ಗಿಲ್, ಕಾರ್ತಿಕ್ ಬ್ಯಾಟಿಂಗ್ ಬಲ: ಚೆನ್ನೈ ವಿರುದ್ಧ ಕೋಲ್ಕತ್ತಾ ಗೆಲುವು

ಕೋಲ್ಕತ್ತಾ, ಮೇ 4: ಶುಭ್ಮಾನ್ ಗಿಲ್ ಮತ್ತು ನಾಯಕ ದಿನೇಶ್ ಕಾರ್ತಿಕ್ ಅಬ್ಬರದ ಆಟಕ್ಕೆ ಚೆನ್ನೈ ತಲೆ ಬಾಗಲೇಬೇಕಾಯಿತು. ಗಿಲ್ 57 (36) ಮತ್ತು 45 (18) ರನ್ ಬಲದಿಂದ ಗುರುವಾರದ ಚೆನ್ನೈ-ಕೋಲ್ಕತ್ತಾ ನಡುವಣ ಐಪಿಎಲ್ 33ನೇ ಪಂದ್ಯದಲ್ಲಿ ಕೋಲ್ಕತ್ತಾ 6 ವಿಕೆಟ್ ಜಯ ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 178 ರನ್ ಗುರಿಯನ್ನು 17.4 ಓವರ್ ಗಳಲ್ಲೇ ಬೆನ್ನಟ್ಟಿ 180 ರನ್ ಪೇರಿಸುವುದರೊಂದಿಗೆ ಗೆಲುವು ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ 178 ರನ್ ಗುರಿ ನೀಡಿತ್ತು.
ಶೇನ್ ವಾಟ್ಸನ್ 36 (25), ಫಾ ಡು ಪ್ಲೆಸಿಸ್ 27 (15), 31 (26), ಅಂಬಾಟಿ ರಾಯುಡು 21 (17), ನಾಯಕ ಧೋನಿ 43 (25), ರವೀಂದ್ರ ಜಡೇಜಾ 12 (12) ರನ್ ಕೊಡುಗೆ ಚೆನ್ನೈ ತಂಡ ದುರಾಳಿಗೆ 178ರ ತಕ್ಕ ಮಟ್ಟಿನ ಗರಿಷ್ಠ ರನ್ ಗುರಿ ನೀಡಲು ನೆರವು ನೀಡಿತು.
ಚೇಸಿಂಗಿಳಿದ ಕೋಲ್ಕತ್ತಾ 17.4 ಓವರ್ ಗಳಲ್ಲಿ 4 ವಿಕೆಟ್ ಕಳೆದು 180 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಕೋಲ್ಕತ್ತಾ ಗೆಲುವಿನಲ್ಲಿ ಆಲ್ ರೌಂಡರ್ ಸುನೀಲ್ ನಾರಾಯಣ್ ಅವರ ಕೊಡುಗೆಯೂ ಗಮನಾರ್ಹವೆನಿಸಿತು. ಪಂದ್ಯದಲ್ಲಿ ಸುನೀಲ್ 32 (20) ರನ್ ಗಳಿಸಿದರಲ್ಲದೆ, 20 ರನ್ ನೀಡಿ ವಾಟ್ಸನ್, ರಾಯುಡು ವಿಕೆಟ್ ಕಬಳಿಸಿ ಚೆನ್ನೈ ಸೋಲಿಗೆ ಕಾರಣರಾದರು.
ಕೋಲ್ಕತ್ತ ಪರ ಕ್ರಿಸ್ ಲಿನ್ 12 (6), ರಾಬಿನ್ ಉತ್ತಪ್ಪ 6 (8), ರಿಂಕು ಸಿಂಗ್ 16 (18) ಸಣ್ಣ ಮಟ್ಟಿಗೆ ರನ್ ಕೊಡುಗೆ ನೀಡಿದರು. ಇವರಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದ ಕಾರ್ತಿಕ್ ಮತ್ತು ಗಿಲ್ ಇಬ್ಬರೂ ಅಜೇಯರಾಗಿ ಉಳಿದರು.
ಎರಡನೇ ಇನ್ನಿಂಗ್ಸ್ ಆರಂಭದ ಮೊದಲ ಓವರ್ ನಲ್ಲೇ ಕೋಲ್ಕತ್ತಾದ ಕ್ರಿಸ್ ಲಿನ್ ವಿಕೆಟ್ ಒಪ್ಪಿಸಿ ಕೋಲ್ಕತ್ತವನ್ನು ಕೊಂಚ ಚಿಂತೆಗೀಡು ಮಾಡಿದರಾದರೂ 11.4 ಓವರ್ ಬಳಿಕ ಕಾರ್ತಿಕ್ ಮತ್ತು ಗಿಲ್ ಇಬ್ಬರೂ ಕ್ರೀಸ್ ಗೆ ಅಂಟಿ ನಿಂತಿದ್ದು ಚೆನ್ನೈ ಸೋಲಿನ ಬೆಲೆ ತೆರುವಂತೆ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications