Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2018: ಆರೆಂಜ್ ಕ್ಯಾಪ್ ಕೇನ್ ವಿಲಿಯಮ್ಸನ್ ಪಾಲು

IPL 2018: Kane Williamson Becomes Third Highest-scorer in Single Season

ಮುಂಬೈ, ಮೇ 27: ಐಪಿಎಲ್ 11ನೇ ಆವೃತ್ತಿಯಲ್ಲಿ ಅಧಿಕ ರನ್ ಗಳಿಸಿದ ಸಾಧನೆಗಾಗಿ ಆರೆಂಜ್ ಕ್ಯಾಪ್, ಸನ್ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪಾಲಾಗಿದೆ. ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಡೆಲ್ಲಿ ಡೇರ್ ಡೆವಿಲ್ಸ್ ನ ರಿಷಬ್ ಪಂತ್ ಅವರನ್ನು ವಿಲಿಯಮ್ಸನ್ ಸರಿಗಟ್ಟಿದ್ದಾರೆ.

2018ರ ಐಪಿಎಲ್ ನಲ್ಲಿ 17 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ಸನ್ 735 ರನ್ ಪೇರಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಅಧಿಕ ರನ್ ಗಳಿಸಿದವರ ಸಾಲಿನಲ್ಲಿ ಮೊದಲಿಗರಾಗಿದ್ದ ರಿಷಬ್ ಪಂತ್ 14 ಪಂದ್ಯಗಳಲ್ಲಿ 684 ರನ್ ಗಳಿಸಿದ್ದರು.

ನಿರೀಕ್ಷೆಯಂತೆಯೇ ಡೆಲ್ಲಿ ಡೇರ್ ಡೆವಿಲ್ಸ ತಂಡದ ಯುವ ಆಟಗಾರ ರಿಷಬ್ ದುರಾದೃಷ್ಟಕ್ಕೀಡಾದರು. ಡೆಲ್ಲಿ ತಂಡವೇನಾದರೂ ಪ್ಲೇ ಆಫ್ ಪ್ರವೇಶಿಸಿದ್ದರೆ ಆರೆಂಜ್ ಕ್ಯಾಪ್ ಪಂತ್ ಕೈಯಲ್ಲೇ ಉಳಿಯುವುದರಲ್ಲಿತ್ತು.

ಆರೆಂಜ್ ಕ್ಯಾಪ್ ಗಾಗಿ ಅಧಿಕ ರನ್ ಸಾಧನೆಯ ಯಾದಿಯಲ್ಲಿ ಕ್ರಮವಾಗಿ 10 ಸ್ಥಾನದೊಳಗೆ ಲೋಕೇಶ್ ರಾಹುಲ್ (ಪಂಜಾಬ್) 3ನೇ, ಅಂಬಾಟಿ ರಾಯುಡು (ಚೆನ್ನೈ) 4ನೇ, ಜಾಸ್ ಬಟ್ಲರ್ (ರಾಜಸ್ಥಾನ್) 5ನೇ, ವಿರಾಟ್ ಕೊಹ್ಲಿ (ಬೆಂಗಳೂರು) 6ನೇ, ಸೂರ್ಯಕುಮಾರ್ ಯಾದವ್ (ಮುಂಬೈ) 7ನೇ, ದಿನೇಶ್ ಕಾರ್ತಿಕ್ (ಕೋಲ್ಕತ್ತಾ) 8ನೇ, ಕ್ರಿಸ್ ಲಿನ್ (ಕೋಲ್ಕತ್ತಾ) 9ನೇ ಮತ್ತು ಎಬಿ ಡಿವಿಲಿಯರ್ಸ್ (ಬೆಂಗಳೂರು) 10ನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Sunday, May 27, 2018, 22:32 [IST]
Other articles published on May 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+