ಸೂಪರ್ ಕಿಂಗ್ಸ್ ವಿರುದ್ಧ ಪಿಂಕ್ ಜೆರ್ಸಿಯ ರಾಯಲ್ಸ್ ಗೆ 4 ವಿಕೆಟ್ ಗೆಲುವು

ಜೈಪುರ, ಮೇ 12: ಜೋಸ್ ಬಟ್ಲರ್ (95/60) ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಚೆನ್ನೈ-ರಾಜಸ್ಥಾನ್ ಮುಖಾಮುಖಿಯಲ್ಲಿ ಪಿಂಕ್ ಜೆರ್ಸಿಯ ರಾಜಸ್ಥಾನ್ ತಂಡ 4 ವಿಕೆಟ್ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 177 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿ ಗೆಲುವಿನ ನಗು ಬೀರಿತು.
ಮೊದಲು ಬ್ಯಾಟಿಂಗ್ ಗೆ ಇಳಿದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿ ರಾಜಸ್ಥಾನ್ ಗೆ 177 ರನ್ ಗುರಿ ನೀಡಿತ್ತು. ಸ್ಫೋಟಕ ಬ್ಯಾಟಿಂಗ್ ನೊಂದಿಗೆ ರಾಜಸ್ಥಾನ್ ಗೆಲುವಿಗೆ ಕಾರಣರಾದ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡದಿಂದ ಆರಂಭಿಕ ಆಟಗಾರರಾದ ಶೇನ್ ವಾಟ್ಸನ್ 39 (31), ಅಂಬಾಟಿ ರಾಯುಡು 12 (9) ರನ್ ನೆರವು ನೀಡಿದರು. ಅನಂತರ ಇಬ್ಬರೂ ಜೋಫ್ರಾ ಆರ್ಚರ್ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು.
ಬಳಿಕ ಬ್ಯಾಟ್ ಕೈಗೆತ್ತಿಕೊಂಡ ಸುರೇಶ್ ರೈನ ಒಳ್ಳೆಯ ಮೊತ್ತದ ರನ್ ಕೊಡುಗೆ ನೀಡಿದರು. 35 ಎಸೆತಗಳನ್ನು ಎದುರಿಸಿದರ ರೈನ 52 ರನ್ ಕಲೆ ಹಾಕಿದರು. ಆದರೆ ಇಶ್ ಸೋಧಿ ಓವರ್ ನಲ್ಲಿ ರೈನ ಬಿನ್ನಿಗೆ ಕ್ಯಾಚಿತ್ತು ಹೊರ ನಡೆದಿದ್ದು ಚೆನ್ನೈಗೆ ಕೊಂಚ ಹಿನ್ನೆಡೆಯಾಯಿತು.
ಚೆನ್ನೈ ತಂಡಕ್ಕೆ ನಾಯಕ ಎಂಎಸ್ ಧೋನಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಅವರ ರನ್ ಕೊಂಚ ಮಟ್ಟಿನಲ್ಲಿ ನೆರವಾಯಿತು. 15ನೇ ಓವರ್ ಮುಕ್ತಾಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ವಿಕೆಟ್ ನಷ್ಟಕ್ಕೆ 127 ರನ್ ಪೇರಿಸಿತ್ತು.
15 ಓವರ್ ಅಂತ್ಯದಲ್ಲಿ ಆರ್ಚರ್ ಬೌಲಿಂಗ್ ನಲ್ಲಿ ಮಿಂಚಿದ್ದು ಗೋಚರಿಸಿತು. ಆರ್ಚರ್ 23 ರನ್ ನೀಡಿ 2 ವಿಕೆಟ್ ಗಳನ್ನು ಕಬಳಿಸಿದ್ದರು. ಈ ಸಂದರ್ಭ ಚೆನ್ನೈ ಮೊದಲ ವಿಕೆಟನ್ನು 19ನೇ ರನ್ ಸಂದರ್ಭ ಕಳೆದುಕೊಂಡಿದ್ದು ಬಿಟ್ಟರೆ ನಂತರದ ಎರಡು ವಿಕೆಟ್ ಗಳು ಉದುರುವಾಗ ತಂಡದ ಮೊತ್ತ 127ರನ್ ದಾಟಿದ್ದು ತಂಡಕ್ಕೆ ಪ್ಲಸ್ ಆಗಿ ಪರಿಣಮಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications