Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಪ್ಲೇ ಆಫ್‌ ಕನಸು ಜೀವಂತವಾಗಿರಲಿದೆಯೇ?

ipl 2018 match 37 Mumbai Indians Kolkata Knight Riders

ಮುಂಬೈ, ಮೇ 6: ಪ್ಲೇ ಆಫ್‌ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಬಯಸಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ನಾಲ್ಕರ ಘಟ್ಟ ಪ್ರವೇಶಿಸಲು ಮರು ಹೋರಾಟ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ನಡುವಣ ರೋಚಕ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಟೂರ್ನಿಯ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಅಂಕಪಟ್ಟಿಯಲ್ಲಿ ತಳಭಾಗದಲ್ಲಿದ್ದ ಮುಂಬೈ ಇಂಡಿಯನ್ಸ್, ಈಗ ಗೆಲುವಿನ ಹಾದಿ ಕಂಡುಕೊಂಡು ಐದನೇ ಸ್ಥಾನಕ್ಕೆ ಏರಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸುವ ಬಯಕೆಗೆ ಶಕ್ತಿ ಸಿಗಲಿದೆ.

ಮುಂಬೈ ತಂಡದ ಆರಂಭಿಕ ಬ್ಯಾಟಿಂಗ್ ಶಕ್ತಿಯುತವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೆವಿಸ್ ಬಿರುಸಿನ ಆರಂಭ ಒದಗಿಸಿತ್ತಿದ್ದಾರೆ. ಆದರೆ, ಇಶಾನ್ ಕಿಶಾನ್, ನಾಯಕ ರೋಹಿತ್ ಶರ್ಮಾ, ಜೆಪಿ ಡುಮಿನಿ, ಕೀರನ್ ಪೊಲಾರ್ಡ್ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಸಹೋದರರು ತಂಡದ ದೊಡ್ಡ ಶಕ್ತಿಗಳಾಗಿದ್ದಾರೆ.

ipl 2018 match 37 Mumbai Indians Kolkata Knight Riders

ಬೌಲಿಂಗ್‌ನಲ್ಲಿ ತಂಡ ಬಲವಾಗಿದೆ. ಮಿಚೆಲ್‌ ಮೆಕ್ಲೆಂಗ್‌ಹಾನ್, ಜಸ್‌ಪ್ರೀತ್ ಬೂಮ್ರಾ, ಮಯಂಕ್ ಮಾರ್ಖಂಡೆ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಪರಿಣಾಮಕಾರಿ ದಾಳಿ ನಡೆಸಬಲ್ಲರು.

ಕೋಲ್ಕತಾಗೆ ಹ್ಯಾಟ್ರಿಕ್ ಗೆಲುವಿನ ಬಯಕೆ
ಹಿಂದಿನ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದೆ. ಎರಡು ಅಂಕ ಪಡೆದರೆ ಕೋಲ್ಕತಾ ಸ್ಥಾನದ ನಾಲ್ಕರ ಘಟ್ಟದಲ್ಲಿ ಮತ್ತಷ್ಟು ಭದ್ರಗೊಳ್ಳಲಿದೆ.

ಮುಂಬೈ ತಂಡಕ್ಕೆ ಹೋಲಿಸಿದರೆ ಕೋಲ್ಕತಾ ಎರಡೂ ವಿಭಾಗಗಳಲ್ಲಿ ಹೆಚ್ಚು ಸಮತೋಲನ ಹೊಂದಿದೆ. ಸುನಿಲ್ ನರೇನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಮಿಂಚುತ್ತಿದ್ದಾರೆ. ನಿತೀಶ್ ರಾಣಾ, ನಾಯಕ ದಿನೇಶ್ ಕಾರ್ತಿಕ್, ಶುಭ್‌ಮನ್ ಗಿಲ್, ರನ್ ಕಲೆಹಾಕುತ್ತಿದ್ದಾರೆ. ಆದರೆ, ಕ್ರಿಸ್ ಲಿನ್ ಮತ್ತು ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ವೈಫಲ್ಯ ಕಾಡುತ್ತಿದೆ. ಒಂದೆರಡು ಪಂದ್ಯದಲ್ಲಿ ಉತ್ತಮವಾಗಿ ಆಡಿದರೂ, ಅಬ್ಬರದಾಟ ಇನ್ನೂ ಕಂಡಿಬಂದಿಲ್ಲ.

ಬೌಲಿಂಗ್‌ನಲ್ಲಿ ಸ್ಪಿನ್ ವಿಭಾಗ ಶಕ್ತಿಯುತವಾಗಿದೆ. ಸುನಿಲ್ ನರೇನ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್ ಅನುಭವ ಕೆಲಸ ಮಾಡುತ್ತಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ ಕಾಡುತ್ತಿದೆ. ಅನುಭವಿ ಮಿಷೆಲ್ ಜಾನ್ಸನ್ ಬಲು ದುಬಾರಿಯಾಗುತ್ತಿದ್ದಾರೆ. ಟಾಮ್ ಕರನ್, ಆಂಡ್ರೂ ರಸೆಲ್, ಶಿವಂ ಮವಿ ದುಬಾರಿಯಾಗುತ್ತಿದ್ದಾರೆ.

Story first published: Sunday, May 6, 2018, 14:00 [IST]
Other articles published on May 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+