ಟ್ವಿಟ್ಟರ್ ನಲ್ಲಿ ಧೋನಿಗೆ, ವಾಟ್ಸನ್ ಗೆ ವಿಷಲ್ ಪೋಡು!

ಬೆಂಗಳೂರು, ಮೇ 27: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದೆ. ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾದ ಶೇನ್ ವಾಟ್ಸನ್, ತಂತ್ರಗಾರಿಕೆ ಮೆರೆದ ನಾಯಕ ಎಂಎಸ್ ಧೋನಿ ಅವರ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಸುರಿಮಳೆ ಬಂದಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿ 178/6 ಸ್ಕೋರ್ ಮಾಡಿತು. ಕೇನ್ ವಿಲಿಯಮ್ಸನ್ 47ರನ್ ಗಳಿಸಿದರು. ಚೆನ್ನೈ ಪರ ಶೇನ್ ವಾಟ್ಸನ್ 57ಎಸೆತಗಳಲ್ಲಿ 117ರನ್ ( 11 ಬೌಂಡರಿ, 8 ಸಿಕ್ಸರ್) ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
ಲೀಗ್ ಹಂತದ ಕೊನೆಗೆ ಈ ಎರಡು ತಂಡಗಳು ಮೊದಲೆರಡು ಸ್ಥಾನ ಗಳಿಸಿದ್ದವು. ಕ್ವಾಲಿಫೈಯರ್ ನಲ್ಲಿ ಸೋಲು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ತಂಡವನ್ನು ಸೋಲಿಸಿ, ಫೈನಲ್ ತಲುಪಿತ್ತು. ಆದರೆ, ಲೀಗ್ ಹಾಗೂ ಫೈನಲ್ ಸೇರಿ ಚೆನ್ನೈ ವಿರುದ್ಧ ನಾಲ್ಕು ಪಂದ್ಯಗಳಲ್ಲೂ ಹೈದರಾಬಾದ್ ಸೋಲು ಕಂಡಿದ್ದು ವಿಶೇಷ.

ಫೈನಲ್ ನಲ್ಲಿ ಅಬ್ಬರಿಸಿದ ವಾಟ್ಸನ್
36 ವರ್ಷ ವಯಸ್ಸಿನ ಶೇನ್ ವಾಟ್ಸನ್ ಅವರು ಈ ಮುಂಚೆ ರಾಜಸ್ಥಾನ್ ರಾಯಲ್ಸ್ ಪರ ಆಡಿ ಕಪ್(2008) ಗೆದ್ದಿದ್ದರು. ಹೈದರಾಬಾದ್ ವಿರುದ್ಧ ನಡೆದ ಫೈನಲ್ಸ್ ನಲ್ಲಿ ಮೊದಲ ಹತ್ತು ಎಸೆತಗಳನ್ನು ಬಿಟ್ಟರೆ, 33 ಎಸೆತಗಳಲ್ಲಿ 50ರನ್ ಚೆಚ್ಚಿದರು, ಸಂದೀಪ್ ಶರ್ಮಗೆ 13ನೇ ಓವರ್ ನಲ್ಲಿ 26ರನ್ ಬಾರಿಸಿದರು. ನಂತರ ಶತಕ ಗಳಿಸಿ ಅಜೇಯರಾಗಿ ಉಳಿದರು.ಈ ಬಾರಿ ಎರಡು ಶತಕ ಹಾಗೂ ಎರಡು ಅರ್ಧಶತಕ ಜೊತೆಗೆ 555ರನ್ ಗಳಿಸಿದರು
ಭಾವನಾತ್ಮಕ ಸನ್ನಿವೇಶ
ಮತ್ತೊಮ್ಮೆ ಚಾಂಪಿಯನ್ ಆದ ಭಾವನಾತ್ಮಕ ಸನ್ನಿವೇಶ
ಚೆನ್ನೈಗೆ ಉತ್ತಮ ಕ್ರೀಡಾ ವರ್ಷ
ಇಂಡಿಯನ್ ಸೂಪರ್ ಲೀಗ್ ಗೆದ್ದ ಚೆನ್ನೈಯಿನ್ ಎಫ್ ಸಿ, ಐಪಿಎಲ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ
ಎಲ್ಲಾ ಸೀಸನ್ ಗಳಲ್ಲಿ ಪ್ಲೇ ಆಫ್ ಹಂತಕ್ಕೇರಿರುವುದು, 7 ಫೈನಲ್, 3 ಟ್ರೋಫಿ ಗೆದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಬಲ. CSK+MSD=IPL 🏆/Playoffs.
ವಿವಿಎಸ್ ಲಕ್ಷ್ಮಣ್
ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಕೂಡಾ ಆಗಿರುವ ಮಾಜಿ ಕ್ರೆಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ, ಈ ಬಾರಿ ಸನ್ ರೈಸರ್ಸ್ ಆಡಿದ ರೀತಿ ನೋಡಿ ಹೆಮ್ಮೆ ಎನಿಸುತ್ತದೆ. ಶೇನ್ ವಾಟ್ಸನ್ ಅದ್ಭುತ ಆಟದಿಂದ ಪಂದ್ಯ ನಮ್ಮ ಕೈತಪ್ಪಿತು. ಚೆನ್ನೈ ಕಪ್ ಗೆಲ್ಲಲು ಅರ್ಹ ತಂಡ ಎಂದಿದ್ದಾರೆ.
ಕ್ರಿಕೆಟರ್ ಜಹೀರ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್ ಗೆ ಸೂಪರ್ ಸೀಸನ್ ಇದು, ಧೋನಿ ಅವರ ನಾಯಕತ್ವದ ಬಗ್ಗೆ ಎರಡು ಮಾತಿಲ್ಲ. ಕಷ್ಟದ ಪಂದ್ಯವನ್ನು ಸುಲಭವಾಗಿ ಗೆಲ್ಲಿಸಿಕೊಡಬಲ್ಲ ತಂತ್ರಗಾರಿಕೆ ಧೋನಿಗೆ ಕರಗತವಾಗಿದೆ
ಸ್ನೂಕರ್ ಚಾಂಪಿಯನ್ ಪಂಕಾಜ್ ಅಡ್ವಾಣಿ
ಸ್ನೂಕರ್, ಬಿಲಿಯರ್ಡ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಟ್ವೀಟ್ ಮಾಡಿ, ಭಾರತೀಯ ಕ್ರಿಕೆಟ್ ನಲ್ಲಿ ಒಬ್ಬೇ ಒಬ್ಬ ಬಾಸ್ ಎಂಎಸ್ ಧೋನಿ, ನನ್ನ ಗೆಳೆಯನ ಗೆಲುವಿಗೆ ನಾನು ಸಂಭ್ರಮಿಸುತ್ತೇನೆ ಎಂದಿದ್ದಾರೆ.
ಕ್ರಿಕೆಟರ್ ಕೇದಾರ್ ಜಾಧವ್
ಇದು ಅಭಿಮಾನಿಗಳಿಗಾಗಿ ಗೆದ್ದ ಕಪ್, ನಾನು ಗಾಯಗೊಂಡು ತಂಡದಿಂದ ಹೊರ ಬಂದೆ. ಆದರೆ, ನೀವು ಗೆಲುವು ಸಾಧಿಸಿದ್ದು, ನನ್ನ ಗಾಯದ ನೋವು ಮರೆಸಿದೆ. ವಾಂಖೆಡೆಯಲ್ಲಿ ಆರಂಭಗೊಂಡು ವಾಂಖೆಡೆಯಲ್ಲಿ ಉತ್ತಮ ರೀತಿಯಲ್ಲಿ ಅಂತ್ಯಕಂಡಿದೆ. ನಾವು ಐಪಿಎಲ್ 2018 ಚಾಂಪಿಯನ್ಸ್ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications