For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018 ಫೈನಲ್ : ಚೆನ್ನೈ ವಿರುದ್ಧ ಹೈದರಾಬಾದ್, ಎಲ್ಲಿ? ಯಾವಾಗ?

By Mahesh
IPL 2018 Finals : Schedule, Teams List, Venue, Tickets, Timings,TV Channel & Live Streaming Details

ಬೆಂಗಳೂರು, ಮೇ 25: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 11ರ ಪ್ಲೇ ಆಫ್ ಹಂತ ರೋಚಕ ಅಂತ್ಯ ಕಾಣುತ್ತಿದೆ. ಐಪಿಎಲ್ 2018ರ ಅಂತಿಮ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಯಾವ ತಂಡ ಸೆಣಲಿದೆ ಎಂಬುದು ಎಲಿಮಿನೇಟರ್ ಪಂದ್ಯದಲ್ಲಿ ನಿರ್ಧಾರವಾಗಿದೆ. ಕೋಲ್ಕತ್ತಾ ವಿರುದ್ಧ ಹೈದರಾಬಾದ್ ತಂಡವು 13ರನ್ ಗಳ ಅಂತರದಿಂದ ಜಯಗಳಿಸಿ ಫೈನಲ್ ಪ್ರವೇಶಿಸಿದೆ.

ಮೇ 22(ಮಂಗಳವಾರ)ರಂದು ನಡೆದ ಮೊದಲ ಕ್ವಾಲಿಫೈಯರ್ ನಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ (18 ಅಂಕಗಳು) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (18 ಅಂಕಗಳು) ನಡುವಿನ ರೋಚಕ ಹಣಾಹಣಿ, ಪ್ರೇಕ್ಷಕರನ್ನು ರಂಜಿಸಿತು.

ಐಪಿಎಲ್ 2018ರ ವಿಶೇಷ ಪುಟ | ಫ್ಯಾಂಟಸಿ ಲೀಗ್ ಆಡಿ

ವಾಂಖೆಡೆ ಸ್ಟೇಡಿಯಂ ಅಂಗಳದಲ್ಲಿ ಫಾಫ್ ಡು ಪ್ಲೆಸಿಸ್ ಹೋರಾಟದಿಂದ ಅಂತಿಮ ಓವರ್ ನಲ್ಲಿ ಜಯ ದಾಖಲಿಸಿದ ಚೆನ್ನೈ ತಂಡವು ಫೈನಲ್ ತಲುಪಿದ ಮೊದಲ ತಂಡವೆನಿಸಿತು.

ಕಿತ್ತಲೆ, ಕಂದು ಕ್ಯಾಪ್ ಯಾರಿಗೆ? | ಐಪಿಎಲ್ 11 ಗ್ಯಾಲರಿ

ಮೇ23(ಬುಧವಾರ) ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶುಕ್ರವಾರದಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟ ನಡೆಸಿ ಸೋಲು ಕಂಡಿತು. ಈ ಮೂಲಕ ಹೈದರಾಬಾದ್ 2016ರ ನಂತರ ಮತ್ತೊಮ್ಮೆ ಫೈನಲ್ ಗೇರಿದೆ.

ಫೈನಲ್ ಪಂದ್ಯದ ವೇಳಾಪಟ್ಟಿ
ಟಿವಿ ಚಾನೆಲ್ : ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್ : ಹಾಟ್ ಸ್ಟಾರ್.ಕಾಂ
ಪಂದ್ಯದ ಸಮಯ : ಸಂಜೆ 7 ಗಂಟೆಗೆ ಆರಂಭ, 6.30ಕ್ಕೆ ಟಾಸ್.

ಮೇ 27 (ಭಾನುವಾರ), ಮುಂಬೈ(ವಾಂಖೆಡೆ ಸ್ಟೇಡಿಯಂ)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್

ಮೇ 28(ಬದಲಿ ದಿನ)

Story first published: Friday, May 25, 2018, 23:10 [IST]
Other articles published on May 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+