ಐಪಿಎಲ್ 2018: ರಾಜಸ್ಥಾನ ರಾಯಲ್ಸ್‌ ತಂಡದ ವೇಳಾಪಟ್ಟಿ

Posted By:
ipl 2018 full schedule of Rajasthan Royals

ಬೆಂಗಳೂರು, ಮಾರ್ಚ್ 21: ಮೊದಲ ಐಪಿಎಲ್ ಪಂದ್ಯಾವಳಿಯ ಚಾಂಪಿಯನ್ ತಂಡ ರಾಜಸ್ಥಾನ ರಾಯಲ್ಸ್‌ ತಂಡವು ಸ್ಟೀವ್ ಸ್ಮಿತ್ ಅವರ ನಾಯಕತ್ವದಲ್ಲಿ ಕಪ್ ಗೆಲ್ಲವು ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಮುಂಚಿನಿಂದಲೂ 'ಅಂಡರ್‌ ಡಾಗ್' ಆಗಿ ಟೂರ್ನಿ ಪ್ರವೇಶಿಸಿದರೂ ಅಚ್ಚರಿಯ ಫಲಿತಾಂಶ ನೀಡುವಲ್ಲಿ ರಾಜಸ್ಥಾನ ಎತ್ತಿದ ಕೈ. ಅಷ್ಟೇನೂ ಖ್ಯಾತ ನಾಮ ಆಟಗಾರರನ್ನು ಹೊಂದದಿದ್ದರೂ ಸಹ ಉತ್ತಮ ಸಂಘಟಿತ ಮಾಡುವ ರಾಜಸ್ಥಾನ ತಂಡ ಈ ಬಾರಿ ಹೇಗೆ ಆಡುತ್ತದೆ ನೋಡಬೇಕಿದೆ.

ರಾಜಸ್ಥಾನ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 9 ರಂದು ಸನ್‌ರೈಸಸ್ ಹೈದರಾಬಾದ್ ವಿರುದ್ಧ ಹೈದರಾಬಾದ್‌ನಲ್ಲಿ ಆಡಲಿದೆ. ಆಸ್ಟ್ರೇಲಿಯಾ ಕ್ಯಾಪ್ಟನ್ ಸ್ಟೀವ್ ಸ್ಮಿತ್ ನಾಯಕರಾಗಿರುವ ರಾಜಸ್ಥಾನ ತಂಡದಲ್ಲಿ ಅಜಿಂಕ್ಯಾ ರಹಾನೆ, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್‌ ಅಂತಹಾ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳಿದ್ದಾರೆ ಜೊತೆಗೆ ಸಂಜು ಸ್ಯಾಮ್ಸನ್, ಅನುರೀತ್ ಸಿಂಗ್, ಜಯದೇವ್ ಉನದ್ಕತ್ ರೀತಿಯ ಯುವ ಪ್ರತಿಭೆಗಳು ಪ್ರತಿಭೆಗಳು ಇದ್ದಾರೆ.

ಕರ್ನಾಟಕ ಮೂರು ಜನ ಆಟಗಾರರು ರಾಜಸ್ಥಾನ ತಂಡದಲ್ಲಿದ್ದು, ಹಿರಿಯ ಸ್ಟುವರ್ಟ್ ಬಿನ್ನಿ ಜೊತೆಗೆ, ಕೆ.ಗೌತಮ್ ಮತ್ತು ಶ್ರೇಯಸ್ ಗೋಪಾಲ್ ರಾಜಸ್ಥಾನದ ಪರ ಆಡಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಐಪಿಎಲ್‌ ವೇಳಾಪಟ್ಟಿ ಇಂತಿದೆ...

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಏಪ್ರಿಲ್ 9 ಸೋಮವಾರ ಸನ್ ರೈಸಸ್ ಹೈದರಾಬಾದ್ ಹೈದರಾಬಾದ್
ಏಪ್ರಿಲ್ 11 ಬುಧವಾರ ಡೆಲ್ಲಿ ಡೇರ್‌ಡೆವಿಲ್ಸ್‌ ಜೈಪುರ
ಏಪ್ರಿಲ್ 15 ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು
ಏಪ್ರಿಲ್ 18 ಬುಧವಾರ ಕೊಲ್ಕತ್ತಾ ನೈಟ್‌ ರೈಡರ್ಸ್‌ ಜೈಪುರ
ಏಪ್ರಿಲ್ 20 ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್‌ ಚೆನ್ನೈ
ಏಪ್ರಿಲ್ 22 ಭಾನುವಾರ ಮುಂಬೈ ಇಂಡಿಯನ್ಸ್ ಜೈಪುರ
ಏಪ್ರಿಲ್ 29 ಭಾನುವಾರ ಸನ್ ರೈಸಸ್ ಹೈದರಾಬಾದ್ ಜೈಪುರ

IPL- 2018: ರಾಜಸ್ಥಾನ ರಾಯಲ್ಸ್‌ (RR) ಮೇ ತಿಂಗಳ ಪಂದ್ಯಗಳ ವೇಳಾಪಟ್ಟಿ

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಮೇ 2 ಬುಧವಾರ ಡೆಲ್ಲಿ ಡೇರ್‌ಡೆವಿಲ್ಸ್‌ ದೆಹಲಿ
ಮೇ 6 ಭಾನುವಾರ ಕಿಂಗ್ಸ್‌ ಇಲೆವನ್ ಪಂಜಾಬ್‌ ಇಂಧೋರ್‌
ಮೇ 8 ಮಂಗಳವಾರ ಕಿಂಗ್ಸ್‌ ಇಲೆವನ್ ಪಂಜಾಬ್‌ ಜೈಪುರ
ಮೇ 11 ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್‌ ಜೈಪುರ
ಮೇ 13 ಭಾನುವಾರ ಮುಂಬೈ ಇಂಡಿಯನ್ಸ್ ಮುಂಬೈ
ಮೇ 15 ಮಂಗಳವಾರ ಕೊಲ್ಕತ್ತಾ ನೈಟ್ ರೈಡರ್ಸ್‌ ಕೊಲ್ಕತ್ತಾ
ಮೇ 19 ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೈಪುರ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

    ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

    Story first published: Wednesday, March 21, 2018, 17:09 [IST]
    Other articles published on Mar 21, 2018
    POLLS

    myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more