ಮುನ್ನುಗ್ಗುತ್ತಿರುವ ಮುಂಬೈ: ಪರ್ಪಲ್ ಕ್ಯಾಪ್ ಹಾರ್ದಿಕ್ ಪಾಲು?

ನವದೆಹಲಿ, ಮೇ 7: ಈ ಬಾರಿಯ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೈಯಲ್ಲೇ ಉಳಿಯುವ ಮುನ್ಸೂಚನೆ ಕಾಣುತ್ತಿದೆ. ಗೆಲುವಿನ ಹಾದಿಗೆ ಬಂದಿರುವ ಮುಂಬೈ ಹಾರ್ದಿಕ್ ಅಧಿಕ ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಳ್ಳಲು ನೆರವು ನೀಡಿದೆ.
ಕಳೆದೆರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಗೆಲುವಿನ ಲಯವನ್ನು ಕಂಡುಕೊಂಡಿರುವ ಮುಂಬೈ ಇಂಡಿಯನ್ಸ್ ಈ ಐಪಿಎಲ್ ಟ್ರೋಫಿ ಕನಸನ್ನು ಸದ್ಯಕ್ಕೆ ಜೀವಂತವಾಗಿರಿಸಿಕೊಂಡಿದೆ. ಆ ಮೂಲಕ ತಂಡದ ಆಟಗಾರರ ಪ್ರತಿಭೆ ಅನಾವರಣಕ್ಕೂ ವೇದಿಕೆ ನೀಡಿದೆ.
ಸದ್ಯದ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಪಾಂಡ್ಯ ಮುಂದಿದ್ದು, ಅವರ ಬೆನ್ನ ಹಿಂದೆ ಮುಂಬೈ ತಂಡದ ಮತ್ತೊಬ್ಬ ಆಟಗಾರ ಮಾಯಾಂಕ್ ಮಾರ್ಕಂಡೆ ಇದ್ದಾರೆ. ಒಟ್ಟು 9 ಇನ್ನಿಂಗ್ಸ್ ಆಡಿರುವ ಪಾಂಡ್ಯ 27.4 ಓವರ್ ಗಳಿಗೆ 14 ವಿಕೆಟ್ ಗಳನ್ನು ಕಬಳಿಸಿದ್ದಾರೆ. 10 ಇನ್ನಿಂಗ್ಸ್ ಆಡಿರುವ ಮಾಯಾಂಕ್ 32 ಓವರ್ ಗಳಿಗೆ 13 ವಿಕೆಟ್ ಗಳನ್ನು ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಉಮೇಶ್
ಇವರಿಬ್ಬರನ್ನು ಬಿಟ್ಟರೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಉಮೇಶ್ ಯಾದವ್ 13, ಡೆಲ್ಲಿ ಡೇರ್ ಡೆವಿಲ್ಸ್ ನ ಟ್ರೆಂಟ್ ಬೌಲ್ಟ್ ಅವರೂ 13 ವಿಕೆಟ್ ಗಳನ್ನು ಪಡೆದು ಪರ್ಪಲ್ ಕ್ಯಾಪ್ ಪೈಪೋಟಿಯ ದಾರಿಯಲ್ಲಿದ್ದಾರೆ.
ಆದರೆ ಪರ್ಪಲ್ ಕ್ಯಾಪ್ ಹಾರ್ದಿಕ್ ಕೈಯಲ್ಲೇ ಉಳಿಯುವ ಸಾಧ್ಯತೆಯಿದೆ. ಪ್ಲೇಆಫ್ ಸುತ್ತಿಗೆ ಪ್ರವೇಶಿಸಬೇಕಾದರೆ ಮುಂಬೈಗೆ ಇನ್ನೂ ಸಾಲು ಸಾಲು ನಾಲ್ಕು ಗೆಲುವುಗಳು ಅಗತ್ಯವಿರುವುದರಿಂದ ಮುಂಬೈ ಗೆಲುವಿನತ್ತ ದೃಷ್ಟಿ ನೆಟ್ಟಿದೆ. ಮುಂಬೈಯ ಟ್ರೋಫಿ ಕನಸು ಜೀವಂತವಾಗಿದ್ದಷ್ಟೂ ಪರ್ಪಲ್ ಕ್ಯಾಪ್ ಗೆ ಪಾಂಡ್ಯ ಅವರೇ ಒಡೆಯರಾಗಿ ಉಳಿಯದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications