ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು

ಪುಣೆ, ಮೇ 21: ಸುರೇಶ್ ರೈನ (61/48) ಅವರ ಅಮೋಘ ಬ್ಯಾಟಿಂಗ್ ನೆರವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು ದಾಖಲಿಸಿದೆ.
ಪಂಜಾಬ್ ನೀಡಿದ್ದ 154 ರನ್ ಗುರಿ ಬೆನ್ನಟ್ಟಿದ ಚೆನ್ನೈ 19.1 ಓವರ್ ನಲ್ಲೇ 159 ರನ್ ಪೇರಿಸಿ ಸುಲಭ ಜಯ ಸಾಧಿಸಿರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ 19.4 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 153 ರನ್ ಪೇರಿಸಿ ಚೆನ್ನೈಗೆ 154 ರನ್ ಸುಲಭ ಗುರಿ ನೀಡಿತ್ತು.
ಪಂಜಾಬ್ ಪರ ಮನೋಜ್ ತಿವಾರಿ 35 (30), ಡೇವಿಡ್ ಮಿಲ್ಲರ್ 24 (22), ಕರುಣ್ ನಾಯರ್ 54 (26) ರನ್ ಕೊಡುಗೆ ಪಂಜಾಬ್ ತಂಡ ಎದುರಾಳಿಗೆ ತಕ್ಕ ಮಟ್ಟಿನ ರನ್ ಗುರಿ ನೀಡುವಲ್ಲಿ ನೆರವಾಯಿತು. ಗೇಲ್, ರಾಹುಲ್, ಫಿಂಚ್ ನಂತ ಬ್ಯಾಟ್ಸ್ಮನ್ ಗಳು ಕೈ ಕೊಟ್ಟಿದ್ದಕ್ಕೆ ಪಂಜಾಬ್ ಸೋಲಿನ ಬೆಲೆ ತೆತ್ತಿತು.
ಚೇಸಿಂಗ್ ಗೆ ಇಳಿದ ಚೆನ್ನೈ ಪರ ದೀಪಕ್ ಚಾಹರ್ 39 (20), ಹರ್ಭಜನ್ 19 (22), ಧೋನಿ ಅಜೇಯ 16 (7), ಡು ಪ್ಲೆಸಿಸ್ 14 (15) ರನ್ ನೆರವಿನೊಂದಿಗೆ ಚೆನ್ನೈ ಪಂಜಾಬ್ ಗೆಲುವು ತನ್ನದಾಗಿಸಿಕೊಂಡಿತು.
ಕೇವಲ 10 ರನ್ನಿಗೆ 4 ವಿಕೆಟ್ ಕಬಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ನ ಲುಂಗಿ ಎನ್ ಗಿಡಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸೋಲಿನೊಂದಿಗೆ ಪಂಜಾಬ್ ಪ್ಲೇಆಫ್ ಕನಸು ಕಮರಿದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications