Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಬಿಗಿ ಬೌಲಿಂಗ್‌ಗೆ ತತ್ತರಿಸಿದ ಹೈದರಾಬಾದ್

ipl 2018 match 23 Mumbai Indians Sunrisers Hyderabad

ಮುಂಬೈ, ಏಪ್ರಿಲ್ 24: ಮುಂಬೈ ಬೌಲರ್‌ಗಳ ಬಿಗಿ ಬೌಲಿಂಗ್ ರೆಟ್ಟೆ ಬಿಚ್ಚಲು ವಿಫಲರಾದ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಕೇವಲ 118 ರನ್‌ಗಳಿಗೆ ಆಲ್‌ ಔಟ್ ಆದರು. ಗೆಲ್ಲಲು ಮುಂಬೈಗೆ ಬೇಕಿರುವುದು ಕೇವಲ 119 ರನ್‌ಗಳಷ್ಟೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ ಉತ್ತಮ ಬೌಲಿಂಗ್ ದಾಳಿ ನಡೆಸಿತು. ಹೈದರಾಬಾದ್ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್‌ ಸ್ಕ್ರೀಜಿನಲ್ಲಿ ಹೆಚ್ಚು ಹೊತ್ತು ನಿಲ್ಲದಂತೆ ನೋಡಿಕೊಂಡರು ಮುಂಬೈ ಬೌಲರ್‌ಗಳು.

ಧವನ್ 5ಕ್ಕೆ ಬೌಲ್ಡ್ ಆದರೆ, ಸಾಹಾ ಖಾತೆ ತೆರೆಯುವ ಮುಂಚೆ ಪೆವಿಲಿಯನ್ ಸೇರಿಕೊಂಡರು. ಮನೀಶ್ ಪಾಂಡೆ 16 ರನ್ ಗಳಿಸಿ ಕ್ಯಾಚಿತ್ತರು, ಶಕಿಬ್ 2ರನ್‌ಗೆ ರನ್‌ಔಟ್ ಆದರು, ರಶೀದ್ 6 , ನಬಿ 14 ರನ್‌ಗಳಿಸಲಷ್ಟೆ ಶಕ್ತರಾದರು. ಇದ್ದುದ್ದರಲ್ಲಿ ನಾಯಕ ವಿಲಿಯಮ್ಸ್‌ನ್ 29 ಹಾಗೂ ಯೂಸಫ್‌ ಪಠಾಣ್ 29 ರನ್ ಗಳಿಸಿ ಹೈದರಾಬಾದ್ ಮಾನ ಉಳಿಸಿದರು.

ಪಂದ್ಯದ ಸ್ಕೋರ್ ಕಾರ್ಡ್

ಮುಂಬೈ ಪರ ಬೌಲರ್‌ಗಳಾದ ಮಾರ್ಕೆಂಡೇಯಾ 2, ಹಾರ್ದಿಕ್ ಪಾಂಡ್ಯಾ 2, ಮಿಶೆಲ್ ಮೆಕ್‌ಲಾನ್ 2 ವಿಕೆಟ್ ಗಳಿಸಿದರು, ಜಸ್ಪ್ರೀತ್ ಬುಮ್ರಾ ಹಾಗೂ ನುಫ್ತಫಿಜುರ್ ರೆಹಮಾನ್ ತಲಾ ಒಂದು ವಿಕೆಟ್ ಗಳಿಸಿದರು.

ಗೆಲ್ಲಲು ಮುಂಬೈ ತಂಡಕ್ಕೆ ಕೇವಲ 119 ರನ್‌ಗಳ ಅವಶ್ಯಕತೆ ಇದ್ದು, ತವರಿನ ಪ್ರೇಕ್ಷಕರ ಎದುರು ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಲು ಮುಂಬೈಗೆ ಉತ್ತಮ ಅವಕಾಶ ಇದೆ.

ತಂಡಗಳು ಹೀಗಿವೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಎವಿನ್ ಲೆವಿಸ್, ಇಶಾನ್ ಕಿಶಾನ್, ಕೀರನ್ ಪೊಲ್ಲಾರ್ಡ್, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಮಿಚೆಲ್ ಮೆಕ್‌ಕ್ಲೆನಾಗನ್, ಮಯಂಕ್ ಮಾರ್ಖಂಡೆ, ಜಸ್‌ಪ್ರೀತ್‌ ಬೂಮ್ರಾ, ಮುಸ್ತಫಿಜುರ್ ರೆಹಮಾನ್.

ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಶಿಖರ್ ಧವನ್, ಮನೀಶ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್ವೃದ್ಧಿಮಾನ್ ಸಹಾ, ರಶೀದ್ ಖಾನ್, ಸಿದ್ಧಾರ್ಥ ಕೌಲ್, ಬಸಿಲ್ ಥಂಪಿ, ಮೊಹಮದ್ ನಬಿ.

Story first published: Tuesday, April 24, 2018, 23:58 [IST]
Other articles published on Apr 24, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+