ರಾಜಸ್ಥಾನಕ್ಕೆ ಗೆಲ್ಲಲು ಸಾಧಾರಣ ಗುರಿ ನೀಡಿದ ಸನ್‌ರೈಸರ್ಸ್

ಜೈಪುರ, ಏಪ್ರಿಲ್ 29: ರಾಜಸ್ಥಾನ ತಂಡದ ಬಿಗುವಿನ ಬೌಲಿಂಗ್ ಮುಂದೆ ದೊಡ್ಡ ಮೊತ್ತಗಳಿಸಲು ವಿಫಲವಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು 151 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ ರಾಜಸ್ಥಾನಕ್ಕೆ ಗೆಲ್ಲಲು 152 ರನ್‌ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಹೈದರಾಬಾದ್‌ನ ಭರವಸೆಯ ಬ್ಯಾಟ್ಸ್‌ಮನ್ ಧವನ್ ಕೇವಲ 7 ರನ್‌ಗೆ ಬೌಲ್ಡ್ ಆದರು. ಆದರೆ ಆ ನಂತರ ಇನ್ನಿಂಗ್ಸ್ ಸಂಬಾಳಿಸಿದ ಆರಂಭಿಕ ಬ್ಯಾಟ್ಸ್‌ಮನ್ ಹೇಲ್ಸ್ ಮತ್ತು ನಾಯಕ ವಿಲಿಯಮ್ಸ್ನ್ ಉತ್ತಮ ಆಟ ಆಡಿದರು.
ನಿಧಾನಗತಿಯ ಆಟವಾಡಿದ ಹೇಲ್ಸ್ 45 ರನ್ ಗಳಿಸಿದರು. ಭಿರುಸಿನ ಆಟವಾಡಿದ ವಿಲಿಯಮ್‌ಸನ್ 43 ಎಸೆತಕ್ಕೆ 63 ರನ್ ಚಚ್ಚಿದರು. ಇವರಿಬ್ಬರೂ ಔಟಾದ ನಂತರ ಬಂದ ಯಾವ ಆಟಗಾರನೂ ಸ್ಕ್ರೀಜಿನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲವಾದ್ದರಿಂದ ಸನ್‌ರೈಸರ್ಸ್ ತಂಡ ಕುಸಿತಕ್ಕೆ ಒಳಗಾಯಿತು.
ಹೈದರಾಬಾದ್ ಪರ ಜೋಫ್ರಾ ಆರ್ಚರ್ ಉತ್ತಮ ಬೌಲಿಂಗ್ ಮಾಡಿ 3 ವಿಕೆಟ್ ಗಳಿಸಿದರು. ಗೌತಮ್ 2, ಉನದ್ಕತ್ ಮತ್ತು ಸೋಧಿ ತಲಾ 1 ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ : ಅಜಿಂಕ್ಯ ರಹಾನೆ(ನಾಯಕ), ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಲೊಮ್ರೊರ್, ಜೆಫ್ ಆರ್ಚರ್, ಕೆ ಗೌತಮ್, ಧವಳ್ ಕುಲಕರ್ಣಿ, ಈಶ್ ಸೋಧಿ, ಜಯದೇವ್ ಉನದ್ಕತ್.
ಸನ್ ರೈಸರ್ಸ್ ಹೈದರಾಬಾದ್ : ಶಿಖರ್ ಧವನ್, ಅಲೆಕ್ಸ್ ಹೇಲ್,ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಶಕೀಬ್ ಅಲ್ ಹಸನ್, ವೃದ್ಧಿಮಾನ್ ಸಹಾ, ಯೂಸುಫ್ ಪಠಾಣ್, ರಶೀದ್ ಖಾನ್, ಬಸಿಲ್ ಥಾಂಪಿ, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications