Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಅಮೂಲ್'ನಲ್ಲಿ ಪ್ರತಿಫಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ವಿಜಯ

IPL 2018: Amul presents Chennai’s winning picture

ನವದೆಹಲಿ, ಮೇ 29: ಐಪಿಎಲ್ ಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಸಿಎಸ್ಕೆಯ ಈ ಭರ್ಜರಿ ಗೆಲುವು ಈಗ ಅಮೂಲ್ ಕಂಪನಿಯ ಚಿತ್ರವಾಗಿಯೂ ಹೊರಹೊಮ್ಮಿದೆ.

ಎಮ್.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಐಪಿಎಲ್ ಜಯದೊಂದಿಗೆ 3ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ತಂಡದ ಗೆಲುವಿನಲ್ಲಿ ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್ ಪ್ರಮುಖ ಪಾತ್ರವಹಿಸಿದ್ದರು.

ಐಪಿಎಲ್ ಫೈನಲ್ ನಲ್ಲಿ 57 ಎಸೆತಗಳನ್ನು ಎದುರಿಸಿದ ವಾಟ್ಸನ್ 117 ರನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಜೊತೆಗೆ ಅಜೇಯರಾಗಿಯೂ ಉಳಿದಿದ್ದರು. ಕಾಲಿನ ಸ್ನಾಯು ಸೆಳೆತದ ನಡುವೆಯೂ ವಾಟ್ಸನ್ ಭರ್ಜರಿ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಐಪಿಎಲ್ ಪಂದ್ಯದ ವೇಳೆ ಸಿಎಸ್ಕೆ ನಾಯಕ ಧೋನಿಯ ಪುತ್ರಿ ಪುಟಾಣಿ ಜಿವಾ ಧೋನಿಯೂ ಆಗಾಗ ಕಾಣಿಸಿಕೊಂಡು ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಹಾಗಾಗಿ ಧೋನಿ, ವಾಟ್ಸನ್, ಜಿವಾ, ಸಿಎಸ್ಕೆಯ ಸಿಂಹ ಘರ್ಜನೆಯ ಲೋಗೋ ಕೂಡ ಅಮೂಲ್ ಕಂಪನಿಯ ಚಿತ್ರದಲ್ಲಿ ಕಾಣಿಸಿಕೊಂಡಿದೆ.

ಕರ್ನಾಟಕದ ಸಮ್ಮಿಶ್ರ ಸರಕಾರದಿಂದ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಂತಹ ಅನೇಕ ಪ್ರಮುಖ ಸಂಗತಿಗಳನ್ನು ಚಿತ್ರದ ಮೂಲಕ ಸೆರೆ ಹಿಡಿದಿಟ್ಟ ಖ್ಯಾತಿಗೆ ಅಮೂಲ್ ಕಂಪನಿ ಪಾತ್ರವಾಗಿದ್ದು, ಈ ಬಾರಿ ಐಪಿಎಲ್, ಚೆನ್ನೈ ಬಳಗ ಚಿತ್ರದಲ್ಲಿ ಸೆರೆಯಾಗಿದೆ.

Story first published: Tuesday, May 29, 2018, 20:13 [IST]
Other articles published on May 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+