Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ : ದಿನೇಶ್ ಕಾರ್ತಿಕ್ ಕ್ಯಾಚ್ ಹಿಡಿದ ಆಂಡರ್ಸನ್

ನವದೆಹಲಿ, ಮೇ 04: ಐಪಿಎಲ್ 2017ರ 42ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಗುಜರಾತ್ ಲಯನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ ಪರ ದಿನೇಶ್ ಕಾರ್ತಿಕ್ ಅವರು ಉತ್ತಮವಾಗಿ ಆಡಿದರು. ಕಾರ್ತಿಕ್ ಅವರನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕೋರೆ ಆಂಡರ್ಸನ್ ಅವರು ಪೆವಿಲಿಯನ್ ಗೆ ಕಳಿಸಬೇಕಾಯಿತು.

ದಿನೇಶ್ ಕಾರ್ತಿಕ್ 65, ನಾಯಕ ಸುರೇಶ್ ರೈನಾ 77ರನ್ ಗಳಿಸಿದರು ಇಬ್ಬರು 133ರನ್ ಜೊತೆಯಾಟ ಸಾಧಿಸಿ ತಂಡದ ಮೊತ್ತವನ್ನು 208/7ಕ್ಕೇರಿಸಿದರು.

IPL 2017 : Video: Watch Corey Anderson's stunning catch to dismiss Dinesh Karthik


ಡೆಲ್ಲಿ ಪರ ಕಾಗಿಸೋ ರಬಡಾ 2/28 ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಉತ್ತಮ ಫೀಲ್ಡಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು.

ಪ್ಯಾಟ್ ಕುಮಿನ್ಸ್ ಬೌಲಿಂಗ್ ನಲ್ಲಿ ದಿನೇಶ್ ಕಾರ್ತಿಕ್ ಕ್ಯಾಚ್ ನೀಡಿದಾಗ ಮಿಡ್ ಆಫ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಂಡರ್ಸನ್ ಅವರು ತಮ್ಮ ತಲೆ ಮೇಲೆ ಬರುತ್ತಿದ್ದ ಚೆಂಡನ್ನು ಕೊನೆ ಕ್ಷಣದಲ್ಲಿ ಎಗರಿ ಎಡಗೈಯಲ್ಲಿ ಹಿಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದರು.

ದಿನೇಶ್ ಕಾರ್ತಿಕ್ ಅವರು ಒಂದು ಕ್ಷಣ ನಂಬದೆ ಅಲ್ಲೇ ನಿಂತಿದ್ದರು. ಆದರೆ, ಕೊನೆಗೆ ಎಲ್ಲರೂ ಆಂಡರ್ಸನ್ ಅವರ ಕ್ಯಾಚಿಂಗ್ ಕೌಶಲ್ಯಕ್ಕೆ ತಲೆದೂಗಲೇ ಬೇಕಾಯಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+