ಆರ್ ಸಿಬಿಗೆ ಟಾಂಗ್, #ESCN ಎಂದ ಕೆಎಲ್ ರಾಹುಲ್

ಬೆಂಗಳೂರು, ಏಪ್ರಿಲ್ 23: ಈ ಸಲ ಕಪ್ ನಮ್ದೆ (#ESCN) ಎಂಬುದು ಆರ್‌ಸಿಬಿ ಅಭಿಮಾನಿಗಳ ಅಘೋಷಿತ ಧ್ಯೇಯ ವಾಕ್ಯ. ಐಪಿಎಲ್ ಆರಂಭದಿಂದಲೂ ಸಾಮಾಜಿಕ ಜಾಲಾತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುವಲ್ಲಿ ಅಭಿಮಾನಿಗಳು ಯಶಸ್ವಿಯಾಗಿದ್ದಾರೆ. ಅಭಿಮಾನಿಗಳಲ್ಲದೆ, ಆರ್ ಸಿಬಿ ಆಟಗಾರರು ಕೂಡಾ 'ಈ ಸಲ ಕಪ್ ನಮ್ದೆ' ಎಂದು ಹೇಳಿ, ಅಭಿಮಾನಗಳ ಕಿಚ್ಚು ಇನ್ನಷ್ಟು ಹೆಚ್ಚಿಸಿದರು.
ಆದರೆ, ಈಗ ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿರುವ ಕರ್ನಾಟಕದ ಆಟಗಾರರಾದ ಕೆ. ಎಲ್. ರಾಹುಲ್ ಹಾಗೂ ಕರುಣ್ ನಾಯರ್ ಅವರಿಬ್ಬರಿರುವ ಕೆಲ ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕೆಕೆಆರ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ತಂಡದವರು ಸಂಭ್ರಮಾಚರಣೆ ವೇಳೆಯಲ್ಲಿ ಮಾಡಿದ ವಿಡಿಯೋ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
ಐಪಿಎಲ್ 2018ರ ವಿಶೇಷ ಪುಟ | ಆರ್ ಸಿಬಿ ವೇಳಾಪಟ್ಟಿ | ಪಂಜಾಬ್ ವೇಳಾಪಟ್ಟಿ
ಡ್ರೆಸ್ಸಿಂಗ್ ರೂಮಿನಲ್ಲಿ ಗೆಲುವಿನ ಸಂಭ್ರಮ ಕರುಣ್ ಹಾಗೂ ರಾಹುಲ್ ಅವರು ಸೆಲ್ಫಿ ವಿಡಿಯೋದಲ್ಲಿ ತಲೆ ಮೇಲಿದ್ದ ಕ್ಯಾಪ್ ತೆಗೆದು ಹಾಕಿ ರಾಹುಲ್, 'ಈ ಸಲ ಕಪ್ ನಮ್ಮದೆ ಗುರು, ಹೇಳ್ಬಿಡು ಎಲ್ರಿಗೂ' ಎಂದು ಕರುಣ್ ಗೆ ಹೇಳುತ್ತಾರೆ.
2016ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಕೆಎಲ್ ರಾಹುಲ್ ಅವರು ಐಪಿಎಲ್ 10ರಲ್ಲಿ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ.
ಈ ಬಾರಿಯ ಹರಾಜಿನಲ್ಲಿ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರನ್ನು ಕಿಂಗ್ಸ್ ಇಲೆವೆನ್ ಫ್ರಾಂಚೈಸಿ ಖರೀದಿಸಿತ್ತು. ಇವರಿಬ್ಬರಲ್ಲದೆ, ಕರ್ನಾಟಕದ ಮಯಾಂಕ್ ಅಗರವಾಲ್ ಅವರು ಕೂಡಾ ಪಂಜಾಬ್ ಪರ ಆಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications