ಎಂಎಸ್ ಧೋನಿ ತಮ್ಮ ಮೊದಲ ಪ್ರೀತಿ ಬಗ್ಗೆ ಹೇಳಿದ್ದೇನು?

ಚೆನ್ನೈ, ಮೇ 10: ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಎಂಎಸ್ ಧೋನಿ ಅವರು ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿದ್ದು ಕಡಿಮೆ.
ಧೋನಿ ಕುರಿತ ಚಿತ್ರದಲ್ಲಿ ಕಾಣಸಿಗದ ಹಲವು ಸಂಗತಿಗಳು ಇನ್ನೂ ಇವೆ ಎಂಬುದು ಎಲ್ಲರಿಗೂ ಗೊತ್ತು. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ 'ಎಂಎಸ್ ಧೋನಿ ಅನ್ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ಧೋನಿಯ ಈ ವಿಷಯದ ಪ್ರಸ್ತಾಪವೇ ಇರಲಿಲ್ಲ
ಐಪಿಎಲ್ 2018ರ ವಿಶೇಷ ಪುಟ | ಅಂಕಪಟ್ಟಿ
ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿ ಪ್ಲೇ ಆಫ್ ಹಂತಕ್ಕೇರಿಸಲು ಸಜ್ಜಾಗಿರುವ ಧೋನಿ, ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಧೋನಿ, ತಮ್ಮ ಮೊದಲ ಕ್ರಷ್ ಹೆಸರನ್ನು ಬಹಿರಂಗ ಮಾಡಿದ್ದಾರೆ. ಕೊನೆಯಲ್ಲಿ, ಇದನ್ನು ನನ್ನ ಹೆಂಡ್ತಿಗೆ ಹೇಳ್ಬೇಡಿ ಎಂದು ಚಟಾಕಿ ಹಾರಿಸಿದ್ದು ಈಗ ವೈರಲ್ ಆಗುತ್ತಿದೆ.
ಕಾರ್ಯಕ್ರಮದ ನಿರೂಪಕರು, ಧೋನಿಯ ಕ್ರಷ್ ಕುರಿತಾಗಿ ಪ್ರಶ್ನೆ ಮಾಡುತ್ತಾ, 'ಇಲ್ಲಿರುವ ಹೆಸರಲ್ಲಿ 'ಎ' ಅಕ್ಷರವಿದೆ. ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರ ಹೆಸರಲ್ಲಿ 'ಎ' ಅಕ್ಷರ ಇರುತ್ತದೆ' ಎಂದು ಹೇಳಿದರು. ಬಳಿಕ ಪ್ರತಿಕ್ರಿಯೆ ನೀಡಿದ ಧೋನಿ, ಹುಡುಗಿಯ ಹೆಸರಿನ ಮೂರನೇ ಅಕ್ಷರ 'ಎ' ಎಂದರು. ಕೊನೆಗೆ ಧೋನಿ ಬಳಿ ಬಂದು ಪ್ಲಕಾರ್ಡ್ ಎತ್ತಿ ಹಿಡಿದು ಹೆಸರನ್ನು ಪರಿಚಯಿಸಿದರು. 'ಹೌದು, ನನ್ನ ಮೊದಲ ಕ್ರಷ್ ಹೆಸರು ಸ್ವಾತಿ. ಆದರೆ, ನನ್ನ ಪತ್ನಿಗೆ ಇದನ್ನು ತಿಳಿಸಬೇಡಿ' ಎಂದು ನಗುತ್ತಲೇ ಹೇಳಿದರು.
ತಮ್ಮ ಮೊದಲ ಕ್ರಷ್ ಬಗ್ಗೆ ವಿವರಿಸಿದ ಧೋನಿ, ನನ್ನ ಶಾಲಾ ದಿನಗಳಲ್ಲಿ ಸಹಪಾಠಿಯಾಗಿದ್ದಳು. 1999ರಲ್ಲಿ ದ್ವಿತೀಯ ಪಿಯುಸಿಯಲ್ಲಿದ್ದಾಗ ಆಕೆಯನ್ನು ನಾನು ಕೊನೆಯ ಬಾರಿ ನೋಡಿದ್ದೆ. ರಾಂಚಿಯ ಶ್ಯಾಮಲಿಯಲ್ಲಿರುವ ಡಿಎವಿ ಜೆವಿಎಂನಲ್ಲಿ ಧೋನಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications