ಐಪಿಎಲ್ 2018: ಕಿಂಗ್ಸ್ ಇಲೆವೆನ್ ಗೆ ರಾಯಲ್ಸ್ ಸವಾಲ್

ಇಂದೋರ್, ಮೇ 6: ಈ ಐಪಿಎಲ್ ಆವೃತ್ತಿಯಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿರುವ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಇಂದು ಮಧ್ಯಪ್ರದೇಶದ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ಹಣಾಹಣಿ ನಡೆಯಲಿದೆ.
ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರವ ಪಂಜಾಬ್ ಮತ್ತು 8ನೇ ಸ್ಥಾನದಲ್ಲಿರುವ ರಾಜಸ್ಥಾನ್ ನಡುವಿನ ಈ ಸವಾಲಿನಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ತಂಡಗಳ ಬಲಾಬಲ ಗಮನಿಸಿದರೆ ಎರಡೂ ಉಲ್ಟಾಪಲ್ಟ ಸಾಧನೆ ಹೊಂದಿರುವ ತಂಡಗಳು. ಹೇಗೆಂದರೆ ಪಂಜಾಬ್ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 3 ಸೋಲು ಕಂಡಿದೆ. ಅದೇ ರಾಜಸ್ಥಾನ 8 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 5ರಲ್ಲಿ ಸೋಲು ಕಂಡಿದೆ.
ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ಜೊತೆ ಸೋಲಿನ ಕಹಿಯುಂಡಿತ್ತು. ಕಾರಣ ಗೆಲುವು ಅನಿವಾರ್ಯವಾಗಿದ್ದರಿಂದ ಮುಂಬೈ ಶಕ್ತಿಮೀರಿ ಆಡಿ ಪಂದ್ಯವನ್ನು ತನ್ನಡೆಗೆ ಸೆಳೆದುಕೊಂಡಿತ್ತು.
ಇತ್ತ ರಾಜಸ್ಥಾನ ತಂಡವೂ ಯುವ ತಂಡ ಡೆಲ್ಲಿ ಡೇರ್ ಡೆವಿಲ್ಸ್ ಎದುರು ಹಿಂದಿನ ಪಂದ್ಯದಲ್ಲಿ ಸೋತು ಅಂಕಪಟ್ಟಿಯ ತಳಕ್ಕೆ ಕುಸಿದಿತ್ತು. ಪಂಜಾಬ್ ಗೆ ಹೋಲಿಸಿದರೆ ರಾಜಸ್ಥಾನಕ್ಕೆ ಇಂದಿನ ಗೆಲುವು ತುಂಬಾ ಅನಿವಾರ್ಯವಾಗಿರುವುದರಿಂದ ಪಂದ್ಯ ಎತ್ತ ತಿರುಗುತ್ತೋ ಹೇಳಲಾಗದು.
ಪಂಜಾಬ್ ನಲ್ಲಿ ಮಿಲ್ಲರ್, ಗೇಲ್, ಯುವರಾಜ್, ಮನೋಜ್ ತಿವಾರಿ ಪಂದ್ಯ ತಿರುಗಿಸುವ ಆಟಗಾರರಾಗಿದ್ದರೆ, ರಾಜಸ್ಥಾನದಲ್ಲಿ ರಹಾನೆ, ಬೆನ್ ಸ್ಟೋಕ್ಸ್, ಉನಾದ್ಕತ್, ಬಿನ್ನಿ ಅಪಾಯಕಾರಿ ಆಟಗಾರರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications