ವಿಡಿಯೋ : ಹರ್ಯಾನ್ವಿ ಹಾಡಿಗೆ ಹೆಜ್ಜೆ ಹಾಕಿದ ಕ್ರಿಸ್ ಗೇಲ್

ಬೆಂಗಳೂರು, ಏಪ್ರಿಲ್ 24: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ಕೊನೆಕ್ಷಣದಲ್ಲಿ ಹರಾಜಿನಲ್ಲಿ ಖರೀದಿಸಿದ ಕಿಂಗ್ಸ್ XI ಪಂಜಾಬ್ ತಂಡವು ಸಕತ್ ಖುಷಿಯಲ್ಲಿದೆ. ಗೇಲ್ ಕೂಡಾ ಎಂದಿನಂತೆ ಜಾಲಿ ಮೂಡ್ ನಲ್ಲಿದ್ದಾರೆ.
ವಿಂಡೀಸ್ ಆಟಗಾರ ಗೇಲ್ ಸಹಜವಾಗಿ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಮೈದಾನದ ಒಳಗೂ ಹೊರಗೂ ವಿಂಡೀಸ್ ಆಟಗಾರರ ಡ್ಯಾನ್ಸ್ ಸ್ಟೆಪ್ಸ್ ಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಬ್ಯಾಟ್ ಬೀಸುತ್ತಿರುವ ಗೇಲ್ ಅವರು ಹರ್ಯಾನ್ವಿ ಹಾಡೊಂದಕ್ಕೆ ಸಕತ್ ಸ್ಟೆಪ್ ಹಾಕಿದ್ದಾರೆ.
ಹರ್ಯಾನ್ವಿ ಡಾನ್ಸರ್ ಸಪ್ನಾ ಚೌಧರಿಯ ಅವರ ಜನಪ್ರಿಯ ಹಾಡು 'ತೇರಿ ಆಂಖೋ ಕಾ ಯೋ ಕಾಜಲ್' ಗೆ ಗೇಲ್ ಹೆಜ್ಜೆ ಹಾಕಿದ್ದಾರೆ. ಸಪ್ನಾ ಅವರು ಗೇಲ್ ಡಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿದ್ದ ಸಪ್ನಾ ಚೌಧರಿ ಜನಪ್ರಿಯ ಡ್ಯಾನ್ಸರ್ ಆಗಿದ್ದು, ಕ್ರಿಸ್ ಗೇಲ್ ಅವರ ಕುಣಿತವನ್ನು ಮೆಚ್ಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications