ಐಪಿಎಲ್: ನಾಳೆ ಹರಾಜಿನಲ್ಲಿ ಏನಾಗಬಹುದು?

ಬೆಂಗಳೂರು, ಜನವರಿ 27: ಐಪಿಎಲ್ 2018ರ ಆಟಗಾರರ ಹರಾಜಿನ ಮೊದಲ ದಿನ ಮುಗಿದಿದ್ದು, ಎಂಟೂ ತಂಡಗಳು ತಮ್ಮ ಶಕ್ತ್ಯಾನುಸ್ಸಾರ ಆಟಗಾರರನ್ನು ಖರೀದಿಸಿವೆ.
ಶನಿವಾರ ಬೆಳಿಗ್ಗೆ 9.30ಯಿಂದ ಪ್ರಾರಂಭವಾದ ಹರಾಜು ಪ್ರಕ್ರಿಯೆ ಸಂಜೆ 6.30ವರೆಗೆ ನಡೆಯಿತು. 578 ಆಟಗಾರರಲ್ಲಿ ಬಹುತೇಕ ಆಟಗಾರರು ಇಂದು ಹರಾಜಾದರು.
ಮೊದಲ ದಿನ ಪ್ರಮುಖ ಆಟಗಾರರೆಲ್ಲಾ ಹರಾಜಾಗಿದ್ದು, ಕೆಲವು ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ, ಅವರಲ್ಲಿ ಕೆಲವರಾದರೂ ನಾಳೆ ಮಾರಾಟವಾಗುವ ಸಾಧ್ಯತೆ ಇದೆ.
ಬಹುತೇಕ ತಂಡಗಳು ತಮ್ಮ ಒಟ್ಟು ಬಜೆಟ್ ಆದ 80 ಕೋಟಿಯಲ್ಲಿ ಬಹುಪಾಲು ಹಣವನ್ನು ಈಗಾಗಲೇ ಖರೀದಿಗೆ ವಿನಿಯೋಗಿಸಿದ್ದು, ಕೆಲವಾರು ಕೋಟಿಗಳನ್ನಷ್ಟೆ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿವೆ.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ
ನಾಳೆ ಅನ್‌ಕ್ಯಾಪ್ ಆಟಗಾರರನ್ನು ಮಾತ್ರವೇ ಖರೀದಿಸಬೇಕಿದ್ದು, ಜೊತೆಗೆ ಹರಾಜಾಗದೇ ಉಳಿದಿರುವ ಆಟಗಾರರೂ ಸಹ ನಾಳೆ ಮತ್ತೆ ಹರಾಜು ಕಣಕ್ಕಿಳಿಯಲಿದ್ದಾರೆ.

ಕ್ರಿಸ್ ಗೇಲ್‌ರನ್ನು ಖರೀದಿಸುವ ಸಾದ್ಯತೆ
ಉಳಿಸಿಕೊಂಡಿರುವ ಆಟಗಾರರನ್ನೂ ಸೇರಿಸಿ ಒಟ್ಟು 14 ಆಟಗಾರರನ್ನು ತನ್ನ ತೆಕ್ಕೆಗೆ ಆರ್‌ಸಿಬಿ ಹಾಕಿಕೊಂಡಿದೆ. ಆರ್‌ಸಿಬಿ ಬಳಿ ಇನ್ನು 15.85 ಕೋಟಿ ಹಣ ಬಾಕಿ ಉಳಿದಿದ್ದು, ನಾಳೆಯ ಹರಾಜಿನಲ್ಲಿ ಇಂದು ಮಾರಾಟವಾಗದೇ ಉಳಿದಿರುವ ಖ್ಯಾತ ನಾಮ ಆಟಗಾರರನ್ನು ಖರೀದಿಸುವ ಸಾದ್ಯತೆ ಇದೆ.

ಅನ್‌ಕ್ಯಾಪ್ ಆಟಗಾರರ ಖರೀದಿ ಸಾಧ್ಯತೆ
11 ಕೋಟಿ ಹಣ ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ 11 ಆಟಗಾರರನ್ನು ಖರೀದಿಸಿದೆ. ಚೆನ್ನೈ ಬಳಿ ಕಡಿಮೆ ಹಣ ಉಳಿದಿರುವ ಕಾರಣ ಅದು ನಾಳೆ ಅದು ಅನ್‌ಕ್ಯಾಪ್ ಆಟಗಾರರತ್ತಲೇ ಗಮನ ಹರಿಸುವ ಸಾಧ್ಯತೆ ಇದೆ.

ಹರಾಜಾಗದೇ ಉಳಿದ ಆಟಗಾರರ ಖರೀದಿಸುವ ಸಾಧ್ಯತೆ
ದೆಹಲಿ ತಂಡ ಮೊದಲ ದಿನವೇ 15 ಆಟಗಾರರನ್ನು ಖರೀದಿಸಿದೆ. ದೆಹಲಿ ತಂಡದ ಖಾತೆಯಲ್ಲಿ ಇನ್ನೂ 12 ಕೋಟಿ ಬಾಕಿ ಇದ್ದು ತನ್ನ ಅಷ್ಟೂ ಮೊತ್ತವನ್ನು ಇಂದು ಮಾರಾಟವಾಗದೇ ಉಳಿದಿರುವ ಖ್ಯಾತ ನಾಮ ಆಟಗಾರರ ಮೇಲೆ ಅದು ಹೂಡುವ ಸಾಧ್ಯತೆ ಇದೆ.

ಉತ್ತಮ ಆಟಗಾರರತ್ತ ಚಿತ್ತ
ಸನ್‌ರೈಸಸ್ ತಂಡ ಮೊದಲ ದಿನ 16 ಆಟಗಾರರನ್ನು ಖರೀದಿಸಿದೆ. ಅದರಲ್ಲಿ 5 ಮಂದಿ ವಿದೇಶಿ ಆಟಗಾರರನ್ನು ಖರೀದಿಸಿದೆ. ಹೈದರಾಬಾದ್ ತಂಡದ ಖಾತೆಯಲ್ಲಿ ಇನ್ನು 7 ಕೋಟಿ ಇದ್ದು ಅದು ನಾಳೆ ಉತ್ತಮ ಆಟಗಾರರನ್ನು ತನ್ನ ತಂಡಕ್ಕೆ ಸೆಳೆದುಕೊಳ್ಳುವ ಪ್ರಯತ್ನ ಮಾಡಲಿದೆ.

7.60 ಕೋಟಿ ಉಳಿಸಿಕೊಂಡಿರುವ ಕೊಲ್ಕತ್ತ
ಕೊಲ್ಕತ್ತ ತಂಡ ಗಂಭೀರ್ ಅವರನ್ನು ಬಿಟ್ಟುಕೊಟ್ಟಿದೆ. ಮೊದಲ ದಿನ 12 ಆಟಗಾರರನ್ನು ಖರೀದಿಸಿರುವ ಕೊಲ್ಕತ್ತ ತಂಡದ ಬಳಿ 7.60 ಕೋಟಿ ಹಣ ಇದೆ. ಹಣ ಕಡಿಮೆ ಇರುವ ಕಾರಣ ಅನ್‌ಕ್ಯಾಪ್ ಆಟಗಾರರನ್ನೇ ಖರೀದಿಸುವತ್ತ ಅದು ಚಿತ್ತ ಹರಿಸಲಿದೆ.

ಕಡಿಮೆ ಬೆಲೆಯ ಆಟಗಾರರತ್ತ ಚಿತ್ತ
ಮುಂಬೈ ತಂಡವು ಮೊದಲ ದಿನದ ಹರಾಜಿನಲ್ಲಿ ಕೇವಲ 9 ಆಟಗಾರರನ್ನು ಖರೀದಿಸಿದೆ. ಅದರ ಬಳಿ ಇನ್ನು 15.80 ಕೋಟಿ ಉಳಿದಿದ್ದು, ಅದು ಇನ್ನೂ ಹೆಚ್ಚು ಆಟಗಾರರನ್ನು ಖರೀದಿಸಬೇಕಿದೆ ಹಾಗಾಗಿ ಅದು ಕಡಿಮೆ ಮುಖ ಬೆಲೆಯ ಆಟಗಾರರತ್ತಲೇ ಗಮನ ಹರಿಸುವ ಸಾಧ್ಯತೆ ಇದೆ.

ಖ್ಯಾತನಾಮ ಆಟಗಾರರನ್ನು ಖರೀದಿಸಿದ ತಂಡ
ಪಂಜಾಬ್ ತಂಡವು ಮೊದಲ ದಿನ ಉತ್ಸಾಹದಿಂದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪಂಜಾಬ್ ತಂಡ ಖ್ಯಾತನಾಮ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಮೊದಲ ದಿನ 10 ಆಟಗಾರರನ್ನು ಖರೀದಿಸಿರುವ ಪಂಜಾಬ್ ಬಳಿ ಇನ್ನು 21.90 ಕೋಟಿ ಹಣ ಉಳಿದುಕೊಂಡಿದೆ. ಹೆಚ್ಚು ಹಣ ಉಳಿಸಿಕೊಂಡಿರುವ ಪಂಜಾಬ್ ತಂಡವು ನಾಳೆ ಕೂಡಾ ಇಂದಿನ ಉತ್ಸಾಹವನ್ನೇ ಮುಂದುವರೆಸುವ ಸಾಧ್ಯತೆ ಇದೆ.

23.50 ಕೋಟಿ ಉಳಿಸಿಕೊಂಡಿರುವ ರಾಜಸ್ಥಾನ
ರಾಜಸ್ಥಾನ ತಂಡವು ಹರಾಜು ಪ್ರಕ್ರಿಯೆಯಲ್ಲಿ ನಿಧಾನಗತಿಗೆ ಮೊರೆ ಹೋದ ಕಾರಣ 9 ಆಟಗಾರರನ್ನಷ್ಟೆ ಕೊಂಡುಕೊಳ್ಳಿತು. ಅದರ ಬಳಿ ಇನ್ನೂ 23.50 ಕೋಟಿ ಉಳಿದಿದ್ದು, ನಾಳೆಯ ಹರಾಜಿನಲ್ಲಿ ಕೆಲವು ಖ್ಯಾತ ನಾಮ ಆಟಗಾರರನ್ನು ತನ್ನ ತೆಕ್ಕೆಗೆ ಅದು ಹಾಕಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications