ಸೋತು ಕಂಗೆಟ್ಟ ಮುಂಬೈ ಇಂಡಿಯನ್ಸ್‌ಗೆ ಸೂಪರ್ ಕಿಂಗ್ಸ್ ಸವಾಲು

ಪುಣೆ, ಏಪ್ರಿಲ್ 28: ಅಂಕಪಟ್ಟಿಯಲ್ಲಿ ಮೊಟ್ಟ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪುಣೆಯಲ್ಲಿ ಪಂದ್ಯ ನಡೆಯಲಿದೆ.
ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಚೆನ್ನೈ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ, ಮುಂಬೈ ತಂಡದ ಅಂಕಿಅಂಶ ಇದಕ್ಕೆ ತದ್ವಿರುದ್ಧವಾಗಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಹಾಲಿ ಚಾಂಪಿಯನ್ ಮುಂಬೈ ಕೇವಲ ಒಂದು ಪಂದ್ಯದಲ್ಲಿ ಗೆದ್ದು ಈ ಆವೃತ್ತಿಯಲ್ಲಿ ಪ್ಲೇ ಆಫ್‌ಗೂ ಅನರ್ಹವಾಗುವ ಭೀತಿಯಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿ ಜಯಗಳಿಸಿರುವ ಚೆನ್ನೈ ತಂಡ ಈ ಪಂದ್ಯದಲ್ಲಿಯೂ ಫೇವರಿಟ್ ಎನಿಸಿದೆ. ಮುಂಬೈ ವಿರುದ್ಧ ಗೆದ್ದರೆ ಅದರ ಪ್ಲೇ ಆಫ್ ಸ್ಥಾನ ಮತ್ತಷ್ಟು ಭದ್ರವಾಗಲಿದೆ. ಮುಂಬೈ ಜಯಗಳಿಸಿದರೆ ಕೊನೆಯ ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಮೇಲೇರುವ ಮೂಲಕ ತುಸು ಸಮಾಧಾನಪಟ್ಟುಕೊಳ್ಳಬಹುದು.
ಉಭಯ ತಂಡಗಳು ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಅದರಲ್ಲಿ ಚೆನ್ನೈ ಕೇವಲ ಒಂದು ಎಸೆತ ಬಾಕಿ ಇರುವಾಗ ಒಂದು ವಿಕೆಟ್‌ನಿಂದ ರೋಚಕ ಜಯ ಸಾಧಿಸಿತ್ತು. ಸೋಲುವ ಹಂತದಲ್ಲಿದ್ದ ಚೆನ್ನೈ ತಂಡಕ್ಕೆ ಡ್ವೇಯ್ನ್ ಬ್ರಾವೊ ಆಪದ್ಬಾಂಧವರಾಗಿ ಗೆಲುವಿನ ತೀರಕ್ಕೆ ಸಾಗಿಸಿದ್ದರು.
ಶೇನ್ ವಾಟ್ಸನ್, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಸ್ಯಾಮ್ ಬಿಲ್ಲಿಂಗ್ಸ್, ಮುಂತಾದ ಆಟಗಾರರನ್ನು ಒಳಗೊಂಡಿರುವ ಚೆನ್ನೈ ಅತ್ಯುತ್ತಮ ಫಾರ್ಮ್‌ನಲ್ಲಿದೆ.
ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಲೆವಿಸ್, ಇಶಾನ್ ಕಿಶಾನ್, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಮುಸ್ತಫಿಜುರ್ ರಹಮಾನ್ ಮುಂತಾದ ಆಟಗಾರರಿದ್ದರೂ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಸೋತರೆ, ಮುಂಬೈ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications