Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿ

IPL 2018 KKR v RR: In-form Knights face resilient Royals in Eliminator

ಕೋಲ್ಕತ್ತಾ, ಮೇ 23: ಒಂದು ವಾರದ ಹಿಂದಷ್ಟೇ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮುಖಾಮುಖಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮತ್ತೆ ಮುಖಾಮುಖಿಯಾಗಿವೆ. ಆದರೆ ಮತ್ತೀಗ ಅದೇ ಈಡನ್ ಗಾರ್ಡನ್ ನಲ್ಲಿ ಇತ್ತಂಡಗಳು ಎದುರುಬದುರಾಗಿರುವುದು ಈ ಆವೃತ್ತಿಯ ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕಾಗಿ.

ಮಂಗಳವಾರ ಮಳೆಯಾಗಿದ್ದರಿಂದ ಎರಡೂ ತಂಡಗಳ ಅಭ್ಯಾಸಕ್ಕೆ ಅಡ್ಡಿಯಾಗಿತ್ತು. ಬುಧವಾರವೂ ಪಂದ್ಯದ ವೇಳೆ ಬಳೆಯಾಗುವ ನಿಋಇಕ್ಷೆಯಿದೆ. ಈ ಮಧ್ಯೆ ಬುಧವಾರದ ಕೋಲ್ಕತ್ತಾ-ರಾಜಸ್ಥಾನ್ ಹಣಾಹಣಿಯಲ್ಲಿ ಸೋಲುವ ತಂಡ ಐಪಿಎಲ್ ಪ್ರಶಸ್ತಿ ಸುತ್ತಿನಿಂದ ಹೊರ ಬೀಳಲಿದೆ. ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್ ಗೆ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.

ಈ ಹಿಂದೆ ಫ್ಲೇ-ಆಫ್ ಸುತ್ತಿಗೆ ತಂಡಗಳು ಪ್ರಬಲ ಪೈಪೋಟಿ ನಡೆಸಿದ್ದವು. ಈಗ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವ ಅವಕಾಶ ಎರಡೂ ತಂಡಗಳ ಕೈಯಲ್ಲಿದೆ. ಅವಕಾಶವನ್ನು ತಂಡಗಳು ಹೇಗೆ ಬಳಸಿಕೊಳ್ಳಲಿದೆ ಎಂಬುದು ಆಯಾ ತಂಡಗಳ ಜಾಣ್ಮೆಯ ಆಟ ನಿರ್ಧರಿಸಬಲ್ಲದು.

ಹಿಂದಿನ ಇತ್ತಂಡಗಳ ಮುಖಾಮುಖಿಯಲ್ಲಿ ಕೋಲ್ಕತ್ತಾ ತಂಡ ರಾಜಸ್ಥಾನ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತ್ತು. ಇಂದಿನ ಪಂದ್ಯದ ಗೆಲುವು ಯಾರಪರವಾಗಿ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕಿದೆ.

ರಾಜಸ್ಥಾನ್ ತಂಡದಿಂದ ಇಂಗ್ಲೆಂಡ್ ಬಲಾಡ್ಯ ಆಟಗಾರರಾದ ಜಾಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಹೊರ ನಡೆದಿರುವುದು ತಂಡಕ್ಕೆ ಹೊಡೆತ ನೀಡಿದೆ. ಮೇಲ್ನೋಟಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ತಂಡವಾಗಿ ಕಂಡರೂ ರಾಜಸ್ಥಾನ್ ರಾಯಲ್ಸ್ ಪಂದ್ಯವನ್ನು ಹೇಗೆ ಬಳಸಿಕೊಳ್ಳಲಿದೆ ಎಂಬುದರ ಮೇಲೆ ಇಂದು ಗೆಲ್ಲುವ ತಂಡ ನಿರ್ಧಾರವಾಗಲಿದೆ.

Story first published: Wednesday, May 23, 2018, 15:05 [IST]
Other articles published on May 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+