ವಿಕೆಟ್ ಸಾಧನೆ ಮಾಡಿದರು. 4 ಓವರ್ ಗಳಲ್ಲಿ 17ರನ್ನಿತ್ತು 5 ವಿಕೆಟ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications