ಆರ್ ಅಶ್ವಿನ್ ಅವರ ಸ್ಥಾನಕ್ಕೆ ಆಲ್ ರೌಂಡರ್ ವಾಷಿಂಗ್ಟನ್
ಪುಣೆ, ಏಪ್ರಿಲ್ 06: ರೈಸಿಂಗ್ ಪುಣೆ ಜೈಂಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಅವರು ಗಾಯಾಳುವಾಗಿದ್ದು ಈ ಬಾರಿ ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಕರೆತರಲಾಗಿದೆ.
ತಮಿಳುನಾಡು ಮೂಲದ 17 ವರ್ಷ ವಯಸ್ಸಿನ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡುವ ಮುನ್ನ ಸೋಮವಾರದಂದು ಟ್ರಯಲ್ ಪರೀಕ್ಷೆ ನಡೆಸಲಾಗಿತ್ತು. ಅಶ್ವಿನ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಡುತ್ತಿರುವುದು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಸುಂದರ್ ಹೇಳಿದ್ದಾರೆ.

ತಮಿಳುನಾಡು ಪರ ದೇವಧರ್ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಾಷಿಂಗ್ಟನ್ ಸುಂದರ್
ಅವರು ಎಡಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್ ಆಗಿದ್ದಾರೆ. ಐದು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 9 ಲಿಸ್ಟ್ ಎ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡ ಅಂಡರ್ 19 ವಿಶ್ವಕಪ್ ಭಾರತ ತಂಡದಲ್ಲೂ ಸುಂದರ್ ಇದ್ದರು. ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್, ಆಸ್ಟ್ರೇಲಿಯಾದ ಆಡಂ ಝಾಂಪಾ ಅವರು ತಂಡದ ಸ್ಪಿನ್ ವಿಭಾಗವನ್ನು ನೋಡಿಕೊಳ್ಳಬೇಕಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL: Sundar replaces injured Ashwin
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications