ಫಾರ್ಮ್ ನಲ್ಲಿರೋ ಮುಂಬೈಯನ್ನು ಮಣಿಸುತ್ತಾ ಕೋಲ್ಕತ್ತಾ?

ಕೋಲ್ಕತ್ತಾ, ಮೇ 9: ಐಪಿಎಲ್ 2018 ಸೀಸನ್ ನ 41ನೇ ಪಂದ್ಯವಾಗಿ ಇಂದು ಹಾಲಿಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ತವರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ಕೋಲ್ಕತ್ತಾ ಗೆಲ್ಲುವ ನೆಲೆಯಲ್ಲಿ ಆಡಿದರೂ ಮುಂಬೈಗೆ ಗೆಲುವು ಅನಿವಾರ್ಯವಾಗಿರುವುದರಿಂದ ಪಂದ್ಯ ಕುತೂಹಲವನ್ನು ಕಾದಿರಿಸಿಕೊಂಡಿದೆ.
ಈ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೋಲ್ಕತ್ತಾ 5ರಲ್ಲಿ ಗೆಲುವು ಸಾಧಿಸಿ 5ರಲ್ಲಿ ಸೋತಿದೆ. ಮುಂಬೈ ಇಂಡಿಯನ್ಸ್ ಆಡಿರುವ 10 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು 6 ಪಂದ್ಯಗಳನ್ನು ಸೋತಿದೆ.
ಅಂಕಪಟ್ಟಿಯಲ್ಲಿ ಕೋಲ್ಕತ್ತಾ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಮುಂಬೈ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಕಳೆದ ಭಾನುವಾರ ಇವೇ ಎರಡು ತಂಡಗಳು ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ 13ರನ್ ಗೆಲುವು ದಾಖಲಿಸಿತ್ತು.
ಈ ಬಾರಿ ಕೋಲ್ಕತ್ತಾ ಸೇಡು ತೀರಿಸಿಕೊಳ್ಳುತ್ತಾ ಅಥವಾ ಸೋತು ತಲೆ ಬಾಗುತ್ತಾ ಕಾದು ನೋಡಬೇಕಿದೆ. ಅಂತೂ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಗೆಲುವಿನ ಲಯ ಕಂಡುಕೊಂಡಿದ್ದು ಇವತ್ತಿನ ಪಂದ್ಯ ಸೇರಿ ಇನ್ನುಳಿದ ನಾಲ್ಕರಲ್ಲೂ ಗೆಲ್ಲಲೇಬೇಕಿದೆ. ಹಾಗಾಗಿ ಇಂದಿನ ಪಂದ್ಯದಲ್ಲೂ ಮುಂಬೈಯೇ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಕೋಲ್ಕತ್ತಾದಲ್ಲಿ ದಿನೇಶ್ ಕಾರ್ತಿಕ್, ಸುನೀಲ್ ನಾರಾಯಣ್, ಶುಬ್ ಮಾನ್ ಗಿಲ್, ರಸೆಲ್ ಬಲಾಡ್ಯರಾದರೆ, ಮುಂಬೈಯಲ್ಲಿ ರೋಹಿತ್, ಸೂರ್ಯಕುಮಾರ್, ಹಾರ್ದಿಕ್, ಕೃಣಾಲ್, ಪೊಲಾರ್ಡ್, ಲೆವಿಸ್ ಅಪಾಯಕಾರಿ ಆಟಗಾರರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications