For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ತಂಡಕ್ಕೆ ಸಿಗಲಿದೆ ಎಬಿ ಡಿವಿಲಿಯರ್ಸ್ ಶಕ್ತಿಮದ್ದು

ಬೆಂಗಳೂರು, ಮೇ 5: ಅನಾರೋಗ್ಯದ ಕಾರಣದಿಂದ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕೆ ಇಳಿಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಿದ್ದಾರೆ.

ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಆಡಲಿದ್ದಾರೆ. ಇದು ಆರ್‌ಸಿಬಿ ತಂಡದ ಬಲವನ್ನು ಇಮ್ಮಡಿಗೊಳಿಸಿದೆ. ಆಡಿರುವ 6 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 280 ರನ್ ಗಳಿಸಿರುವ ಎಬಿಡಿ, ಆರ್‌ಸಿಬಿ ಪರ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ.

ಎಬಿಡಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಮೇಲೆಯೇ ಆರ್‌ಸಿಬಿ ತಂಡದ ಬ್ಯಾಟಿಂಗ್ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ಎಬಿಡಿ ಅನುಪಸ್ಥಿತಿ ತಂಡದ ಬ್ಯಾಟಿಂಗ್ ಮಾತ್ರವಲ್ಲ, ಮಾನಸಿಕವಾಗಿ ಇಡೀ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು. ಎಬಿಡಿ ಗೈರಿನ ನಡುವೆಯೂ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಯಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದು ಸಮಾಧಾನ ಮೂಡಿಸಿತ್ತು.

ipl 2018 ab de villiers fit for csk match

ಮಹತ್ವದ ಪಂದ್ಯ
ಆರ್‌ಸಿಬಿ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳುವ ಹೋರಾಟದಲ್ಲಿ ಕೊಹ್ಲಿ ಪಡೆಗೆ ಗೆಲುವು ಅನಿವಾರ್ಯ. ಅಲ್ಲದೆ, ಅಂಕಪಟ್ಟಿಯ ತಳಭಾಗದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಗೆಲುವಿನ ಹಾದಿ ಕಂಡುಕೊಂಡಿರುವುದರಿಂದ ಆರ್‌ಸಿಬಿ ಮೇಲೆ ಒತ್ತಡ ಹೆಚ್ಚಿದೆ.

ಚುನಾವಣಾ ವಿಡಿಯೋಗಳು

ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಇನ್ನೂರು ರನ್‌ಗಳ ಗಡಿ ದಾಟಿಯೂ ಚೆನ್ನೈ ಎದುರು ಸೋಲೊಪ್ಪಿಕೊಂಡಿತ್ತು. ಕೈಗೆ ಬಂದಿದ್ದ ಪಂದ್ಯವನ್ನು ಬಿಟ್ಟುಕೊಡುವುದು ಆರ್‌ಸಿಬಿಯ ಚಾಳಿಯೂ ಆಗಿದೆ. ಮುಂಬೈ ವಿರುದ್ಧ ಮೊದಲ ಬಾರಿಗೆ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿಯೂ ಅದೇ ಆಟ ತೋರಬೇಕಿದೆ.

ಎಂಟು ಪಂದ್ಯಗಳಿಂದ ಆರು ಅಂಕಗಳನ್ನು ಗಳಿಸಿರುವ ಆರ್‌ಸಿಬಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮುಂಬೈ ತಂಡವನ್ನು ಹಿಂದಿಕ್ಕಿ ಒಂದು ಸ್ಥಾನ ಮೇಲಕ್ಕೆ ಏರಲಿದೆ.

ipl 2018 ab de villiers fit for csk match

ವಿಕೆಟ್ ಕೀಪರ್ ಯಾರು?
ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ, ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ಕ್ವಿಂಟನ್ ಡಿ ಕಾಕ್ ಚೆನ್ನೈ ವಿರುದ್ಧದ ಪಂದ್ಯಕ್ಕೆ ಗೈರಾಗಲಿದ್ದಾರೆ.

ಮದುವೆ ಸಮಾರಂಭದಲ್ಲಿ ಭಾಗವಹಿಸಲು ಡಿ ಕಾಕ್ ತವರಿಗೆ ಮರಳಿದ್ದಾರೆ. ಡಿ ಕಾಕ್ ಅವರ ಸ್ಥಾನಕ್ಕೆ ಎಬಿಡಿ ಮರಳಲಿದ್ದಾರೆ. ಈಗ ವಿಕೆಟ್ ಕೀಪರ್ ಹೊಣೆಗಾರಿಕೆಯನ್ನು ಯಾರಿಗೆ ವಹಿಸಲಾಗುವುದು ಎಂಬ ಪ್ರಶ್ನೆ ಮೂಡಿದೆ. ಬ್ರೆಂಡನ್ ಮೆಕಲಮ್ ಮತ್ತು ಎಬಿಡಿ ಇಬ್ಬರೂ ವಿಕೆಟ್ ಹಿಂದೆ ನಿಂತ ಅನುಭವ ಉಳ್ಳವರು. ಅವರಿಬ್ಬರಲ್ಲಿ ಒಬ್ಬರಿಗೆ ವಿಕೆಟ್ ಕೀಪಿಂಗ್ ಹೊಣೆ ವಹಿಸಬಹುದು. ಅಥವಾ ಇದುವರೆಗೆ ಬೆಂಚು ಕಾಯ್ದಿರುವ ಪಾರ್ಥಿವ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.

Story first published: Saturday, May 5, 2018, 12:12 [IST]
Other articles published on May 5, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+