ಐಪಿಎಲ್ 2018: ಗೆಲ್ಲಲೇಬೇಕಾದ ಡೆಲ್ಲಿಗೆ ರಾಜಸ್ಥಾನ ಸವಾಲು

ನವದೆಹಲಿ, ಮೇ 2: ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ಮಧ್ಯೆ ಇಂದು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ 32ನೇ ಕಾದಾಟ ನಡೆಯಲಿದೆ.
ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ರಾಜಸ್ಥಾನ್ ಒಟ್ಟು 6 ಅಂಕ ಗಳಿಸಿದ್ದರೆ, 8 ಪಂದ್ಯಗಳಲ್ಲಿ 2 ಗೆಲುವನ್ನಷ್ಟೇ ಕಂಡಿರುವ ಡೆಲ್ಲಿ 4 ಅಂಕಗಳೊಂದಿಗೆ ಅಂಕಪಟ್ಟಿಯ ತಳ ಸೇರಿದೆ.
ಹಾಗೆ ನೋಡಿದರೆ ರಾಜಸ್ಥಾನಕ್ಕೂ ಇಂದಿನ ಪಂದ್ಯ ಗೆಲುವ ಅನಿವಾರ್ಯ. ಆದರೆ ಡೆಲ್ಲಿಗೆ ಗೆಲ್ಲದೆ ಬೇರೆ ವಿಧಿಯೇ ಇಲ್ಲ. ಕಳೆದ ಬಾರಿಯೂ ಚೆನ್ನೈ ಎದುರು ಸೋತ ಸಂಕಟದಲ್ಲಿರುವ ಡೆಲ್ಲಿ ಇಂದಿನ ಪಂದ್ಯವೂ ಸೋತರೆ ಮತ್ತೆ ಐಪಿಎಲ್ ಪ್ರಶಸ್ತಿ ಕನಸು ಬಹುದೂರ ಸಾಗುವ ಸಾಧ್ಯತೆಯಿರುವುದರಿಂದ ಡೆಲ್ಲಿ ಇಲ್ಲಿ ಗೆಲ್ಲಲು ಸರ್ವತಾ ಯತ್ನಿಸುವ ನಿರೀಕ್ಷೆಯಿದೆ.
ಕಳೆದ ಬಾರಿಯ ಇತ್ತಂಡಗಳ ಮುಖಾಮುಖಿಯಲ್ಲಿ ರಾಜಸ್ಥಾನ ತಂಡ ಡೆಲ್ಲಿಯೆದುರು 10 ರನ್ ಜಯ ಸಾಧಿಸಿತ್ತು. ಈ ಸಂದರ್ಭ ಮಳೆಯೂ ಕೊಂಚ ಪಂದ್ಯವನ್ನು ಕಾಡಿತ್ತು. ಈ ಬಾರಿ ಆ ಸೋಲಿಗೂ ಡೆಲ್ಲಿ ಪ್ರತೀಕಾರ ತೀರಿಸುವ ಸಾಧ್ಯತೆಯಿದೆ.
ಹೆಚ್ಚಿನ ಯುವಕರೇ ತುಂಬಿರುವ ಡೆಲ್ಲಿಯಲ್ಲಿ ಇಂದು ಕಾಲಿನ್ ಮುನ್ರೋ, ರಿಶಬ್ ಪಂತ್, ಟ್ರೆಂಟ್ ಬೌಲ್ಟ್, ಶ್ರೇಯಸ್, ಶಾ ಪ್ರಬಲ ಆಟಗಾರರಾದರೆ, ರಾಜಸ್ಥಾನದಲ್ಲಿ ಬೆನ್ ಸ್ಟೋಕ್ಸ್, ಉನಾದ್ಕತ್, ಸೋಧಿ, ನಾಯಕ ರಹಾನೆ ತಂಡಕ್ಕೆ ಬಲ ತುಂಬಬಲ್ಲವರು.
ಟಾಸ್ ಗೆದ್ದಿರುವ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications