ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ರಾಹುಲ್

ನವದೆಹಲಿ, ಮೇ 17: ಈ ಐಪಿಎಲ್ 11ನೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸದ್ಯಕ್ಕೆ ಪಂಜಾಬ್ ತಂಡದ ಕೆಎಲ್ ರಾಹುಲ್ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಒಟ್ಟು 652 ರನ್ ಕಲೆ ಹಾಕಿರುವ ರಾಹುಲ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ರಿಷಬ್ ಪಂತ್ ಅವರನ್ನು ಹಿಂದಿಕ್ಕಿದ್ದಾರೆ.
ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯಾಟದಲ್ಲಿ ಪಂಜಾಬ್ ಪರ ರಾಹುಲ್ ಭರ್ಜರಿ ಬ್ಯಾಟ್ ಬೀಸಿದ್ದರು. 60 ಎಸೆತಗಳನ್ನು ಎದುರಿಸಿದ ರಾಹುಲ್ 94 ಭರ್ಜರಿ ರನ್ ಗಳಿಸಿದ್ದರು.
ಈ ರನ್ ನೆರವಿನಿಂದಲೇ ರಾಹುಲ್ ಈಗ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ರಾಹುಲ್ ಕೆಳಗಿನ ಸ್ಥಾನಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ನ ರಿಷಬ್ ಪಂತ್ (582), ರಾಜಸ್ಥಾನ್ ರಾಯಲ್ಸ್ ನ ಜಾಸ್ ಬಟ್ಲರ್ (548), ಸನ್ ರೈಸರ್ಸ್ ಹೈದರಾಬಾದ್ ನ ಕೇನ್ ವಿಲಿಯಮ್ಸನ್ (544) ಚೆನ್ನೈ ಸೂಪರ್ ಕಿಂಗ್ಸ್ ನ ಅಂಬಾಟಿ ರಾಯುಡು (535) ಮೊದಲ ಐದು ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಅಧಿಕ ರನ್ ಪಟ್ಟಿಯಲ್ಲಿ ಮೊದಲನೆಯವರಾಗಿ ಗುರುತಿಸಿಕೊಂಡಿರುವ ರಾಹುಲ್ ಜೊತೆ ಸದ್ಯಕ್ಕೆ ಆರೆಂಜ್ ಕ್ಯಾಪ್ ಇದ್ದು, ಐಪಿಎಲ್ ಅಂತ್ಯದವರೆಗೂ ರಾಹುಲ್ ಮಿಂಚುತ್ತಾ ಸಾಗಿದರೆ ಆರೆಂಜ್ ಕ್ಯಾಪನ್ನು ಅವರೇ ಜಯಿಸಲಿದ್ದಾರೆ.
ಈವರೆಗೆ ಎರಡು ಬಾರಿ ಆರೆಂಜ್ ಕ್ಯಾಪ್ ಜಯಿಸಿದ ಕೀರ್ತಿಗೆ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಮತ್ತು ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications