For Quick Alerts
ALLOW NOTIFICATIONS  
For Daily Alerts
 

ಲಯನ್ಸ್ ಗೆ 7 ವಿಕೆಟ್ ಗಳ ಜಯ, ಆರ್ ಸಿಬಿ ಪ್ಲೇ ಆಫ್‌ ಬಾಗಿಲು ಕ್ಲೋಸ್

ಬೆಂಗಳೂರು, ಏಪ್ರಿಲ್ 27 :ಸತತ ಸೋಲಿನಿಂದ ಕಂಗಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗುರುವಾರ ಮತ್ತೊಂದು ಸೋಲು ಕಂಡಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ಗುಜರಾತ್ ಲಯನ್ಸ್ ಏಳು ವಿಕೆಟ್ ಗಳಿಂದ ಜಯಗಳಿಸಿದೆ. ಇದರಿಂದ ಆರ್ ಸಿಬಿಯ ಪ್ಲೇ ಆಫ್ ನ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ ಕೇವಲ 134 ರನ್ ಗಳಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಲಯನ್ಸ್ 13,5 ಓವರ್ ಗಳಲ್ಲಿ 135 ರನ್ ಗಳಿಸಿ 7 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು.

IPL 2017: Royal Challengers Bangalore on brink of elimination after 6th loss

ಗುಜರಾತ್ ಲಯನ್ಸ್ ಬೌಲಿಂಗ್ ದಾಳಿಗೆ ರನ್ ಗಳಿಸಲು ತಿಣುಕಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 134 ರನ್ ಗಳನ್ನು ಪೇರಿಸಿದೆ.

ಆರಂಭದಲ್ಲಿಯೇ ನಾಯಕ ವಿರಾಟ್ ಕೊಹ್ಲಿ 10, ಗೇಲ್ 08, ಹೆಡ್ 0, ಮನ್ ದೀಪ್ ಸಿಂಗ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ ಸಿಬಿ ತಂಡಕ್ಕೆ ಕೇದರ್ ಜಾದವ್ (31) ಮತ್ತು ಪವನ್ ನೇಗಿ (32) ನೆರವಾದರು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಗುಜರಾತ್ ಪರ ಟೈ 3, ಜಡೇಜಾ 2, ಫಲ್ಕನರ್, ಸೋನಿ, ತಂಪಿ ತಲಾ ಒಂದು ವಿಕೆಟ್ ಪಡೆದರು.

ಗುಜರಾತ್ ಲಯನ್ಸ್ ದಾಳಿಗೆ ಆರ್ ಸಿಬಿ ಆರಂಭದಲ್ಲಿಯೇ ನಾಯಕ ವಿರಾಟ್ ಕೊಹ್ಲಿ 10, ಗೇಲ್ 08, ಹೆಡ್ 0,ಕೇದರ್ ಜಾದವ್ (31) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಒಂಭತ್ತು ಓವರ್ ಗಳ ಮುಕ್ತಾಯದ ಅಂತ್ಯಕ್ಕೆ 59 ರನ್ ಗಳಿಸಿ ಆಡುತ್ತಿದೆ.

ಸ್ಕೋರ್ ವಿವರ
ಆರ್ ಸಿಬಿ 20 ಓವರ್ ಗಳಲ್ಲಿ 134/10, ವಿರಾಟ್ ಕೊಹ್ಲಿ 10, ಗೇಲ್ 08, ಹೆಡ್ 0, ಎಬಿಡಿ 5, ಕೇದರ್ ಜಾದವ್ 31, ಪವನ್ ನೇಗಿ 32, ಟೈ 12ಕ್ಕೆ3, ಜಡೇಜಾ 28ಕ್ಕೆ2.

ಲಯನ್ಸ್ 13.5 ಓವರ್ ಗಳಲ್ಲಿ 135/3, ಕಿಶನ್ 16, ಬ್ರೆಂಡನ್ ಮೆಕಲಂ 3, ಫಿಂಚ್ 72, ರೈನಾ ಅಜೇಯ 34, ಜಡೇಜಾ ಅಜೇಯ 2. ಬದ್ರಿ 23ಕ್ಕೆ2.

ತಂಡಗಳು ಇಂತಿವೆ:

RCB XI: Chris Gayle, Virat Kohli (C), Mandeep Singh, AB de Villiers, Travis Head, Kedar Jadhav (WK), Aniket Choudhary, Pawan Negi, Samuel Badree, Sreenath Aravind, Yuzvendra Chahal.

GL XI: Brendon McCullum, Aaron Finch, Suresh Raina (C), Dinesh Karthik (WK), Ishan Kishan, Ravindra Jadeja, James Faulkner, Andrew Tye, Basil Thampi, Nathu Singh, A Soni.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+