ಬೆಂಗಳೂರಿಗೆ ಮತ್ತೊಮ್ಮೆ ಸೋಲು, ಎಂದೂ ಮುಗಿಯದ ಗೋಳು

ಬೆಂಗಳೂರು, ಏಪ್ರಿಲ್ 29: ಸತತ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡ ಇಂದು ಕೊಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 175/4 ಸ್ಕೋರ್ ಮಾಡಿತ್ತು. ಆದರೆ, ಕೆಕೆಆರ್ ತಂಡ ಸುಲಭವಾರಿ ರನ್ ಚೇಸ್ ಮಾಡಿ 6ವಿಕೆಟ್ ಗಳ ಜಯ ದಾಖಲಿಸಿತು.
ಸ್ಕೋರ್ ಕಾರ್ಡ್
ಕೆಕೆಆರ್ ರನ್ ಚೇಸ್ : ಕ್ರಿಸ್ ಲಿನ್ 62ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯ ಗೆಲ್ಲಿಸಿದರು. ಸುನಿಲ್ ನರೇನ್ 27, ರಾಬಿನ್ ಉತ್ತಪ್ಪ 36 ರನ್, ದಿನೇಶ್ ಕಾರ್ತಿಕ್ 23ರನ್ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇದಕ್ಕೂ ಮುನ್ನ ಟಾಸ್ ಗೆದ್ದ ಕೊಲ್ಕತ್ತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರ್ ಸಿಬಿ ಪರ ಕೊಹ್ಲಿ 44 ಎಸೆತಗಳಲ್ಲಿ 68ರನ್ ಗಳಿಸಿ ಅಜೇಯರಾಗಿ ಉಳಿದರು. ಡಿಕಾಕ್ 29, ಮೆಕಲಮ್ 38ರನ್ ಗಳಿಸಿದರು. ರಸೆಲ್ 3 ಓವರ್ ಗಳಲ್ಲಿ 31ಕ್ಕೆ3 ವಿಕೆಟ್ ಕಿತ್ತು ರನ್ ನಿಯಂತ್ರಿಸಿದರು.
ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕೊನೆ ಎಸೆತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಕೊಲ್ಕತ್ತ ತಂಡ ತನ್ನ ಕಳೆದ ಪಂದ್ಯವನ್ನು ಡೆಲ್ಲಿ ವಿರುದ್ಧ 55 ರನ್‌ಗಳ ಬೃಹತ್ ಅಂತರದಿಂದ ಸೋತಿದ್ದು. ಎರಡೂ ತಂಡಗಳು ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿವೆ. ಅನಾರೋಗ್ಯಕ್ಕೆ ತುತ್ತಾಗಿರುವ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಆಡದಿರುವುದು ಆರ್‌ಸಿಬಿಗೆ ತಲೆನೋವಾಗಲಿದೆ.
ಏಳು ಪಂದ್ಯದಲ್ಲಿ 4 ರಲ್ಲಿ ಗೆದ್ದಿರುವ ಕೊಲ್ಕತ್ತ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದು (ರಾಜಸ್ಥಾನ-ಹೈದರಾಬಾದ್ ಪಂದ್ಯದ ಫಲಿತಾಂಶದ ಮುಂಚೆ) 6 ಪಂದ್ಯದಲ್ಲಿ 2 ಮಾತ್ರವೇ ಗೆದ್ದಿರುವ ಆರ್‌ಸಿಬಿ 7 ನೇ ಸ್ಥಾನದಲ್ಲಿದೆ.
ಈ ಮುಂಚೆ ಈ ಎರಡೂ ತಂಡಗಳು ಐಪಿಎಲ್‌ನಲ್ಲಿ 21 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 9 ಬಾರಿ ಗೆದ್ದಿದ್ದರೆ 12 ಬಾರಿ ಕೊಲ್ಕತ್ತ ಗೆದ್ದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ತಲಾ 4 ಪಂದ್ಯಗಳನ್ನು ಗೆದ್ದುಕೊಂಡಿವೆ.
ಕಳೆದ ಬಾರಿ ಆಟಗಾರರ ಆಯ್ಕೆಯಲ್ಲಿ ಎಡವಿದ್ದ ವಿರಾಟ್ ಕೊಹ್ಲಿ ಇಂದು ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕೋರಿ ಆಂಡರ್ಸನ್ ಹೊರಗುಳಿದು ಬದಲಿಗೆ ಮತ್ತೊಬ್ಬ ವಿದೇಶಿ ಆಟಗಾರ ಅಂಗಳಕ್ಕಿಳಿಯುವ ಸಾಧ್ಯತೆ ಹೆಚ್ಚು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications