For Quick Alerts
ALLOW NOTIFICATIONS  
For Daily Alerts
 

ಸೂಪರ್ ಸ್ಯಾಮ್, ಕೆಕೆಆರ್ ವಿರುದ್ಧ ಚೆನ್ನೈಗೆ ಭರ್ಜರಿ ಜಯ

By Manjunatha
ipl 2018 match 05 chennai super kings kolkata knight riders

ಚೆನ್ನೈ, ಏಪ್ರಿಲ್ 10: ಸಾವಿರಾರು ದಿನಗಳ ಬಳಿಕ ತವರು ನೆಲದಲ್ಲಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಜಯ ದಾಖಲಿಸಿದೆ, ಐಪಿಎಲ್ 2018ರ ಐದನೆ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳ ಜಯ ಗಳಿಸಿತು.

ಚೆನ್ನೈ ಚೇಸಿಂಗ್:
ಕೊನೆಯ ಓವರ್ ನಲ್ಲಿ ಗೆಲ್ಲಲು 17ರನ್ ಗಳಿಸಿದ ಬೇಕಿದ್ದ ಚೆನ್ನೈ ತಂಡಕ್ಕೆ ಮತ್ತೊಮ್ಮೆ ಬ್ರಾವೋ ಬಲ ತಂದರು. 204ರನ್ ಗುರಿಯನ್ನು ಮುಟ್ಟಿದ ಸೂಪರ್ ಕಿಂಗ್ಸ್ ತನ್ನ ತವರು ನೆಲದಲ್ಲಿ ಮೊದಲ ಜಯ ದಾಖಲಿಸಿತು. 19.5 ಓವರ್ ಗಳಲ್ಲಿ 205/5 ಸ್ಕೋರ್ ಮಾಡಿ 5 ವಿಕೆಟ್ ಗಳ ಗೆಲುವು ಸಾಧಿಸಿ ಸಂಭ್ರಮಿಸಿದರು.

ಸ್ಕೋರ್ ಕಾರ್ಡ್, ಗ್ರಾಫಿಕ್ಸ್, ಕಾಮೆಂಟ್ರಿ

ಶೇನ್ ವಾಟ್ಸನ್ 19 ಎಸೆತಗಳಲ್ಲಿ 42ರನ್ (3 ಬೌಂಡರಿ, 3 ಸಿಕ್ಸರ್), ಅಂಬಟಿ ರಾಯುಡು 26 ಎಸೆತಗಳಲ್ಲಿ 39ರನ್ ಗಳಿಸಿ ಉತ್ತಮ ಜೊತೆಯಾಟ ಸಾಧಿಸಿದರು. ರೈನಾ 14, ನಾಯಕ ಧೋನಿ 25ರನ್ ಗಳಿಸಿದರು.

ಸೂಪರ್ ಸ್ಯಾಮ್ : ಚೊಚ್ಚಲ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸ್ಯಾಮ್ ಬಿಲ್ಲಿಂಗ್ಸ್ 23 ಎಸೆತಗಳಲ್ಲಿ 56(3 ಬೌಂಡರಿ, 5ಸಿಕ್ಸರ್) ರನ್ ಗಳಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಅಂತಿಮವಾಗಿ ಜಡೇಜ ಹಾಗೂ ಬ್ರಾವೋ ಸಮಯೋಚಿತ ಆಟ ಪ್ರದರ್ಶಿಸಿ, ತಂಡವನ್ನು ಗೆಲುವಿನ ರೇಖೆ ದಾಟಿಸಿದರು.


ಕೆಕೆಆರ್ ಇನ್ನಿಂಗ್ಸ್ :ಕುಸಿತ ಕಂಡಿದ್ದ ಕೊಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಆಂಡ್ರೂ ರಸೆಲ್ ಆಸರೆಯಾದರು, ಭಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಕೊಲ್ಕತ್ತ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೊಲ್ಕತ್ತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 202ರನ್ ಗಳಿಸಿತು. ಆಂಡ್ರೂ ರಸೆಲ್ ಕೇವಲ 36 ಎಸೆತದಲ್ಲಿ 88 ರನ್ ಭಾರಿಸಿ ಒಂದು ಹಂತದಲ್ಲಿ ಕುಸಿದಿದ್ದ ಕೊಲ್ಕತ್ತ ತಂಡವನ್ನು ಮೇಲಕ್ಕೆತ್ತಿದ್ದರು. ರಸೇಲ್ ಅವರ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್ ಮತ್ತು ಒಂದು ಬೌಂಡರಿ ಇತ್ತು.

ರಸೇಲ್ ಅವರ ಏಕವ್ಯಕ್ತಿ ಪ್ರದರ್ಶನ ಹೊರತಾಗಿ ರಾಬಿನ್ ಉತ್ತಪ್ಪ (29) ಮತ್ತು ನಾಯಕ ದಿನೇಶ್ ಕಾರ್ತಿಕ್ (26) ರನ್ ಗಳಿಸಿದರು.

ಆರಂಭದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಚೆನ್ನೈ ತಂಡ ಅಂತಿಮವಾಗಿ ತನ್ನ ಹಿಡಿತ ಕಳೆದುಕೊಂಡಿತು. ಅವರಿಗೆ ರಸೇಲ್ ಅವರ ಅಬ್ಬರದ ಬ್ಯಾಟಿಂಗ್‌ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಚೆನ್ನೈ ಪರ ಶೇನ್ ವಾಟ್ಸನ್‌ 2, ರವೀಂದ್ರ ಜಡೇಜಾ 1, ಹರಿಬಜನ್ ಸಿಂಗ್ 1, ಶಾರ್ದೂಲ್ ಠಾಕೂರ್ 1 ವಿಕೆಟ್ ಕಬಳಿಸಿದರು. ದುಬಾರಿಯಾದ ಡ್ವಾಯ್ನ್‌ ಬ್ರಾವೊ ಕೇವಲ 3 ಓವರ್‌ಗಳಲ್ಲಿ 50 ರನ್ ಬಿಟ್ಟುಕೊಟ್ಟರು.

ಎರಡೂ ತಂಡಗಳ ಆಡುವ 11 ಆಟಗಾರರ ಪಟ್ಟಿ ಇಂತಿವೆ...

ಚೆನ್ನೈ ಸೂಪರ್‌ ಕಿಂಗ್ಸ್‌
ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಶೇನ್ ವ್ಯಾಟ್ಸನ್‌, ಅಂಬಟಿ ರಾಯಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ಹರ್ಬಜನ್ ಸಿಂಗ್, ಸ್ಯಾಮ್ ಬಿಲ್ಲಿಂಗ್ಸ್‌, ದೀಪಕ್ ಚಾಹರ್, ಇಮ್ರಾನ್ ತಾಹಿರ್, ಶಾರ್ದೂಲ್ ಠಾಕೂರ್,

ಕೊಲ್ಕತ್ತ ನೈಟ್‌ ರೈಡರ್ಸ್‌
ದಿನೇಶ್ ಕಾರ್ತಿಕ್ (ನಾಯಕ), ರಾಬಿನ್ ಉತ್ತಪ್ಪ, ಸುನಿಲ್ ನರೇನ್, ಆಂಡ್ರೂ ರಸೆಲ್, ಕ್ರಿಸ್ ಲೇನ್, ನಿತಿಶ್ ರಾನಾ, ಪಿಯೂಷ್ ಚಾವ್ಲಾ, ವಿನಯ್ ಕುಮಾರ್, ಟಾಮ್ ಕರ್ರನ್, ಕುಲದೀಪ್ ಯಾದವ್, ಕಿಂರು ಸಿಂಗ್.

Story first published: Wednesday, April 11, 2018, 0:04 [IST]
Other articles published on Apr 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+