ಈಡನ್ ಗಾರ್ಡನ್ ಗೆಲುವು ಸೂಪರ್ ಕಿಂಗ್ಸ್ ಗೋ, ನೈಟ್ ರೈಡರ್ಸ್ ಗೋ?

ಕೋಲ್ಕತ್ತಾ, ಮೇ 3: ಐಪಿಎಲ್ 2018ರ ಆವೃತ್ತಿಯ 33ನೇ ಪಂದ್ಯವಾಗಿ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ಸೆಣಸಾಟ ನಡೆಯಲಿದೆ.
ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಟಾಪರ್ ಆಗಿರುವ ಚೆನ್ನೈ ಪಂದ್ಯ ಗೆದ್ದು ಅಂಕಪಟ್ಟಿಯ ಕೆಳಗಿನ ಸ್ಥಾನಗಳಲ್ಲಿರುವ ತಂಡಗಳಿಂದ ಅಂಕಗಳ ಅಂತರ ಹೆಚ್ಚಿಸಿಕೊಳ್ಳುತ್ತೋ ಅಥವಾ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾಕ್ಕೆ ಮೇಲೇರಲು ಹಾದಿ ಮಾಡಿ ಕೊಡುತ್ತೋ ಕಾದು ನೋಡಬೇಕಿದೆ.
ಚೆನ್ನೈ vs ಕೋಲ್ಕತ್ತಾ ಸ್ಕೋರ್ ಕಾರ್ಡ್
ಇಂದಿನ ಪಂದ್ಯದ ಟಾಸ್ ಗೆದ್ದು ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿದೆ.
ಈ ಆವೃತ್ತಿಯಲ್ಲಿ ಚೆನ್ನೈ ಆಡಿರುವ ಎಂಟು ಪಂದ್ಯಗಳಲ್ಲಿ ಬರೀ ಎರಡರಲ್ಲಷ್ಟೇ ಸೋತು ಒಟ್ಟು 12 ಅಂಕಗಳನ್ನು ಸಂಪಾದಿಸಿದ್ದರೆ, ಕೋಲ್ಕತ್ತಾ ಆಡಿರುವ ಎಂಟು ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕಗಳನ್ನು ಸಂಪಾದಿಸಿಕೊಂಡಿದೆ.
ಹಿಂದಿನ ಎಲ್ಲಾ ಪಂದ್ಯಗಳಲ್ಲೂ ಚೆನ್ನೈ ಉತ್ತಮ ಪ್ರದರ್ಶನವನ್ನೇ ನೀಡಿದೆ. ಇದೇ ಕಾರಣಕ್ಕೆ ಧೋನಿ ನಾಯಕತ್ವದ ಚೆನ್ನೈ ಅಂಕಪಟ್ಟಿಯಲ್ಲಿ ಮೇಲ್ ಸ್ಥಾನವನ್ನು ಕಾಯ್ದುಕೊಂಡಿದೆ.
ಕಳೆದೆರಡು ಐಪಿಎಲ್ ಆವೃತ್ತಿಗಳಿಂದ ಬ್ಯಾನ್ ಗೊಳಗಾಗಿದ್ದ ಚೆನ್ನೈ ಎರಡು ವರ್ಷಗಳ ನಂತರ ಈ ಐಪಿಎಲ್ ಆರಂಭದ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಎದುರು ಜಯ ಸಾಧಿಸುವ ಮೂಲಕ ತಾನು ಬಲಾಡ್ಯ ತಂಡವೆನ್ನುವುದನ್ನು ಸಾರಿ ಹೇಳಿತ್ತು.
ಹಿಂದಿನ ಎಲ್ಲ ಚೆನ್ನೈ ಪ್ರದರ್ಶನವನ್ನು ಗಮನಿಸಿದಾಗ ಇಂದಿನ ಪಂದ್ಯದಲ್ಲಿ ಚೆನ್ನೈ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಗಂತ ಕೋಲ್ಕತ್ತಾ ತಂಡವೂ ತಿರುಗಿ ಬೀಳುವುದನ್ನು ಇಲ್ಲವೆನ್ನುವಂತಿಲ್ಲ. ವಿಶಿಲ್ ಪೋಡು ತಂಡ ಚೆನ್ನೈಯಲ್ಲಿ ಧೋನಿ, ಬ್ರಾವೋ, ರಾಯುಡು, ಜಡೇಜಾ ಬ್ಯಾಟ್ ಬೀಸಿದರೆ, ತಾಹಿರ್, ಆಸಿಫ್ ಬೌಲಿಂಗ್ ದಾಳಿ ನಡೆಸಬಲ್ಲರು. ಇದರಲ್ಲೂ ಆಲ್ ರೌಂಡರ್ ಬ್ರಾವೋ ಹೆಚ್ಚು ಅಪಾಯಕಾರಿ.
ಹಾಗಂತ ಆಲ್ ರಂಡರ್ ರಸೆಲ್, ಶಿವಮ್ ಮಾವಿ, ಕ್ರಿಸ್ ಲಿನ್, ಸುನೀಲ್ ನಾರಾಯಣ್ ಇರುವ ಕೋಲ್ಕತ್ತಾ ತಂಡವೂ ಚೆನ್ನೈಗೆ ಅಘಾತ ನೀಡುವ ಸಾಧ್ಯತೆಯೂ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications