ಮುಂಬೈ-ರಾಜಸ್ಥಾನ್ ಎರಡಕ್ಕೂ ಜಯ ಅನಿವಾರ್ಯ; ಗೆಲ್ಲೋರ್ಯಾರು?

ಮುಂಬೈ, ಮೇ 13: ಇಂದಿನ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ನಿಜಕ್ಕೂ ಕುತೂಹಲಕಾರಿಯಾದುದು. ಯಾಕೆಂದರೆ ಪ್ಲೇಆಫ್ ಕನಸು ಜೀವಂತವಾಗಿರಲು ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿರುವುದರಿಂದ ಇಂದು ಸೋಲುವ ತಂಡಕ್ಕೆ ಟ್ರೋಫಿಯಾಸೆ ನಿರಾಸೆಯಾಗಲಿದೆ.
ಸಾಲಾಗಿ ಸೋಲುತ್ತಾ ಬಂದಿದ್ದ ಎರಡೂ ತಂಡಗಳೂ ಈಚೆಗಷ್ಟೇ ಗೆಲುವಿನ ಹಾದಿ ಹಿಡಿದಿವೆ. ಎರಡಕ್ಕೂ ಉಳಿದ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವುದು ಅನಿವಾರ್ಯವಾಗಿದೆ ಕೂಡ. ಆದರೆ ಇಂದಿನದು ನಿಜಕ್ಕೂ ತುಂಬಾ ಇಕ್ಕಟ್ಟಿನ ಪಂದ್ಯ. ಪಂದ್ಯದಲ್ಲಿ ಯಾವುದಾದರೂ ತಂಡ ಸೋಲಲೇಬೇಕು. ಸೋತ ತಂಡಕ್ಕೆ ಪ್ಲೇಆಫ್ ಕನಸು ದೂರ ಉಳಿಯಲಿದೆ!
ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 5ನೇ ಸ್ಥಾನದಲ್ಲಿದೆ. ರಾಜಸ್ಥಾನ್ 6ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸಮಬಲ ಅಂಕಗಳಿಸಿದೆಯಾದರೂ ರನ್ ರೇಟ್ ಆಧಾರದಲ್ಲಿ ಮುಂಬೈ 5ನೇ ಸ್ಥಾನದಲ್ಲಿ ಕುಳಿತಿದೆ. ಹಾಗಾಗಿ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ.
ಎರಡೂ ತಂಡಗಳೂ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 6ರಲ್ಲಿ ಸೋಲನುಭವಿಸಿವೆ. ಎರಡೂ ತಂಡಗಳಿಗೂ 10 ಅಂಕಗಳು ಅಭಿಸಿದ್ದು, ಮೈನಸ್ ರನ್ ರೇಟ್ ನಲ್ಲಿರುವ ರಾಜಸ್ಥಾನ್ ತಂಡ ಮುಂಬೈಗಿಂತ ಒಂದು ಸ್ಥಾನ ಕೆಳಗಿದೆಯಷ್ಟೇ.
ಹಿಂದಿನ ಪಂದ್ಯದಲ್ಲಿ ಮುಂಬೈ ತಂಡವು ಕೋಲ್ಕತ್ತಾ ವಿರುದ್ಧ 102 ರನ್ ಭರ್ಜರಿ ಜಯ ಗಳಿಸಿತ್ತು. ಇತ್ತ ರಾಜಸ್ಥಾನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್ ಗೆಲುವು ದಾಖಲಿಸಿತ್ತು. ಇನ್ನುಳಿದ ಎಲ್ಲ ಪಂದ್ಯಗಳಲ್ಲೂ ಮುಂಬೈ-ರಾಜಸ್ಥಾನ್ ಗೆಲ್ಲಲೇಬೇಕಿದ್ದು, ಎರಡೂ ತಂಡಗಳು ಒತ್ತಡದಲ್ಲಿವೆ.
ಮೇಲ್ನೋಟಕ್ಕೆ ನೋಡಿದರೆ ಮುಂಬೈ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಂದ್ಯ ಹೇಗೆ ತಿರುವು ಪಡೆದರೂ ಅಚ್ಚರಿಪಡಬೇಕಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications