
ಬೆಂಗಳೂರು, ಮೇ 18: ಎಬಿ ಡಿವಿಲಿಯರ್ಸ್ 69 (39) ರನ್ ಮತ್ತು ಅಮೋಘ ಫೀಲ್ಡಿಂಗ್ ನೆರವಿನಿಂದ ಗುರುವಾರ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಂಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಬೆಂಗಳೂರು 14 ರನ್ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿದೆ.
ಮೋಯಿನ್ ಆಲಿ 65 (34), ಕಾಲಿನ್ ಡೆ ಗ್ರ್ಯಾಂಡ್ ಹೋಮ್ 40 (17), ಸರ್ಫರಾಜ್ ಖಾನ್ ಅಜೇಯ 22 (8) ರನ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವನ್ನು ಸಂಭ್ರಮಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬೆಂಗಳೂರು ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ (12/11), ಪಾರ್ಥೀವ್ ಪಟೇಲ್ (1/4), ಮನ್ ದೀಪ್ ಸಿಂಗ್ (4/6) ಮತ್ತು ಟಿಮ್ ಸೌಥೀ ರನ್ ಕೊಡುಗೆ ಸಾಲದೆ ಹೋಯಿತು.
ಆದರೆ ಸ್ಫೋಟಕ್ ಬ್ಯಾಟ್ಸ್ಮನ್ ಡೆವಿಲಿಯರ್ಸ್ ಮತ್ತು ಮೋಯಿನ್ ರನ್ ಕೊಡುಗೆಯಿಂದ ಒಟ್ಟು 20 ಓವರ್ ಗಳಲ್ಲಿ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿ ಹೈದರಾಬಾದ್ ಗೆ 119 ರನ್ ಟಾರ್ಗೆಟ್ ನೀಡಿತ್ತು.
ಚೇಸಿಂಗ್ ಗೆ ಇಳಿದ ಹೈದರಾಬಾದ್ ನಿಂದ ಕೇನ್ ವಿಲಿಯಮ್ಸನ್ 81 (42), ಮನೀಶ್ ಪಾಂಡೆ 62 (38), ಅಲೆಕ್ಸ್ ಹೇಲ್ಸ್ 37 (24) ರನ್ ಕೊಡುಗೆ ಮಾತ್ರ ಲಭಿಸಿದ್ದು. ಉಳಿದ ಆಟಗಾರರ ನೆರವಿಲ್ಲದೆ ಬಲಿಷ್ಟ ಹೈದರಾಬಾದ್ ಬೆಂಗಳೂರು ಎದುರು ಸೋಲೊಪ್ಪಿಕೊಂಡಿತು.
ಬೆಂಗಳೂರು ನೀಡಿದ್ದ 119 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದು 204 ರನ್ ಪೇರಿಸಿ ಶರಣಾಯಿತು. ಸ್ಪೋಟಕ ಬ್ಯಾಟಿಂಗ್ ಮತ್ತು ಅದ್ಭುತ ಕ್ಯಾಚ್ ಮೂಲಕ ಪಂದ್ಯದ ಆಕರ್ಷಣೆಯಾಗಿದ್ದ ಬೆಂಗಳೂರು ತಂಡದ ಡಿವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.