2018 ಐಪಿಎಲ್ ಫೈನಲ್: ಈ ಬಾರಿ ಟ್ರೋಫಿ ಎತ್ತುವವರ್ಯಾರು?

ಮುಂಬೈ, ಮೇ 26: ಭಾನುವಾರ ಮುಂಬೈಯ ವಾಂಖೇಡೆ ಸ್ಟೇಡಿಯಂ ಐಪಿಎಲ್ ಮಹಾ ಸಮರಕ್ಕೆ ಸಾಕ್ಷಿಯಾಗಲಿದೆ. ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಒಂದು ಬಾರಿಯ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಈ ಐಪಿಎಲ್ ಆವೃತ್ತಿಯಲ್ಲಿ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011ರಲ್ಲಿ ಚಾಂಪಿಯನ್ ಎನಿಸಿಕೊಂಡಿತ್ತು. ಸನ್ ರೈಸರ್ಸ್ ಹೈದರಾಬಾದ್ ಇತ್ತೀಚಿನ ಅಂದರೆ 2016ರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ತಂಡ.
ಮೂರು ಬಾರಿ ಚಾಂಪಿಯನ್ ಆಗಿ ಬೀಗಿರುವ ಮುಂಬೈ ಇಂಡಿಯನ್ಸ್ ಬಿಟ್ಟರೆ ಹೆಚ್ಚು ಬಾರಿ ಚಾಂಪಿಯನ್ ಆಗಿ ಮೂಡಿ ಬಂದತಂಡವಾಗಿ ಚೆನ್ನೈ ಸೂಪರ್ ಕಿಂಗ್ಸೇ ಗುರುತಿಸಿಕೊಂಡಿದೆ. ಈ ಬಾರಿಯೂ ಟ್ರೋಫಿ ಜಯಿಸುವ ಎಲ್ಲಾ ಬಗೆಯಲ್ಲಿ ಚೆನ್ನೈ ಯೋಜನೆ ಹಾಕಿಕೊಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ಕೂಡ ಸುಲಭವಾಗಿ ಟ್ರೋಫಿ ಬಿಟ್ಟುಕೊಡುವ ತಂಡವಲ್ಲ. ಕ್ವಾಲಿಫೈಯರ್ 2ರಲ್ಲಿ ಕೋಲ್ಕತ್ತಾಗೆ ಸೋಲುಣಿಸುವಲ್ಲಿ ಪ್ರಮುಖರಾದ ರಶೀದ್ ಖಾನ್ ಈ ಪಂದ್ಯದಲ್ಲೂ ತಿರುಗಿಬಿದ್ದರೆ ಜೊತೆಗೆ ಸನ್ ರೈಸರ್ಸ್ ಬ್ಯಾಟ್ಸ್ಮನ್ ಗಳೂ ಕರಾರುವಕ್ಕಾದ ಆಟ ಪ್ರದರ್ಶಿಸಿದರೆ ಪಂದ್ಯವನ್ನು ವಶವಾಗಿಸಬಲ್ಲರು.
ಅಂತೂ ನಾಳೆಯ ಪಂದ್ಯ ಚೆನ್ನೈ ವಶವಾದರೆ ಹಾಲಿ ಚಾಂಪಿಯನ್ ಮುಂಬೈಗೆ ಚೆನ್ನೈ ಸರಿ ಸಾಟಿಯಾಗುತ್ತದೆ. ಹೈದರಾಬಾದ್ ಟ್ರೋಫಿಯನ್ನು ಕೈವಶವಾಗಿಸಿಕೊಂಡರೆ ಹೈದರಾಬಾದ್ ತಂಡ ಚೆನ್ನೈಗೆ ಸಮಬಲವಾಗಿ ನಿಲ್ಲಲಿದೆ. ಭಾನುವಾರ 7ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಚಾಂಪಿಯನ್ ಚಂಡವನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications