ಸನ್ ರೈಸರ್ಸ್ ವಿರುದ್ಧ ನೈಟ್ ರೈಡರ್ಸ್ 5 ವಿಕೆಟ್ ಜಯ

ಹೈದರಾಬಾದ್, ಮೇ 20: ಕ್ರಿಸ್ ಲಿನ್ 55 (43), ರಾಬಿನ್ ಉತ್ತಪ್ಪ 45 (34) ರನ್ ನೆರವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿದೆ.
ಹೈದರಾಬಾದ್ ನೀಡಿದ್ದ 173 ರನ್ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ 19.4 ಓವರ್ ಗಳಲ್ಲೇ 173 ರನ್ ಪೇರಿಸಿ ಗೆಲುವಿನ ನಗು ಬೀರಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಶಿಖರ್ ಧವನ್ ಅರ್ಧ ಶತಕ ನೆರವಿನೊಂದಿಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಿ ಕೋಲ್ಕತ್ತಾಕ್ಕೆ 173 ರನ್ ಗುರಿ ನೀಡಿತ್ತು.
ಹೈದರಾಬಾದ್ ಪರ ಶ್ರೀವತ್ಸ ಗೋಸ್ವಾಮಿ 35, ಕೇನ್ ವಿಲಿಯಮ್ಸನ್ 36, ಮನೀಶ್ ಪಾಂಡೆ 25, ಶಕೀಬ್ ಅಲ್ ಹಸನ್ 10 ರನ್ ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ಮನ್ ಗಳ ರನ್ ಕೊಡುಗೆ ತಂಡಕ್ಕೆ ಲಭಿಸಲಿಲ್ಲ. ಇದೇ ಹೈದರಾಬಾದ್ ತಂಡವನ್ನು ಸೋಲಿನಂಚಿಗೆ ತಳ್ಳಿತು.
ಕೋಲ್ಕತ್ತಾ ತಂಡವೂ ಅಂಥದ್ದೇನೂ ಬ್ಯಾಟಿಂಗ್ ಆರ್ಭಟ ನಡೆಸದಿದ್ದರೂ ಸುನೀಲ್ ನರೈನ್ 29, ದಿನೇಶ್ ಕಾರ್ತಿಕ್ 26, ಲಿನ್ 55, ಉತ್ತಪ್ಪ 45 ರನ್ ಕೊಡುಗೆ ಕೋಲ್ಕತ್ತಾವನ್ನು ಗೆಲುವಿನೆಡೆಗೆ ಸೆಳೆಯಿತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ರಿಸ್ ಲಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications