ಕ್ವಾಲಿಫೈಯರ್-2: ಫೈನಲ್ ಗೆ ಸನ್ ರೈಸರ್ಸಾ, ನೈಟ್ ರೈಡರ್ಸಾ?

ಕೋಲ್ಕತ್ತಾ, ಮೇ 25: ಐಪಿಎಲ್ 2018ರ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೆ ಇದು ಅಂತಿಮ ಅವಕಾಶ. ಚೆನ್ನೈ ಈಗಾಗಲೇ ಫೈನಲ್ ಪ್ರವೇಶಿಸಿದ್ದು, ಇಂದಿನ ಪಂದ್ಯದ ವಿಜೇತ ತಂಡ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.
ಟಾಸ್ ಈಗಾಗಲೇ ಮುಗಿದಿದೆ. ಟಾಸ್ ಜಯಿಸಿದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಇಂದು ಮುಖಾಮುಖಿಯಾಗುತ್ತಿರುವ ಕೋಲ್ಕತ್ತಾ-ಹೈದರಾಬಾದ್ ತಂಡಗಳು ಐಪಿಎಲ್ ಅಂತಿಮ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಳ್ಳುವತ್ತ ಎರಡೂ ತಂಡಗಳು ಕಣ್ಣಿಟ್ಟಿವೆ. ಎರಡೂ ತಂಡಗಳು ತಮ್ಮ ತಂಡದ ಬಲವನ್ನು ಸರಿಯಾಗಿ ಉಪಯೋಗಿಸಿದರೆ ಇವತ್ತಿನ ಪಂದ್ಯ ರೋಚಕವಾಗುವುದರಲ್ಲಿ ಅನುಮಾನವಿಲ್ಲ. ಅಂತಿಮ ಪಂದ್ಯ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಈ ಐಪಿಎಲ್ ಆವೃತ್ತಿಯಲ್ಲಿ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ-ಹೈದರಾಬಾದ್ ಸೆಣಸಾಡಲಿವೆ.
ಇತ್ತಂಡಗಳ ನಡುವಿನ ಹಿಂದಿನ ಮುಖಾಮುಖಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿತ್ತು. ಕ್ವಾಲಿಫೈಯರ್-1ರಲ್ಲೂ ಸನ್ ರೈಸರ್ಸ್ ತಂಡ ಚೆನ್ನೈ ವಿರುದ್ಧ ಸೋಲೊಪ್ಪಿಕೊಂಡಿತ್ತು. ಹಾಗಾಗಿ ಈ ಬಾರಿಯೂ ಹೈದರಾಬಾದ್ ತಂಡವೇ ಕೊಂಚ ಒತ್ತಡದಲ್ಲಿದೆ.
ಚೆನ್ನೈ ವಿರುದ್ಧ ಕ್ವಾಲಿಫೈಯರ್-1 ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಹೈದರಾಬಾದ್ ಸೋಲಿಗೆ ಕಾರಣರಾಗಿದ್ದ ಶಿಖರ್ ಧವನ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸ್ ಸೇರಿದಂತೆ ತಂಡದ ಬಹುತೇಕ ಬ್ಯಾಟ್ಸ್ಮನ್ ಗಳು ಈ ದಿನ ಜಾಗರೂಕರಾಗಿ ಆಡಿದರೆ ಇವತ್ತು ಸನ್ ರೈಸರ್ಸ್ ಗೆಲುವಿನೆಡೆಗೆ ಮುನ್ನಗ್ಗಬಲ್ಲದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications