ಚೆನ್ನೈ ವಿರುದ್ಧ ವಿರೋಚಿತ ಸೋಲು ಕಂಡ ಹೈದರಾಬಾದ್

ಹೈದರಾಬಾದ್, ಏಪ್ರಿಲ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ 20ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡುತ್ತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಚೆನ್ನೈ ಈ ಪಂದ್ಯ ಗೆಲ್ಲುವ ಫೇವರೀಟ್ ಎನಿಸಿಕೊಂಡಿದೆ.
ಪಂದ್ಯದ ಸ್ಕೋರ್ ಕಾರ್ಡ್, ಗ್ರಾಫಿಕ್ಸ್
183ರನ್ ಗಳ ಗುರಿ ಬೆನ್ನು ಹತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಕಾದಿತ್ತು. ರಿಕಿ ಬೂಯಿ ದೀಪಕ್ ಚಾಹರ್ ಎಸೆತದಲ್ಲಿ ಶೂನ್ಯ ಸುತ್ತಿ ಔಟಾದರು. ನಾಯಕ ಕೇನ್ ವಿಲಿಯಮ್ಸನ್ 51 ಎಸೆತಗಳಲ್ಲಿ 84ರನ್ (5 ಬೌಂಡರಿ, 5ಸಿಕ್ಸರ್) ಹಾಗೂ ಯೂಸುಫ್ ಪಠಾಣ್ 27 ಎಸೆತಗಳಲ್ಲಿ 45ರನ್ ಗಳಿಸಿ ಹೋರಾಟ ಮುಂದುವರೆಸಿದರು. ರಷಿದ್ ಖಾನ್ 4 ಎಸೆತಗಳಲ್ಲಿ 17ರನ್ ಗಳಿಸಿದರು ಆದರೆ, ಅಂತಿಮವಾಗಿ 20ಓವರ್ ಗಳಲ್ಲಿ 178/6 ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ಚೆನ್ನೈ ಪರ ಸುರೇಶ್ ರೈನಾ ಅಜೇಯ 54ರನ್ (43ಎಸೆತ, 5 ಬೌಂಡರಿ, 2ಸಿಕ್ಸರ್) ಹಾಗೂ ಅಂಬಟಿ ರಾಯುಡು 79ರನ್ (37 ಎಸೆತ, 9 ಬೌಂಡರಿ, 4ಸಿಕ್ಸರ್) ಗಳಿಸಿದರೆ, ಧೋನಿ 12 ಎಸೆತಗಳಲ್ಲಿ 25ರನ್ ಗಳಿಸಿ ತಂಡದ ಮೊತ್ತವನ್ನು 182/3ಕ್ಕೇರಿಸಿದರು.

ಟಾಸ್ ವರದಿ : ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಭಾನುವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಐಪಿಎಲ್ 2018ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು.
ಸನ್ ರೈಸರ್ಸ್ ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮನೀಶ್ ಪಾಂಡೆ ಉತ್ತಮ ಲಯದಲ್ಲಿದ್ದಾರೆ. ಚೆನ್ನೈ ತಂಡದ ಸ್ಪಿನ್ನರ್ ಗಳಾದ ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹೀರ್ ಅವರು ರನ್ ನಿಯಂತ್ರಿಸಲು ವಿಫಲರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications