Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2018: ಬೆಂಗಳೂರು ವಿರುದ್ಧ ರೋಹಿತ್, ಲೆವಿಸ್ ಭರ್ಜರಿ ಆಟ

ipl 2018 match 14 royal challengers bangalore mumbai indians

ಐಪಿಎಲ್‌ 2018ರ 14ನೇ ಪಂದ್ಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡು, ಆರಂಭಿಕ ಲಾಭ ಪಡೆದರೂ ನಂತರ ಮುಂಬೈ ಬ್ಯಾಟ್ಸ್ ಮನ್ ಗಳು ವಿಜೃಂಭಿಸಿದರು. ಆರ್ ಸಿಬಿಗೆ ಪಂದ್ಯ ಗೆಲ್ಲಲು 214ರನ್ ಗುರಿಯನ್ನು ಮುಂಬೈ ನೀಡಿದೆ.

ಲೈವ್ ಸ್ಕೋರ್ ಕಾರ್ಡ್, ಕಾಮೆಂಟ್ರಿ

ಐಪಿಎಲ್‌ನ ಇಂದಿನ ಪಂದ್ಯ ಸಮಾನ ದುಃಖಿಗಳ ನಡುವೆ ನಡೆಯುತ್ತಿದೆ. ಆರ್‌ಸಿಬಿ ತಾನಾಡಿರುವ ಮೂರು ಪಂದ್ಯದಲ್ಲಿ 1 ಗೆದ್ದು 2ರಲ್ಲಿ ಸೋತಿವೆ. ಇನ್ನು ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಖಾತೆಯನ್ನೇ ತೆರೆದಿಲ್ಲ. ಪಂದ್ಯ ಮುಂಬೈ ತವರಿನಲ್ಲಿ ನಡೆಯುತ್ತಿರುವುದರಿಂದ ಗೆಲ್ಲುವ ಒತ್ತಡ ರೋಹಿತ್ ಶರ್ಮಾ ಮೇಲೆ ಹೆಚ್ಚಿದೆ.

ಆರ್‌ಸಿಬಿ ತಂಡವು, ಕಳೆದ ಮೂರೂ ಪಂದ್ಯದಲ್ಲಿ ವಿಫಲರಾಗಿರುವ ಬ್ರೆಂಡನ್ ಮೆಕಲಮ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಆಲ್‌ರೌಂಡರ್ ಕೋರಿ ಆಂಡರ್ಸನ್‌ಗೆ ಸ್ಥಾನ ನೀಡಿದೆ. ಕಳೆದ ಪಂದ್ಯದಲ್ಲಿ ಆಡಿರದ ಸರ್ಫರಾಜ್‌ ಅವರನ್ನು ಈ ಪಂದ್ಯದಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಎರಡೂ ತಂಡಗಳು ಬ್ಯಾಟ್ಸ್‌ಮನ್‌ಗಳನ್ನು ನಂಬಿಕೊಂಡಿರುವ ತಂಡವಾಗಿದ್ದು, ಇಂದಿನ ಪಂದ್ಯದಲ್ಲಿ ಎರಡೂ ಕಡೆಯಿಂದ ಭರ್ಜರಿ ಬ್ಯಾಟಿಂಗ್‌ ಅನ್ನು ನಿರೀಕ್ಷಿಸಲಾಗಿದೆ. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಈ ವರೆಗೆ ಟೂರ್ನಿಯಲ್ಲಿ ಮಿಂಚದೇ ಇರುವುದು ಮುಂಬೈ ತಂಡದ ಬಹುದೊಡ್ಡ ಸಮಸ್ಯೆಯಾಗಿದೆ. ಆರ್‌ಸಿಬಿಗೆ ತನ್ನ ಬೌಲಿಂಗ್‌ ವಿಭಾಗದ್ದೇ ಚಿಂತೆಯಾಗಿದೆ.

ತಂಡಗಳು ಇಂತಿವೆ..

ಆರ್‌ಸಿಬಿ
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಕ್ವಿಂಟನ್ ಡಿಕಾಕ್ (ಕೀಪರ್), ಮಂದೀಪ್ ಸಿಂಗ್, ಕೋರಿ ಆಂಡರ್ಸನ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕ್ರಿಸ್ ವೋಕ್ಸ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.

ಮುಂಬೈ ಇಂಡಿಯನ್ಸ್‌
ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇವೆನ್ ಲಿವೀಸ್, ಇಶಾನ್ ಕಿಶನ್ (ಕೀಪರ್), ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯಾ, ಹಾರ್ದಿಕ್ ಪಾಂಡ್ಯಾ, ಮಿಶೆಲ್ ಜಾನ್ಸನ್, ಮಯಾಂಕ್ ಅಗರ್ವಾಲ್, ಜಸ್ಪ್ರೀತ್ ಬುಮ್ರಾ, ಮುಸ್ತಫಿಜೂರ್ ರೆಹಮಾನ್.

Story first published: Tuesday, April 17, 2018, 22:06 [IST]
Other articles published on Apr 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+