ಪಂಜಾಬ್ ಬಿಗಿ ಬೌಲಿಂಗ್, ಪರದಾಡಿದ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು

ಹೈದರಾಬಾದ್, ಏಪ್ರಿಲ್ 26: ಪಂಜಾಬ್ ತಂಡದ ಬಿಗಿ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು 132 ರನ್‌ಗಳಿಗೆ ತಮ್ಮ ಇನ್ನಿಂಗ್ಸ್‌ಗೆ ಅಂತ್ಯ ಹಾಡಿ, ಪಂಜಾಬ್‌ಗೆ ಗೆಲ್ಲಲು 133 ರನ್‌ಗಳ ಅಲ್ಪ ಗುರಿ ನೀಡಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸ್ಪಟ್ಟ ಸನ್‌ರೈಸರ್ಸ್ ತಂಡ ಆರಂಭದಿಂದಲೂ ರನ್ ಗಳಿಸಲು ಪರದಾಡಿತು. ಪಂಜಾಬ್ ತಂಡದ ಬಿಗಿ ಬೌಲಿಂಗ್‌ಮುಂದೆ ಹೈದರಾಬಾದ್‌ನ ಯಾವೊಬ್ಬ ಬೌಲರ್ ಸಹ ಹೆಚ್ಚು ಕಾಲ ಸ್ಕ್ರೀಜಿನಲ್ಲಿ ಉಳಿಯಲಿಲ್ಲ.
ಪಂಜಾಬ್ ಬೌಲರ್‌ಗಳು ಒಡ್ಡಿದ ಸವಾಲನ್ನು ಅಲ್ಪ ಮಟ್ಟಿಗೆ ಎದುರಿಸಿದ್ದೆಂದರೆ ಕನ್ನಡಿದ ಮನೀಶ್ ಪಾಂಡೆ ಮತ್ತು ಶಕಿಬ್ ಉಲ್ ಹಸನ್. ಕೊನೆಯಲ್ಲಿ ಬಂದ ಯೂಸಫ್ ರನ್ ಗತಿಗೆ ಅಲ್ಪ ವೇಗ ತಂದುಕೊಟ್ಟರಷ್ಟೆ.
ಎರಡು ಜೀವದಾನ ಪಡೆದ ಮನೀಶ್ ಪಾಂಡೆ 51 ಎಸೆತದಲ್ಲಿ 54 ರನ್ ಗಳಿಸಿದರು. ಒಂದು ಜೀವದಾನ ಪಡೆದ ಶಕಿಬ್ ಉಲ್ ಹಸನ್ 28 ರನ್ ಗಳಿಸಲಷ್ಟೆ ಶಕ್ತವಾದರು. ಯೂಸಫ್ ಪಠಾಣ್ 21 ರನ್ ಗಳಿಸಿದರು.
ಪಂಜಾಬ್ ಪರ ಅತ್ಯದ್ಭುತ ಬೌಲಿಂಗ್ ನಡೆಸಿದ ಅಂಕಿತ್ ರಜಪೂತ್ ನಾಲ್ಕು ಓವರ್‌ಗೆ ಕೇವಲ 15 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದು ಗಮನ ಸೆಳೆದರು. ಮುಜೀಬ್ ಉರ್ ರೆಹಮಾನ್ ನಾಲ್ಕು ಓವರ್‌ನಲ್ಲಿ 17 ರನ್ ನೀಡಿ ಒಂದು ವಿಕೆಟ್ ಪಡೆದರು.
ಪಂಜಾಬ್‌ಗೆ ಗೆಲ್ಲಲು 133 ರನ್ ಅವಶ್ಯಕತೆ ಇದೆ. ಆದರೆ ಸನ್‌ರೈಸರ್ಸ್ ತಂಡದ ಬೌಲಿಂಗ್ ಕೂಡಾ ಶಕ್ತಿಯುತವಾಗಿದ್ದು, ಕಳೆದ ಪಂದ್ಯದಲ್ಲಿ ಅವರು ಮುಂಬೈ ಅನ್ನು ಕೇವಲ 87 ರನ್‌ಗಳಿಗೆ ಆಲ್‌ಔಟ್ ಮಾಡಿ ಪಂದ್ಯ ಗೆದ್ದಿದ್ದರು. ಹಾಗಾಗಿ ಪಂಜಾಬ್ ತಂಡಕ್ಕೆ ಈ ಪಂದ್ಯ ಗೆಲ್ಲುವುದು ಸುಲಭವಂತೂ ಅಲ್ಲ.
ತಂಡಗಳು ಹೀಗಿವೆ
ಸನ್‌ರೈಸರ್ಸ್ ಹೈದರಾಬಾದ್: ವೃದ್ಧಿಮಾನ್ ಸಹಾ, ಶಿಖರ್ ಧವನ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಯೂಸುಫ್ ಪಠಾಣ್, ದೀಪಕ್ ಹೂಡಾ, ಶಕೀಬ್ ಅಲ್ ಹಸನ್, ಮೊಹಮದ್ ನಬಿ, ಬಸಿಲ್ ಥಂಪಿ, ರಶೀದ್ ಖಾನ್, ಸಿದ್ಧಾರ್ಥ ಕೌಲ್
ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಕರುಣ್ ನಾಯರ್, ಮಯಂಕ್ ಅಗರ್‌ವಾಲ್, ಆರೋನ್ ಫಿಂಚ್, ಮನೋಜ್ ತಿವಾರಿ, ರವಿಚಂದ್ರನ್ ಅಶ್ವಿನ್, ಆಂಡ್ರೂ ಟೈ, ಬರಿಂದರ್ ಸ್ರಾನ್, ಮೋಹಿತ್ ಶರ್ಮಾ, ಮುಜೀಬ್ ಉರ್ ರೆಹಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications