Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ವಿರುದ್ಧ ಹೈದರಾಬಾದ್ ಜಯ: ಇದು 7ನೇ ಸೂರ್ಯೋದಯ

IPL 2018: Hyderabad Vs Delhi: Williamson guides SRH to a clinical win

ಹೈದರಾಬಾದ್, ಮೇ 6: ಐಪಿಎಲ್ 11ನೇ ಆವೃತ್ತಿಯ 36ನೇ ಸೆಣಸಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ 7ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಡೆಲ್ಲಿ ನೀಡಿದ್ದ 164 ಸಾಧಾರಣ ರನ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 19.5 ಓವರ್ ಗಳಲ್ಲಿ 3 ವಿಕೆಟ್ ಕಳೆದು ಗೆಲುವಿನ ಗೆರೆ ದಾಟಿತು. ಈ ಮೂಲಕ ಗೆಲುವಿನ ಲಯಕ್ಕೆ ಬಂದಿದ್ದ ಡೆಲ್ಲಿಗೆ ಮತ್ತೆ ಹಿನ್ನಡೆಯಾದಂತಾಗಿದೆ.

ಸ್ಕೋರ್ ಕಾರ್ಡ್

ಸನ್ ರೈಸರ್ ಪರ ಬ್ಯಾಟ್ ಬೀಸಿದ ಅಲೆಕ್ಸ್ ಹೇಲ್ಸ್ 45 (31), ಶಿಖರ್ ಧವನ್ 33 (30), ಕೇನ್ ವಿಲಿಯಮ್ಸನ್ ಅಜೇಯ 32 (30), ಮನೀಶ್ ಪಾಂಡೆ 21 (17) ಮತ್ತು ಯೂಸೂಫ್ ಪಠಾಣ್ ಅಜೇಯ 27 (12) ರನ್ ನೆರವಿನೊಂದಿಗೆ ಹೈದರಾಬಾದ್ 7ನೇ ಗೆಲುವನ್ನು ಸಂಭ್ರಮಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಐಯರ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಕಲೆ ಹಾಕಿ ಸನ್ ರೈಸರ್ಸ್ ಹೈದರಾಬಾದ್ ಗೆ 164 ರನ್ ಟಾರ್ಗೆಟ್ ನೀಡಿತ್ತು.

ಪೃಥ್ವಿ ಶಾ 65 (36), ಶ್ರೇಯಸ್ ಐಯರ್ 44 (36), ರಿಶಬ್ ಪಂತ್ 18 (19) ಮತ್ತು ವಿ ಶಂಕರ್ ಅಜೇಯ 23 (13) ರನ್ ಒಟ್ಟು ಸೇರಿಸಿ ಹೈದರಾಬಾದ್ ಗೆ ಸಾಧಾರಣ ಗರಿಷ್ಠ ಮೊತ್ತದ ರನ್ ಗುರಿ ನೀಡಿದರು.

ಆದರೆ ದಾಂಡಿಗ ಮ್ಯಾಕ್ಸ್ ವೆಲ್ ರನ್ ಕೊಡುಗೆಯಿಲ್ಲದ್ದು ಮತ್ತು ಆಡಿದ ಬ್ಯಾಟ್ಸ್ಮನ್ ಗಳು ಸ್ಫೋಟಕ ಬ್ಯಾಟಿಂಗ್ ತೋರದಿದ್ದಿದ್ದು ಡೆಲ್ಲಿಗೆ ಒಂದು ರೀತಿಯಲ್ಲಿ ಹಿನ್ನಡೆಯೇ ಸರಿ. ಯಾಕೆಂದರೆ ಬಲಾಡ್ಯ ಹೈದರಾಬಾದ್ ತಂಡಕ್ಕೆ ಗರಿಷ್ಠ ರನ್ ಗುರಿ ನೀಡಿ ಕಟ್ಟಿ ಹಾಕುವಲ್ಲಿ ಡೆಲ್ಲಿ ಎಡವಿತ್ತು.

ಡೆಲ್ಲಿಯ ಬೌಲಿಂಗ್ ದಾಳಿಯೂ ಇಲ್ಲಿ ನಡೆಯಲಿಲ್ಲ. ಮೊದಲ ವಿಕೆಟ್ ಕಳೆದುಕೊಳ್ಳುವಾಗಲೇ ಹೈದರಾಬಾದ್ ಖಾತೆಯಲ್ಲಿ 76 ರನ್ ಒಟ್ಟು ಸೇರಿತ್ತು. ಅನಂತರ ಧವನ್ ಬೇಗ ಔಟಾದರಾದರೂ ಕೇನ್ ವಿಲಿಯಮ್ಸನ್ ಕ್ರೀಸಿಗಂಟಿಕೊಂಡು ಡೆಲ್ಲಿಯನ್ನು ಸೋಲಿನಂಚಿಗೆ ತಳ್ಳಿದರು.

ಅಂತೂ 10 ಪಂದ್ಯಗಳನ್ನಾಡಿರುವ ಡೆಲ್ಲಿ ಮೂರೇ ಗೆಲುವುಗಳೊಂದಿಗೆ ಅಂಕಪಟ್ಟಿಯ 7ನೇ ಸ್ಥಾನಕ್ಕೆ ಕುಸಿದಿದೆ. ಗಂಭೀರ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಡೆಲ್ಲಿ ತುಸು ಚೇತರಿಕೆಯ ನಿರೀಕ್ಷೆ ಮೂಡಿಸಿತ್ತಾದರೂ ಈಗ ಮತ್ತದೇ ಸೋಲಿನ ರಾಗ ಶುರು ಮಾಡಿದಂತಾಗಿದೆ.

23 ರನ್ ನೀಡಿ 2 ವಿಕೆಟ್ ಕಬಳಿಸಿದ ಹೈದರಾಬಾದ್ ಬೌಲರ್ ರಶೀದ್ ಖಾನ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ.

Story first published: Sunday, May 6, 2018, 0:51 [IST]
Other articles published on May 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+