ಪಂಜಾಬ್ ವಿರುದ್ಧ ಸೇಡು ತೀರಿಸಲು ರಾಜಸ್ಥಾನ್ ಗಿದು ಸಕಾಲ!

ಜೈಪುರ, ಮೇ 8: ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು 8ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮಧ್ಯೆ ಇಂದು ಜೈಪುರದಲ್ಲಿ 40ನೇ ಹಣಾಹಣಿ ನಡೆಯಲಿದೆ.
ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿರುವ ಪಂಜಾಬ್ 12 ಅಂಕ ಗಳಿಸಿದ್ದರೆ, 9 ಪಂದ್ಯಗಳಲ್ಲಿ 3ರಲ್ಲಷ್ಟೇ ಗೆದ್ದು 6 ಪಂದ್ಯಗಳನ್ನು ಸೋತಿರುವ ರಾಜಸ್ಥಾನ್ ಗೆ ಇವತ್ತು ಮಾಡು ಇಲ್ಲವೆ ಮಡಿ ಪಂದ್ಯ. ಇಂದಿನ ಪಂದ್ಯವನ್ನೇನಾದರೂ ರಾಜಸ್ಥಾನ ಸೋತರೆ ಐಪಿಎಲ್ ಸೀಸನ್ ನಿಂದ ಹೊರಬಿದ್ದಂತೆಯೇ.
ಕಳೆದ 38ನೇ ಪಂದ್ಯದಲ್ಲಿ ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳೇ ಮುಖಾಮುಖಿಯಾಗಿದ್ದವು. ಈ ಹಣಾಹಣಿಯಲ್ಲಿ ರಾಜಸ್ಥಾನ್ ಸೋಲಿನ ಯಾದಿ ಮುಂದುವರೆಸಿತ್ತು. ಪಂಜಾಬ್ ವಿರುದ್ಧ ರಾಜಸ್ಥಾನ್ 6 ವಿಕೆಟ್ ಸೋಲನುಭವಿಸಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ತಂಡ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಪಂಜಾಬಿನ 11 ಕಿಂಗ್ಸ ಅನ್ನು ಕಟ್ಟಿ ಹಾಕದಿದ್ದರೆ ರಾಜಸ್ಥಾನಕ್ಕೆ ಬೇರೆ ದಾರಿಯೇ ಇಲ್ಲ. ಆದರೆ ಪಂಜಾಬ್ ಅಷ್ಟು ಸುಲಭವಾಗಿ ಗೆಲುವನ್ನು ಬಿಟ್ಟುಕೊಡುವ ಸಾಧ್ಯತೆಯಿಲ್ಲ.
ಮೂದಲಿಕೆಗೆ ಒಳಗಾಗುತ್ತಿರುವ ಯುವರಾಜ್, ಗೇಲ್ ಇಂದಿನ ಪಂದ್ಯದಲ್ಲಿ ಪಂಜಾಬ್ ಪರ ಬ್ಯಾಟ್ ಬೀಸುವ ಸಾಧ್ಯತೆ ಹೆಚ್ಚಿದೆ. ಇವರೊಂದಿಗೆ ಮಿಲ್ಲರ್, ರಾಹುಲ್, ಮನೋಜ್ ತಿವಾರಿ, ಫಿಂಚ್ ಕೂಡ ಸಾಥ್ ನೀಡುವ ಸಂಭವವಿದೆ. ರಾಜಸ್ಥಾನ್ ತಂಡಕ್ಕೆ ಇವತ್ತು ಬಟ್ಲರ್, ರಹಾನೆ, ಸಂಜು ಸ್ಯಾಮ್ಸನ್ ಬೆಂಬಲ ಬೇಕೇಬೇಕಿದೆ. ಒಟ್ಟಿನಲ್ಲಿ ಇಂದಿನ ಕದನ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications