ಐಪಿಎಲ್ ಫೈನಲ್ ಗೆ ಚೆನ್ನೈ: ಹೈದರಾಬಾದ್ ವಿರುದ್ಧ 2 ವಿಕೆಟ್ ಗೆಲುವು

ಮುಂಬೈ, ಮೇ 22: ಫಾ ಡುಪ್ಲೆಸಿಸ್ ಅಜೇಯ 67 (42) ರನ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ಗೆಲುವು ಸಾಧಿಸಿ ಐಪಿಎಲ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಹೈದರಾಬಾದ್ ನೀಡಿದ್ದ 140 ಸಾಧಾರಣ ರನ್ ಗುರಿ ಬೆನ್ನಟ್ಟಿದ ಚೆನ್ನೈ 19.1 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗುರಿ ತಲುಪಿತು. ಆರಂಭದಲ್ಲಿ ಚೆನ್ನೈ ಕೂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿದರೂ ಅಂತಿಮವಾಗಿ ಗೆಲುವು ಚೆನ್ನೈ ಪರವಾಯಿತು.
ಕಾರ್ಲೋಸ್ ಬ್ರಾತ್ ವೇಟ್ ಅಜೇಯ 43 (29) ರನ್ ನೆರವಿನೊಂದಿಗೆ ಸನ್ ರೈಸರ್ಸ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ 140 ರನ್ ಗುರಿ ನೀಡಿದೆ. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಪೇರಿಸಿತ್ತು.
ಮಹತ್ವದ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲಿನ ಭೀತಿಯಲ್ಲಿದೆ. ಬ್ಯಾಟ್ಸ್ಮನ್ ಗಳೆಲ್ಲರೂ ಅಲ್ಪ ರನ್ ನೊಂದಿಗೆ ಪೆವಿಲಿಯನ್ ದಾರಿ ಹಿಡಿದಿರುವುದರಿಂದ ಚೆನ್ನೈ ಎದುರಿನ ಪಂದ್ಯದಲ್ಲಿ ಸನ್ ರೈಸರ್ಸ್ ಸೋಲಿಗೆ ದಾರಿ ಮಾಡಿಕೊಂಡಿತ್ತು.
ಮುಂಬೈಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಚೆನ್ನೈ-ಹೈದರಾಬಾದ್ ತಂಡಗಳು ಪಂದ್ಯವನ್ನಾಡಿದ್ದು, 15 ಓವರ್ ಮುಕ್ತಾಯಕ್ಕೆ 88 ರನ್ ಪೇರಿಸಿತ್ತು. 15 ಓವರ್ ನಲ್ಲೇ ಹೈದರಾಬಾದ್ ತಂಡದ 6 ವಿಕೆಟ್ ಗಳು ಉದುರಿದ್ದರಿಂದ ಚೆನ್ನೈಗೆ ಹೆಚ್ಚು ರನ್ ಗುರಿ ನೀಡುಬಲ್ಲಿ ವಿಫಲವಾಗಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪ ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಚಾಹರ್ ಅವರ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದು ಹೈದರಾಬಾದ್ ಗೆ ಅಘಾತವನ್ನು ನೀಡಿತು.
ಅನಂತರ ಶ್ರೀವತ್ಸ ಗೋಸ್ವಾಮಿ 12 (9), ಕೇನ್ ವಿಲಿಯಮ್ಸನ್ 24 (15), ಮನೀಶ್ ಪಾಂಡೆ 8 (16) ರನ್ ನೊಂದಿಗೆ ಔಟಾಗಿದ್ದು ಸನ್ ರೈಸರ್ಸ್ ತಂಡವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತು.
ಅನಂತರ ಬ್ಯಾಟ್ ಕೈಗೆತ್ತಿಕೊಂಡ ಶಕೀಬ್ ಅಲ್ ಹಸನ್ 12 (10), ಯೂಸೂಫ್ ಪಠಾಣ್ 54 (29) ರನ್ ಪೇರಿಸಿ ವಿಕೆಟ್ ಒಪ್ಪಿಸಿದರು. ಚೆನ್ನೈ ತಂಡದ ಡ್ವೇನ್ ಬ್ರಾವೋ ಅವರು 19 ರನ್ ನೀಡಿ ಹಸನ್, ಪಠಾನ್ ಇಬ್ಬರ ವಿಕೆಟನ್ನೂ ಉರುಳಿಸಿ ಹೈದರಾಬಾದ್ ತಂಡವನ್ನು ಕಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications