ಐಪಿಎಲ್ 2018: ಚಾಂಪಿಯನ್ ಮುಂಬೈ ಬಗ್ಗುಬಡಿದ ಬೆಂಗಳೂರು

ಬೆಂಗಳೂರು, ಮೇ 1: ಐಪಿಎಲ್ ಅಂಕಪಟ್ಟಿಯಲ್ಲಿ ಅಕ್ಕಪಕ್ಕದಲ್ಲಿರುವ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 31ನೇ ಕಾದಾಟದಲ್ಲಿ ಆರ್ ಸಿಬಿ ಮೇಲುಗೈ ಸಾಧಿಸಿ, ಪ್ಲೇ ಆಫ್ ಆಸೆ ಜೀವಂತ ಇರಿಸಿಕೊಂಡಿದೆ.
168ರನ್ ಗಳ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡವನ್ನು 153/7 ಸ್ಕೋರಿಗೆ ನಿಯಂತ್ರಿಸಿದ ಬೆಂಗಳೂರು ತಂಡ ಜಯಭೇರಿ ಬಾರಿಸಿತು.
ಮುಂಬೈ ಪರ ಜೆಪಿ ಡುಮಿನಿ 23, ಹಾರ್ದಿಕ್ ಪಾಂಡ್ಯ್ 50ರನ್, ಕೃನಾಲ್ ಪಾಂಡ್ಯ 23ರನ್ ಗಳಿಸಿ ಕೊಂಚ ಹೋರಾಟ ತೋರಿದರು. ಆರ್ ಸಿಬಿ ಪರ ಟಿಮ್ ಸೌಥಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಗಳಿಸಿದರು.
ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿರುವುದಿಂದ ಇಂದಿನ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ. ತಂಡಗಳ ಬಲಾಬಲ ಗಮನಿಸಿದರೆ ಇಂದು ಮುಂಬೈ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೂ ಬೆಂಗಳೂರು ತಂಡವೂ ಗೆಲ್ಲುವ ಸಾಧ್ಯತೆ ಇಲ್ಲದಿಲ್ಲ.
11ನೇ ಐಪಿಎಲ್ ಆವೃತ್ತಿಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಬೆಂಗಳೂರು ಮತ್ತು 6ನೇ ಸ್ಥಾನದಲ್ಲಿರುವ ಮುಂಬೈಗಳು ಇಂದು ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ವಿರುದ್ಧ ಜಯಿಸಿರುವುದರಿಂದ ಇಂದೂ ಸಹಜವಾಗಿ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಬೆಂಗಳೂರು ತಂಡದ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋತಿದ್ದು, ಇಂದು ಗೆಲ್ಲಲೇಬೇಕಾದ ಇಕ್ಕಟ್ಟಿನಲ್ಲಿದೆ. ಅದೂ ತವರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ಆರ್‌ಸಿಬಿಗೆ ಗೆಲ್ಲುವ ಒತ್ತಡ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications